ಬೀದರ್: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಭಾಗವಾಗಿ ಔರಾದ ತಾಲೂಕಿನ ವಡಗಾಂವ(ಡಿ) ಗ್ರಾಮದಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ನಡೆಸಲಿರುವ ಕಂದಾಯ ಸಚಿವ ಆರ್. ಅಶೋಕ ಅವರನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಗುರುವಾರ ರಾತ್ರಿ ಬೀದರ್ ಗೆ ಆಗಮಿಸಿದ್ದ ಸಚಿವರು ಶುಕ್ರವಾರ ನೇರವಾಗಿ ವಡಗಾಂವ ಗ್ರಾಮಕ್ಕೆ ಆಗಮಿಸಿದರು. ಕನಕದಾಸ ವೃತ್ತದಲ್ಲಿ ಅದ್ದೂರಿಯಾಗಿ ಬರಮಾಡಿ ಕೊಳ್ಳಲಾಯಿತು. ಬಳಿಕ ಅಲಂಕೃತ ಟ್ರ್ಯಾಕ್ಟರ್ ನಲ್ಲಿ ಸಚಿವ ಅಶೋಕ ಅವರ ಮೆರವಣಿ ನಡೆಸಲಾಯಿತು. ಜಿಲ್ಲೆಯ ಸಚಿವರು, ಶಾಸಕರು ಮತ್ತು ಗಣ್ಯರು ಸಚಿವರಿಗೆ ಸಾಥ್ ನೀಡಿದರು.
ಇದನ್ನೂ ಓದಿ:ದೇಶಕ್ಕೆ ಅಪಾಯವಿರುವುದು ಕುಟುಂಬವಾದಿ ಪಕ್ಷದಿಂದಲ್ಲ,ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ:ಎಚ್ಡಿಕೆ
ಮೆರವಣಿಗೆಯು ಬೊಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ ಮತ್ತು ಅಂಬೇಡ್ಕರ ವೃತ್ರದ ಮೂಲಕ ಸಾಗಿತು. ಮಾರ್ಗ ಮಧ್ಯದ ಬಸವೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಮಹಿಳೆಯರು ಕುಂಭ ಕಳಸ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಸರ್ಕಾರಿ ಕನ್ಯಾ ಪ್ರಢ ಶಾಲೆ ಮಕ್ಕಳ ನೃತ್ಯ, ಕೋಲಾರದ ತಮಟೆ, ಬಸವಕಲ್ಯಾಣದ ಡೊಳ್ಳು ಕುಣಿತ, ಭಾಲ್ಕಿಯ ಲಮ್ಹಾಣಿ ನೃತ್ಯ, ಚಿಕ್ಲಿ ಗ್ರಾಮದ ಮಹಿಳಾ ತಮಟೆ, ಔರಾದನ ಕೋಲಾಟ ತಂಡ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.
ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ, ಬಸವಕಲ್ಯಾಣ ಶಾಸಕ ಶರಣು ಸಲಗರ, ಜಿಲ್ಲಾಧಿಕಾರಿ ಗೋವಿಂದ ರೆಡ್ಟಿ, ಜಿ.ಪಂ ಸಿಇಒ ಜಹೀರಾ ನಸೀಮ್, ಎಸ್.ಪಿ ಕಿಶೋರ ಬಾಬು, ಜಿ.ಪಂ ಮಾಜಿ ಸದಸ್ಯ ಡಿ.ಕೆ ಸಿದ್ರಾಮ, ಗ್ರಾಮದ ಪ್ರಮುಖರಾದ ಬಸವರಾಜ ದೇಶಮುಖ,ಪ್ರಕಾಶ ಮೇತ್ರೆ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.