ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ನಗರದ ಹೊರವಲಯದಲ್ಲಿ 82.75 ಲಕ್ಷ ರೂ. ಅನಧಿಕೃತ ಹಣ ಪತ್ತೆಯಾಗಿದೆ.
ಕೇಶ್ವಾಪುರ ಇನ್ಸ್‌ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಶುಕ್ರವಾರ ರಾತ್ರಿ ಇಲ್ಲಿನ ಕುಸುಗಲ್ಲ ರಸ್ತೆ ಆಕ್ಸ್‌ಫರ್ಡ್ ಕಾಲೇಜ್ ಬಳಿ ತಪಾಸಣೆ ಕೈಗೊಂಡ ವೇಳೆ ದಾಖಲೆಗಳಿಲ್ಲದ ಹಣ ಪತ್ತೆಯಾಗಿದ್ದು,ಹವಾಲಾ ಹಣವೆಂದು ಶಂಕಿಸಲಾಗಿದೆ.
ರಾಜಸ್ಥಾನ ಮೂಲದ ಬಾಗಲಕೋಟೆಯ ಚಾಲಕನು ಕಾರಿನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದಾಗ ತಪಾಸಣೆ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾರು ಚಾಲಕ ಹಾಗೂ ಹಣ ವಶಕ್ಕೆ ಪಡೆದ ಕೇಶ್ವಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಣದ ಮೂಲ ಪತ್ತೆ ಹಚ್ಚುತ್ತಿದ್ದಾರೆ.
ಈ ಹಣ ವಿಜಯಪುರದ ಪಂಪ್ ಸೆಟ್ ಹಾಗೂ ಎಲೆಕ್ಟ್ರಿಕಲ್ ಅಂಗಡಿಯೊಂದರ ಮಾಲೀಕನಿಗೆ ಸೇರಿದ್ದು ಎನ್ನಲಾಗುತ್ತಿದೆ. ತನಿಖೆ ಮುಂದುವರೆದಿದೆ.