ರಬಕವಿ-ಬನಹಟ್ಟಿ: ಇಲ್ಲಿನ ಎಸ್.ಆರ್.ಎ ಮೈದಾನದಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ರಂಗೋತ್ಸವ 2023 ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ರಂಗೋತ್ಸವದ ಅಂಗವಾಗಿ ಬೆಂಗಳೂರಿನ ಆಲ್ ಓಕೆ ಡಿಜೆ ಮ್ಯೂಸಿಕಲ್ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಬ್ಬರದ ಹಾಡು ಮತ್ತು ಸಂಗೀತಗಳಿಗೆ ಪಾಲ್ಗೊಂಡಿದ್ದ ಸಾವಿರಾರು ಯುವಕರು ಯುವತಿಯುರು ಕುಣಿದು ಕುಪ್ಪಳಿಸಿದರು.
ರಂಗೋತ್ಸವದ ಸಂದರ್ಭದಲ್ಲಿ ಬಣ್ಣದ ಮಳೆಯೇ ಸುರಿಯಿತು. ಯುವಕರು ಕನ್ನಡ ಮತ್ತು ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ವಿದ್ಯಾಧರ ಸವದಿ, ರಾಜು ಬಗನಾಳ, ಆನಂದ ಕಂಪು, ಶಿವಾನಂದ ಗಾಯಕವಾಡ ನೇತೃತ್ವದಲ್ಲಿ ನಡೆದ ರಂಗೋತ್ಸವದಲ್ಲಿ ರಬಕವಿ, ಬನಹಟ್ಟಿ,ರಾಮಪುರ, ಹೊಸೂರ, ಮಹಾಲಿಂಗಪುರದ, ತೇರದಾಳ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳ ಸಾವಿರಾರು ಯುವಕರು ಭಾಗವಹಿಸಿದ್ದರು.
ರವಿ ಕೊರ್ತಿ, ಈಶ್ವರ ಪಾಟೀಲ, ಚಿದಾನಂದ ಹೊರಟ್ಟಿ, ರಾಜು ಬಾಣಕಾರ, ದುರ್ಗವ್ವ ಹರಿಜನ. ಸುವರ್ಣಾ ಕೊಪ್ಪದ, ಸಂಗೀತಾ ಖಾನಾಪುರ, ಮೀನಾಕ್ಷಿ ಸವದಿ, ಅನುರಾಧ ಹೊರಟ್ಟಿ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ಪವಿತ್ರಾ ತುಕ್ಕನವರ, ಶೈಲಜಾ ಹೊಸಕೋಟಿ, ಶಿವಾನಂದ ಬುದ್ನಿ, ಅರುಣ ಬುದ್ನಿ, ಪ್ರಭು ಪೂಜಾರಿ, ಪಾಂಡುರಂಗ ಸಾಲ್ಗುಡೆ ಸೇರಿದಂತೆ ಅನೇಕರು ಇದ್ದರು. ರಂಗೋತ್ಸವ ಕಾರ್ಯಕ್ರಮದಿಂದಾಗಿ ಕುಡಚಿ ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಎರಡು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು.
ರಬಕವಿಯ ಶಂಕರಲಿಂಗ ದೇವಸ್ಥಾನದ ಹತ್ತಿರ ಕಿರಣ ದೇಸಾಯಿ ನೇತೃತ್ವದಲ್ಲಿ ನಡೆದ ರಂಗ ಸಂಭ್ರಮ ಕಾರ್ಯಕ್ರಮ ನಡೆಯಿತು. ಶ್ರೀಕಾಂತ ಕೆಂದೂಳಿ, ಚಿದಾನಂದ ಸೊಲ್ಲಾಪುರ, ರಾಮಣ್ಣ ಹುಲಕುಂದ, ಶ್ರೀಶೈಲ ಭಯ್ಯಾರ, ಈರಣ್ಣ ಗುಣಕಿ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ:
Photo Gallery: ಹೋಳಿ ಬಣ್ಣದಲ್ಲಿ ಮಿಂದೆದ್ದ ಆರ್ ಸಿಬಿ ಬೆಡಗಿಯರು