ಬೆಂಗಳೂರು: ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಶುಭಕೋರಿದರು.
ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ “ಕಬ್ಜ”ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಜಗತ್ತಿನಾದ್ಯಂತ ಜನಪ್ರಿಯವಾಗಿದೆ.
Related Articles
ಇತ್ತೀಚೆಗೆ ರಿಲೀಸ್ ಆದ ʼನಮಾಮಿ ನಮಾಮಿʼ ಹಾಗೂ ಚುಮ್ ಚುಮ್ ಚಳಿʼ ಹಾಡು ಸದ್ದು ಮಾಡಿದೆ. ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ ಎನ್ನುವ ಅಪ್ಡೇಟ್ ಲೇಟಾಗಿ ಬಂದರೂ ಅದನ್ನು ಕೇಳಿ ಪ್ಯಾನ್ಸ್ ಗಳು ಥ್ರಿಲ್ ಆಗಿದ್ದಾರೆ.
70 ದಶಕದಲ್ಲಿ ಆಡಳಿತಕ್ಕಾಗಿ ಸಾಮ್ರಾಜ್ಯ ಕಟ್ಟಿದ ಕುಳಗಳ ವಿರುದ್ಧ ಮಚ್ಚು ಹಿಡಿದು, ಉಪ್ಪಿ ಅಬ್ಬರಿಸಿದ್ದಾರೆ. ʼಭಾರ್ಗವ ಭಕ್ಷಿʼಯಾಗಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಅದ್ಧೂರಿ ಮೇಕಿಂಗ್ ದೃಶ್ಯ, ಮ್ಯೂಸಿಕ್ ನಿಂದ ಟ್ರೇಲರ್ ಗಮನ ಸೆಳೆಯುತ್ತದ. ಪಾಪಿಗಳ ಕೈಯಲ್ಲಿ ಸಿಕ್ಕಾಕ್ಕಿಕೊಂಡ ಅಮಾಯಕರನ್ನು ರಕ್ಷಿಸಲು ಉಪ್ಪಿ ಇಲ್ಲಿ ʼಕಬ್ಜʼ ಅವತಾರವನ್ನು ಎತ್ತಿದ್ದಾರೆ.
ಶ್ರೀಯಾ ಶರಣ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂ ಮ್ಯೂಸಿಕ್ ಚಿತ್ರಕ್ಕಿದೆ. ಅಂದ ಹಾಗೆ ಸಿನಿಮಾ ಇದೇ ಮಾರ್ಚ್ 17 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.