Advertisement

Tulu Movie “ರಾಪಟ’ ತುಳು ಚಲನಚಿತ್ರ ತೆರೆಗೆ

11:32 PM Dec 01, 2023 | Team Udayavani |

ಮಂಗಳೂರು: ಬೊಳ್ಳಿ ಮೂವೀಸ್‌ ಹಾಗೂ ಅವಿಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಡಾ| ದೇವದಾಸ್‌ ಕಾಪಿಕಾಡ್‌ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್‌ ಕಾಪಿಕಾಡ್‌ ನಿರ್ದೇಶನದ “ರಾಪಟ’ ತುಳು ಚಲನಚಿತ್ರ ಶುಕ್ರವಾರ ಕರಾಳಿಯಾದ್ಯಂತ ತೆರೆ ಕಂಡಿದೆ.

Advertisement

ಡಾ| ದೇವದಾಸ್‌ ಕಾಪಿಕಾಡ್‌ ಉದ್ಘಾಟಿಸಿ ಮಾತಾಡಿ, ತುಳುವರಿಗೆ ಒಂದು ಉತ್ತಮ ಗುಣಮಟ್ಟದ ಸಿನೆಮಾ ನೀಡಬೇಕು ಎಂಬ ಉದ್ದೇಶದಿಂದ “ರಾಪಟ’ ಚಲನಚಿತ್ರ ಮಾಡಿದ್ದೇವೆ. ಎಲ್ಲರೂ ಪ್ರೀತಿಯಿಟ್ಟು ಚಿತ್ರಮಂದಿರಕ್ಕೆ ಬಂದು ಚಲನಚಿತ್ರ ನೋಡಿದರೆ ನಮ್ಮ ಪ್ರಯತ್ನ ಸಾರ್ಥಕ. ತುಳು ಭಾಷೆಯಲ್ಲಿ ಬರುವ ಎಲ್ಲ ಸಿನೆಮಾಗಳನ್ನೂ ತುಳುವರು ಪ್ರೋತ್ಸಾಹಿಸಬೇಕು ಎಂದರು.

ಹರೀಶ್‌ ಶೇರಿಗಾರ್‌ ಮಾತನಾಡಿ, ಒಳ್ಳೆಯ ಸಿನೆಮಾಗಳನ್ನು ಖಂಡಿತಾ ತುಳುವರು ಪ್ರೋತ್ಸಾಹಿಸುತ್ತಾರೆ ಎಂದರು.

ಹಾಸ್ಯ ದಿಗ್ಗಜರ ಸಮಾಗಮ: ತುಳುನಾಡಿನ ಹಾಸ್ಯ ದಿಗ್ಗಜರು ರಾಪಟ ಚಿತ್ರದಲ್ಲಿ ನಟಿಸಿದ್ದು, ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ. ಸಂಪೂರ್ಣ ಹಾಸ್ಯ, ಮನೋರಂಜನೆಯ “ರಾಪಟ’ದಲ್ಲಿ ಉತ್ತಮ ಕತೆ ಇದೆ. ಅನೂಪ್‌ ಸಾಗರ್‌ ನಾಯಕ ನಟನಾಗಿ ಹಾಗೂ ನಿರೀಕ್ಷಾ ಶೆಟ್ಟಿ ನಾಯಕಿಯ ಪಾತ್ರದಲ್ಲಿದ್ದಾರೆ. ದೇವದಾಸ್‌ ಕಾಪಿಕಾಡ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್‌ ರೈ ಪಾಣಾಜೆ, ರೂಪಶ್ರೀ ವರ್ಕಾಡಿ , ಪ್ರಕಾಶ್‌ ತೂಮಿನಾಡು, ವಿಕೀಶಾ, ರವಿರಾಮ ಕುಂಜ ಮುಂತಾದವರು ನಟಿದ್ದಾರೆ.

ಸಹ ನಿರ್ದೇಶಕರಾಗಿ ಶನಿಲ್‌ ಗುರು, ಸಿನೆಮಾಟೋಗ್ರಾಫರ್‌ ಅಗಿ ಸಚಿನ್‌ ಎಸ್‌. ಶೆಟ್ಟಿ, ಎಕ್ಸಿಕ್ಯೂಟಿವ್‌ ಪ್ರೊಡ್ನೂಸರ್‌ ಸಂದೀಪ್‌ ಶೆಟ್ಟಿ, ಎಡಿಟರ್‌ ಯಶ್ವಿ‌ನ್‌ ಕೆ. ಶೆಟ್ಟಿಗಾರ್‌, ಸಂಗೀತ ಪ್ರಸಾದ್‌ ಕೆ. ಶೆಟ್ಟಿ, ನಿರ್ಮಾಪಕರಾಗಿ ಸಂತೋಷ್‌ ಸುವರ್ಣ, ಸೂರ್ಯಕಾಂತ್‌ ಸುವರ್ಣ, ರಾಜನ್‌ ರಾಕೇಶ್‌ ಶೆಟ್ಟಿ, ಆಶಿಕಾ ಸುವರ್ಣ, ದೇವಿಕಾ ಆಚಾರ್ಯ, ಶೈಲರಾಜ್‌ ಪೂಜಾರಿ, ಅಭಿ ಶೆಟ್ಟಿ, ಮನೋಜ್‌ ಶೆಟ್ಟಿ, ಯಕ್ಷಿತ್‌ ಶೆಟ್ಟಿ, ಮಧು ಕುಮಾರ್‌ ಕಾರ್ಯನಿರ್ವಹಿಸಿದ್ದಾರೆ.

Advertisement

ವೇದಿಕೆಯಲ್ಲಿ ಶರ್ಮಿಳಾ ಕಾಪಿಕಾಡ್‌, ಚಿತ್ರ ನಿರ್ದೇಶಕ ಅರ್ಜುನ್‌ ಕಾಪಿಕಾಡ್‌, ಮನಪಾ ಸದಸ್ಯ ಕಿರಣ್‌ ಕೋಡಿಕಲ್‌, ಚಿತ್ರವಿತರಕ ಸಚಿನ್‌ ಎ.ಎಸ್‌. ಉಪ್ಪಿನಂಗಡಿ, ಕೆಮರಾಮನ್‌ ಸಚಿನ್‌ ಶೆಟ್ಟಿ, ಶನಿಲ್‌ ಗುರು, ಚಿತ್ರ ನಿರ್ಮಾಪಕ ಹರೀಶ್‌ ಶೇರಿಗಾರ್‌, ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್‌. ಧನರಾಜ್‌, ಭೋಜರಾಜ್‌ ವಾಮಂಜೂರ್‌, ಅನೂಪ್‌ ಸಾಗರ್‌, ನಿರೀಕ್ಷಾ ಶೆಟ್ಟಿ, ಕಾವ್ಯ ಅರ್ಜುನ್‌ ಕಾಪಿಕಾಡ್‌, ದಿವ್ಯಾ ಸಚಿನ್‌ ಶೆಟ್ಟಿ, ಅನಿಲ್‌ ರಾಜ್‌ ಉಪ್ಪಳ, ಯತೀಶ್‌ ಬೈಕಂಪಾಡಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಸಂತೋಷ್‌ ಸುವರ್ಣ, ನಿರ್ಮಾಪಕಿ ಆಶಿಕಾ ಸುವರ್ಣ, ದಿನೇಶ್‌ ಶೆಟ್ಟಿ, ಹರಿ, ಕಿಶೋರ್‌ ಕೊಟ್ಟಾರಿ, ಅಶ್ವಿ‌ಥ್‌ ಕೊಟ್ಟಾರಿ ಉಪಸ್ಥಿತರಿದ್ದರು.
ಲಕ್ಷ್ಮೀಶ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next