Advertisement
1. ಪನೀರ್ ಸ್ಟಿಕ್ಬೇಕಾದ ಸಾಮಗ್ರಿ: ಪನೀರ್-1/4 ಕೆ.ಜಿ, ದೊಣ್ಣೆ ಮೆಣಸಿನ ಕಾಯಿ – 2 ತುಂಡು, ಜೀರಿಗೆ – 1/2 ಚಮಚ, ಟೊಮೆಟೊ, ಮೆಣಸಿನ ಪುಡಿ-1/4 ಚಮಚ, ಕರಿ ಮೆಣಸಿನ ಪುಡಿ -1/4 ಚಮಚ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಬೇಕಾದ ಸಾಮಗ್ರಿ: ಕೊತ್ತಂಬರಿ ಸೊಪ್ಪು- 1 ಕಟ್ಟು, ಹಸಿ ಮೆಣಸಿನಕಾಯಿ- 10, ಎಳ್ಳು- 2 ಚಮಚ, ಗರಂ ಮಸಾಲ- 1 ಚವåಚ, ಕಡಲೆಹಿಟ್ಟು- 125 ಗ್ರಾಂ, ಶುಂಠಿ- 1 ತುಂಡು, ಜೀರಿಗೆ- 1/2 ಚಮಚ, ಬೆಲ್ಲ ಮತ್ತು ಉಪ್ಪು, ರುಚಿಗೆ ತಕ್ಕಷ್ಟು.
Related Articles
Advertisement
3. ಮಿನಿ ಕಟ್ಲೆಟ್ಬೇಕಾದ ಸಾಮಗ್ರಿ: ಕ್ಯಾಬೇಜ್ -1/4 ಕೆಜಿ, ಬಟಾಣಿ-1/4 ಕೆಜಿ, ಆಲೂಗಡ್ಡೆ -1/4 ಕೆಜಿ, ಕ್ಯಾರೆಟ್-100ಗ್ರಾಂ, ಸಣ್ಣ ರವೆ-1/4 ಕೆಜಿ, ಬ್ರೆಡ್-1, ಚಕ್ಕೆತುಂಡುಗಳು-3, ಬೆಳ್ಳುಳ್ಳಿ ಎಸಳು-4, ಲವಂಗ-3, ಈರುಳ್ಳಿ-1, ಹಸಿಮೆಣಸು-3, ಉಪ್ಪು-3/4 ಚಮಚ, ಕೊತ್ತಂಬರಿ ಸೊಪ್ಪು -1ಕಟ್ಟು. ತಯಾರಿಸುವ ವಿಧಾನ: ಆಲೂಗೆಡ್ಡೆ ಬೇಯಿಸಿಡಿ. ಎಲ್ಲಾ ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಬೇಯಿಸಿರಿ. ಬ್ರೆಡ್‌ನ್ನು ನೀರಿನಲ್ಲಿ ನೆನೆಸಿ ತೆಗೆಯಿರಿ. ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಡಿ. ಚಕ್ಕೆ, ಲವಂಗ ಪುಡಿ ಮಾಡಿ.ಬೇಯಿಸಿದ ನೀರನ್ನು ಶೋಧಿಸಿ ಒಂದು ಪಾತ್ರೆಯಲ್ಲಿ ಇಡಿ. ಇವೆಲ್ಲವನ್ನೂ ಆಲೂಗೆಡ್ಡೆ ಜೊತೆಗೆ ಸೇರಿಸಿ ನಂತರ ಈರುಳ್ಳಿ ಹಾಗೂ ಮಸಾಲೆ ಸೇರಿಸಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಹಿಟ್ಟನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ತಟ್ಟಿ ರವೆಯಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕರಿಯಿರಿ. ತವಾದಲ್ಲಿ ಹಾಕಿಯೂ ಬೇಯಿಸಬಹುದು. 4. ವೆಜಿಟೆಬಲ್ ರೋಲ್ಸ್
ಬೇಕಾದ ಸಾಮಗ್ರಿ: ಚಿರೋಟಿ ರವೆ- 1ಕಪ್, ಪಾಲಕ್- 1 ಕಟ್ಟು, ಕಡಲೆ ಹಿಟ್ಟು- 1/4 ಕಪ್, ಗೋಧಿ ಹಿಟ್ಟು- 1/4 ಕಪ್, ಮೊಸರು- 1/4 ಕಪ್, ಜೀರಿಗೆ ಪುಡಿ- 1/4 ಚಮಚ, ಖಾರದ ಪುಡಿ- 1/2 ಚಮಚ, ಅರಿಶಿನ ಪುಡಿ -ಒಂದು ಚಿಟಿಕೆ, ಶುಂಠಿ -1/2 ತುಂಡು, ಹಸಿಮೆಣಸಿನಕಾಯಿ -3, ಕೊತ್ತಂಬರಿ ಸೊಪ್ಪು -1/2 ಕಟ್ಟು, ಇಂಗು, ಸಕ್ಕರೆ ಹಾಗೂ ಉಪ್ಪು ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ: ಗೋಧಿ ಹಿಟ್ಟು, ಕಡಲೆ ಹಿಟ್ಟು ಜರಡಿ ಹಿಡಿದು ಹದವಾಗಿ ಕಲಸಿ. ಅದರ ಜೊತೆಗೆ ಚಿರೋಟಿ ರವೆ, ಹಸಿಮೆಣಸಿನಕಾಯಿ, ಖಾರದ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಚೂರು ಮಾಡಿದ ಪಾಲಕ್ ಶುಂಠಿ ಸೇರಿಸಿ ರೋಲ್ ಮಾಡಿ ಇಡಿ. ಇದನ್ನು ಹಬೆಯ ಮೇಲೆ 10 ನಿಮಿಷ ಬೇಯಿಸಿರಿ. ತಣ್ಣಗಾದ ನಂತರ ಎಲ್ಲವನ್ನೂ ಚೆನ್ನಾಗಿ ಸೇರಿಸಿ. ನಂತರ ಹಿಟ್ಟನ್ನು ಸಮವಾಗಿ ನಾದಿ. ಸ್ವಲ್ಪ ಸ್ವಲ್ಪ ನೀರು ಸೇರಿಸಬಹುದು. 3-4 ರೋಲ್ ಮಾಡಿ ಅದನ್ನು ಹತ್ತು ನಿಮಿಷ ಹಬೆಯ ಮೇಲೆ ಬೇಯಿಸಿ. ನಂತರ ಅದನ್ನು ಎಣ್ಣೆಯಲ್ಲಿ ಕರಿಯಿರಿ. ಸಾಸ್ ಜೊತೆಗೆ ಮಕ್ಕಳಿಗೆ ಸವಿಯಲು ಕೊಡಿ. 5. ಮಕ್ಕಳ ಡಬ್ಬಿ ಸ್ಪೆಶಲ್
ಬೇಕಾದ ಸಾಮಗ್ರಿ: ಬ್ರೆಡ್ ತುಂಡು -2, ಚಿರೋಟಿ ರವೆ-1 ಕಪ್, ಮೊಸರು -1 ಕಪ್, ಹಸಿಮೆಣಸಿನ ಕಾಯಿ-1, ಶುಂಠಿ -1 ಚಿಕ್ಕ ತುಂಡು, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಸಾಸಿವೆ, ಕರಿಬೇವು. ತಯಾರಿಸುವ ವಿಧಾನ: ಶುಂಠಿ ಹಾಗೂ ಹಸಿಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ. ನಂತರ ರವೆ, ಮೊಸರು, ಉಪ್ಪು ಹಾಗೂ ಬ್ರೆಡ್ ಪುಡಿಯನ್ನು ಚೆನ್ನಾಗಿ ಕೈಯಿಂದ ಕಲಸಿರಿ. ಒಗ್ಗರಣೆ ಹಾಕಿ, ಹತ್ತು ನಿಮಿಷ ಹಾಗೇ ಇಡಿ. ಈಗ ಒಂದೊಂದು ಕಟೋರಿಗೆ ಎಣ್ಣೆ ಸವರಿ ಇದನ್ನು ಹಾಕಿ. ಇಡ್ಲಿ ತಟ್ಟೆಯಲ್ಲೂ ಹಾಕಬಹುದು. ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಇದು ಬಲು ರುಚಿ. ಕ್ಯಾರೆಟ್ ತುರಿದು, ಪಾಲಕ್ ಸೇರಿಸಿದರೂ ಆದೀತು. ಹೀರಾ ಆರ್.