Advertisement

ಸುಮ್ಮನೆ ರಾಜೀನಾಮೆ ನೀಡಿಲ್ಲ: ಪ್ರಸಾದ್‌

01:06 PM Mar 14, 2017 | Team Udayavani |

ನಂಜನಗೂಡು: ಸಚಿವ ಸ್ಥಾನದಿಂದ ತೆಗೆದ ಮಾತ್ರಕ್ಕೆ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ, ಸಿಎಂ ಸಿದ್ದರಾಮಯ್ಯನವರ ದಲಿತವಿರೋಧಿ ರಾಜಕಾರಣವನ್ನು ಜನತೆಯ ಮುಂದಿಡುವ ಸಲುವಾಗಿಯೇ ರಾಜೀನಾಮೆ ನೀಡಿದ್ದೇನೆ ಎಂದು ಅಭ್ಯರ್ಥಿ ಶ್ರೀನಿವಾಸ್‌ಪ್ರಸಾದ್‌ ಹೇಳಿದರು.

Advertisement

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತ ನಾಡುತ್ತಿದ್ದ ಅವರು, ತಾವೇನೂ ಸುಮ್ಮನೆ ರಾಜೀನಾಮೆ ನೀಡುವಷ್ಟು ಅನನುಭವಿಯಲ್ಲ. ಆದಕ್ಕೆ ಬಲವಾದ ಕಾರಣವಿದೆ. ಸಿದ್ದರಾಮಯ್ಯನವರ ದಲಿತ ವಿರೋಧಿ ರಾಜಕಾರಣವನ್ನು ಜನತೆ ಮುಂದಿಡುವ ಸಲುವಾಗಿಯೇ ರಾಜೀನಾಮೆ ನೀಡಿದ್ದೇನೆ.

ಮುಖ್ಯಮಂತ್ರಿ ರೇಸಿನಲ್ಲಿದ್ದ ಪರಮೇಶ್ವರರನ್ನು, ಮಗನನ್ನು ಮಂತ್ರಿಯಾಗಿಸಿ ಮಲ್ಲಿಕಾರ್ಜುನ ಖರ್ಗೆಯವರನ್ನು ಹಾಗೂ ಅವಮಾನಿಸಿ ತಮ್ಮನ್ನು ಮುಗಿಸುವ ಹುನ್ನಾರ ನಡೆಸಿದ ಸಿದ್ದರಾಮಯ್ಯನವರು, ಈಗ ಎಚ್‌.ಸಿ. ಮಹೇದವಪ್ಪನವರನ್ನು ದೂರ ಮಾಡಿ ಧ್ರುವರನ್ನು ತಬ್ಬಿಕೊಂಡಿದ್ದಾರೆ ಎಂದು ಟೀಕಿಸಿದರು.

ಸಿಎಂ ಅಭ್ಯರ್ಥಿ ಘೋಷಿಸಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಘೋಷಿಸಿದ್ದಾರೆ. ತಾಕತ್ತಿದ್ದರೆ ನಿಮ್ಮ ಅಧ್ಯಕ್ಷರ ಬಾಯಲ್ಲೂ ನೀವೇ ಮುಂದಿನ ಸಿಎಂ ಎಂದು ಹೇಳಿಸಿ ಎಂದು ಪ್ರಸಾದ್‌ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, 1.63 ಸಾವಿರ ಕೋಟಿ ರೂ. ಬಜೆಟ್‌ ಏನಾಯ್ತು? ಹಣವೆಲ್ಲಾ ಲೂಟಿ ಆಗಿದ್ದೂ ಸುಳ್ಳೇ? ನಿಮ್ಮ ಸಚಿವ ಸಂಪುಟದಲ್ಲಿ ಎಷ್ಟು ಜನ ಪ್ರಾಮಾಣಿಕರು ಇನ್ನೂ ಇದ್ದಾರೆ. ಅವರಲ್ಲಿ ಒಬ್ಬ ಸಚಿವ ಹೆಸರನ್ನಾದರೂ ಹೇಳುವ ನೈತಿಕತೆಯಾದರೂ ನಿಮ್ಮಲ್ಲಿ ಇದೆಯೇ ಎಂದು ಟೀಕಾ ಪ್ರಹಾರ ನಡೆಸಿದರು. 

Advertisement

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಪ್ರಸಾದರನ್ನು ಗೆಲ್ಲಿಸಿ ಯಡಯೂರಪ್ಪನವರ ಕೈ ಬಲ ಪಡಿಸುವಂತೆ ಮನವಿ ಮಾಡಿದ ಅವರು, ಬಡವರಿಗೆ ನೀಡಬೇಕಾಗಿದ್ದ ಅನ್ನಭಾಗ್ಯದ 27 ಕೇಜಿ ಅಕ್ಕಿ ಏನಾಯಿತು? ಅದನ್ನೂ ತಿಂದು ಕುಳಿತ್ತಿದ್ದೀರಲ್ಲಾ. ಸತತ ಬರಗಾಲ ಕಾಡ್ಗಿಚ್ಚು ಉರಿ ಬಿಸಿಲು ಬಿಟ್ಟರೆ ನಿಮ್ಮ ಕೊಡುಗೆ ರಾಜ್ಯಕ್ಕೇ ಬೇರೇನಿದೆ ಎಂದು ಅವರು ಟೀಕಿಸಿದರು.

ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ, ಪುಟ್ಟಬುದ್ದಿ, ಕೆ.ಆರ್‌. ಮೋಹನ್‌ಕುಮಾರ, ಜಯದೇವು, ಫ‌ಣೀಶ, ಎಸ್‌.ಮಹದೇವಯ್ಯ, ಜಿಪಂ ಸದಸ್ಯ ರಾದ ಸದಾನಂದ, ಗುರುಸ್ವಾಮಿ, ಮಂಗಳ ಸೋಮಶೇಖರ, ಬಿ.ಎಂ. ರಾಮು, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ವಿನಯ್‌ಕುಮಾರ್‌, ಸುಬ್ಬಣ್ಣ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next