ಬೆಂಗಳೂರು: ಭಾರತೀಯ ಮೂಲದ ನ್ಯೂಜಿಲ್ಯಾಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಅವರು ಈ ಬಾರಿಯ ವಿಶ್ವಕಪ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಚೊಚ್ಚಲ ಕೂಟದಲ್ಲಿಯೇ ಮೂರು ಶತಕಗಳೊಂದಿಗೆ ಐನೂರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ರಚಿನ್ ರವೀಂದ್ರ ಅವರ ತಂದೆ ತಾಯಿ ಬೆಂಗಳೂರಿನವರು. ಉದ್ಯೋಗ ನಿಮಿತ್ತ ಅವರು ದಶಕಗಳಿಂದ ಅವರು ನ್ಯೂಜಿಲ್ಯಾಂಡ್ ನಲ್ಲಿ ನೆಲೆಸಿದ್ದಾರೆ. ರಚಿನ್ ರವೀಂದ್ರ ಅವರು ನ್ಯೂಜಿಲ್ಯಾಂಡ್ ಪರವಾಗಿ ಆಡುತ್ತಿದ್ದು, ಈ ಬಾರಿಯ ವಿಶ್ವಕಪ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಗುರುವಾರ ನ್ಯೂಜಿಲ್ಯಾಂಡ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಾಡಿತ್ತು. ಇದೀಗ ಬೆಂಗಳೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ರಚಿನ್ ರವೀಂದ್ರ ಭೇಟಿ ನೀಡಿದ್ದಾರೆ.
ರಚಿನ್ ಅವರ ಅಜ್ಜಿ ಮೊಮ್ಮಗನ ದೃಷ್ಟಿ ತೆಗೆಯುವ ವಿಡಿಯೋ ವೈರಲ್ ಆಗಿದೆ. ನ್ಯೂಜಿಲ್ಯಾಂಡ್ ನ ಯುವ ಆಲ್‌ರೌಂಡರ್ ತನ್ನ ಭಾರತೀಯ ಆಚರಣೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.