Advertisement

ಎದೆ ಬಡಿತ ಜೋರಾಗಿದೆ; ಏಕ್‌ ಲವ್‌ ಯಾ ಮೇಲೆ ರಾಣಾ ಡ್ರೀಮ್

09:57 AM Feb 25, 2022 | Team Udayavani |

ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದ ಮೂಲಕ ನವನಟ ರಾಣಾ ಲಾಂಚ್‌ ಆಗಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

“ರಾಣಾ’ ಕೂಡಾ ಖುಷಿಯಾಗಿದ್ದಾರೆ. “ಇದು ಎಲ್ಲಾ ವರ್ಗದವರು ನೋಡುವ ಸಿನಿಮಾ. ಚಿತ್ರದಲ್ಲಿ ಲವ್‌ಸ್ಟೋರಿ, ಸೆಂಟಿಮೆಂಟ್‌, ಸಾಮಾಜಿಕ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನಗೊಂದು ದೊಡ್ಡ ಲಾಂಚ್‌ ಕೂಡಾ ಸಿಕ್ಕಿದೆ’ ಎನ್ನುವುದು ರಾಣಾ ಮಾತು.

ಅಂದಹಾಗೆ, ರಾಣಾ ನಾಯಕ ನಟನಾಗುವ ಮುನ್ನ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರೆ. ಡ್ಯಾನ್ಸ್‌, ಫೈಟ್‌, ನಟನೆಯ ಜೊತೆಗೆ ಪ್ರೇಮ್‌ ನಿರ್ದೇಶನದ “ವಿಲನ್‌’ ಚಿತ್ರದಲ್ಲಿ ಪ್ರೇಮ್‌ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಸುದೀಪ್‌ ಅವರ ಪಾತ್ರದ ಮಾನಿಟರ್‌ ಶಾಟ್‌ ಅನ್ನು ರಾಣಾ ಅವರೇ ಮಾಡಿ, ತೋರಿಸುತ್ತಿದ್ದರಂತೆ.

ಇದನ್ನೂ ಓದಿ:ಗಡಿನಾಡಿನ ಕನ್ನಡಿಗರಿಗೆ ಗುದ್ದು : ಕೇರಳ ಸರಕಾರಿ ಉದ್ಯೋಗಕ್ಕೆ ಮಲಯಾಳ ಕಡ್ಡಾಯ

ಇನ್ನು, ಚಿತ್ರದ ಬಿಡುಗಡೆಯಾಗಿರುವ ಎಲ್ಲಾ ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ. ಆರಂಭದಲ್ಲಿ ಬಿಟ್ಟ ಹುಡುಗಿಯರ ಬ್ರೇಕಪ್‌ ಸಾಂಗ್‌ ಆಗಿ ಹೊರಬಂದ “ಎಣ್ಣೆಗೂ ಹೆಣ್ಣಿಗೂ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಅದರ ಬೆನ್ನಲ್ಲೇ ಈಗ ಹುಡುಗರ ಬ್ರೇಕಪ್‌ ಸಾಂಗ್‌ ರಿಲೀಸ್‌ ಆದ “ಒಂದು ಊರಲಿ..ಕೊನೆ ಬೀದಿಲಿ, ಇದ್ಳು ಒಬ್ಬಳು ಮುದ್ದು ದೇವತೆ…’ ಎಂದು ಆರಂಭವಾಗುವ ಹಾಡು ಸಿನಿಪ್ರೇಮಿಗಳ ಮನಗೆದ್ದಿದೆ. ಇದರ ಜೊತೆಗೆ “ಡೇಟ್‌ ಮಾಡೋಣ ಇಲ್ಲ, ಮೀಟ್‌ ಮಾಡೋಣ’ ಹಾಡು ಕೂಡಾ ಹಿಟ್‌ ಆಗಿದ್ದು, ಸಿನಿಮಾದ ಕ್ರೇಜ್‌ ಹೆಚ್ಚಿದೆ ಎನ್ನುವುದು ರಾಣಾ ಮಾತು. ರಕ್ಷಿತಾ ಫಿಲಂ ಫ್ಯಾಕ್ಟರಿಯಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next