Advertisement

ರಫೇಲ್‌ ಡೀಲ್‌: ಎಚ್‌ಎಎಲ್‌ ಕಡೆಗಣಿಸಿದ್ದು ಕಾಂಗ್ರೆಸ್‌

12:43 PM Oct 01, 2018 | Team Udayavani |

ಬೆಂಗಳೂರು: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿ ವಾಸ್ತವವಾಗಿ ಪ್ರತಿಷ್ಟಿತ ಎಚ್‌ಎಎಲ್‌ ಅನ್ನು ಕಡೆಗಣಿಸಿದ್ದು ಸ್ವತಃ ಕಾಂಗ್ರೆಸ್‌ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದರು. 

Advertisement

ರಫೇಲ್‌ ಒಪ್ಪಂದದ ಮೂಲಕ ಕೇಂದ್ರ ಸರ್ಕಾರ ಎಚ್‌ಎಲ್‌ನ ಉದ್ಯೋಗಗಳನ್ನು ಕಿತ್ತುಕೊಂಡಿತು ಎಂದು ಕಾಂಗ್ರೆಸ್‌ ಬೊಬ್ಬೆಹಾಕುತ್ತಿದೆ. ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಪ್ರಸ್ತಾವನೆ ಯುಪಿಎ ಅಧಿಕಾರಾವಧಿಯಲ್ಲಿ ಸಲ್ಲಿಕೆಯಾಗಿತ್ತು. ಆ ಪ್ರಸ್ತಾವನೆ ಪೂರ್ಣ ಒಪ್ಪಂದಕ್ಕೆ ಕಾಂಗ್ರೆಸ್‌ ಯಾಕೆ ಮುಂದಾಗಲಿಲ್ಲ. ಎಚ್‌ಎಎಲ್‌ಗಾಗಿ ಕಾಂಗ್ರೆಸ್‌ ಮಾಡಿದ್ದೇನು? ಎಂದು ಪ್ರಶ್ನಿಸಿದ್ದಾರೆ.

ನಗರದ ಯಲಹಂಕ ವಾಯುನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎಚ್‌ಎಎಲ್‌ ಲಘು ಯುದ್ಧವಿಮಾನಗಳ ಉತ್ಪಾದನಾ ಸಾಮರ್ಥ್ಯ ದುಪ್ಪಟ್ಟಾಗಿದೆ. 2006ರಿಂದ 2010 ಅವಧಿಯಲ್ಲಿ ಒಟ್ಟಾರೆ 40 ವಿಮಾನಗಳನ್ನು ತಯಾರಿಸಲಾಗಿದೆ.

2010 ರಿಂದ 14ರ ಅವಧಿಯಲ್ಲಿ ವಾರ್ಷಿಕ ಎಂಟು ಯುದ್ಧವಿಮಾನಗಳನ್ನು ತಯಾರಿಸಲಾಗಿತ್ತು. ಆದರೆ, 2014 ರಿಂದ ಈಚೆಗೆ ವರ್ಷಕ್ಕೆ 16 ಯುದ್ಧವಿಮಾನಗಳ ಪೂರೈಕೆಯಾಗುತ್ತಿದೆ. ಇದು ನಮ್ಮ ಸರ್ಕಾರದ ಸಾಧನೆ. ವಾಸ್ತವ ಈಗಿರುವಾಗ ಕಾಂಗ್ರೆಸ್‌ ನಮ್ಮ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಹರಿಹಾಯ್ದರು.

ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹತಾಶೆ ಹೇಳಿಕೆ ನೀಡುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಮಾಡುತ್ತಿರುವ ಅಭಿಯಾನ ಅರ್ಧ ಸತ್ಯದಿಂದ ಕೂಡಿದೆ. ತಾನು ಅಧಿಕಾರದಲ್ಲಿದ್ದಾಗ ಎಚ್‌ಎಎಲ್‌ ಅನ್ನು ಬಲಪಡಿಸಲು ಮನಸ್ಸು ಮಾಡದವರು ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

“ಪರಾಕ್ರಮ ಪಥ’: ಸರ್ಜಿಕಲ್‌ ಸ್ಟ್ರೈಕ್‌ ಸಮರ್ಥಿಸಿಕೊಂಡ ಸಚಿವೆ, ಪಾಕ್‌ ಕೃತ್ಯವನ್ನು ನೋಡಿಕೊಂಡು ಸುಮ್ಮನೆ ಕೂರಲು ಆಗಲಿಲ್ಲ, ಅದಕ್ಕಾಗಿ 2016 ಸೆ.28 ರಂದು ನಿರ್ದಿಷ್ಟ ದಾಳಿ ನಡೆಸಲಾಯಿತು. ಪಾಕ್‌ನ ಇಂತಹ ಕೃತ್ಯಗಳಿಗೆ ಪ್ರತ್ಯುತ್ತರ ನೀಡುವ ಸಂದೇವನ್ನು ತಲುಪಿಸುವಂತಹ “ಪರಾಕ್ರಮ ಪಥ’ ಕಾರ್ಯಕ್ರವನ್ನು 53 ಕಡೆಗಳಲ್ಲಿ ಹಮ್ಮಿಕೊಂಡಿದ್ದೇವೆ.

ಆದರೆ ಕೆಲವರು ಇದನ್ನು ರಾಜಕೀಯ ಕಾರಣಕ್ಕಾಗಿ ಟೀಕಿಸುತ್ತಿದ್ದಾರೆ. ಅಂತಹವರು ಶತ್ರುಗಳ ಜತೆ ಕೈಜೋಡಿಸಿದ್ದಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.  ಏರೋ ಇಂಡಿಯಾ ಶೋ ಕುರಿತು ಪ್ರತಿಕ್ರಿಯಿಸಿ, ಈ ಬಾರಿ ವೈಮಾನಿಕ ಪ್ರದರ್ಶನದ ಲಖೊ°àದಲ್ಲಿ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮನವಿ ಮಾಡಿದ್ದ ನಿಜ.

ಆದರೆ, ಈಗೆ ಕೇಳುವ ಹಕ್ಕು ಇಲ್ಲವೇ? ಉತ್ತರ ಪ್ರದೇಶದಲ್ಲಿಯೂ ಎಚ್‌ಎಎಲ್‌ ಇದೆ. ವೈಮಾನಿಕ ಕ್ಷೇತ್ರಕ್ಕೆ ಪೂರಕ ವಾತಾವರಣ ಹಾಗೂ ಪ್ರದರ್ಶಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸುವಂತೆ ಬೇಡಿಕೆ ಬಂದಿತ್ತು. ಅಂತಿಮವಾಗಿ ಬೆಂಗಳೂರಿನಲ್ಲೇ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next