Advertisement

ಶೀಘ್ರ ನೂತನ ರಾಯರ ಮಠ ಲೋಕಾರ್ಪಣೆ

04:09 PM Aug 02, 2018 | Team Udayavani |

ಕಂಪ್ಲಿ: ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ನೂತನ ಮಠವನ್ನು ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀಮಠಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ಮಠದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ರಾಯರ ಮಠದ ಭಕ್ತರ ಉದಾರ ದೇಣಿಗೆಯಿಂದ ಮಠದ ಕಾಮಗಾರಿ
ಮುಕ್ತಾಯದ ಹಂತದಲ್ಲಿದೆ. ಮಠಕ್ಕೆ ಮತ್ತು ವಸತಿ ಗೃಹಗಳಿಗೆ ಕಿಡಕಿ, ಬಾಗಿಲುಗಳು, ವಿದ್ಯುತ್‌ ಸಂಪರ್ಕ ಸೇರಿದಂತೆ ಇತರೆ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಇದ್ದು, ಈ ಎಲ್ಲಾ ಕಾಮಗಾರಿಗಳನ್ನು ಶ್ರೀಮಠವು ಮತ್ತು ಭಕ್ತರ ದೇಣಿಗೆಯಿಂದ ಮುಕ್ತಾಯಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರಾಯರ ಮಠದ ಭಕ್ತರಿಂದ ಸುಮಾರು 13 ಸಾವಿರ ಚದರಡಿಯಲ್ಲಿ ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಶ್ರೀಮಠ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತ
ತಲುಪಿದ್ದು, ರಾಯರ ಸನ್ನಿಧಾನಕ್ಕೆ ಸಂತೋಷ ಉಂಟು ಮಾಡಿದೆ. ಇನ್ನು ಸುಮಾರು 35ರಿಂದ 40 ಲಕ್ಷ ರೂ. ವೆಚ್ಚದ ಕಾಮಗಾರಿ ಬಾಕಿ ಇದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಭಕ್ತರ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು. ನೂತನ ಮಠದಲ್ಲಿ ರಾಯರ ಬೃಂದಾವನ ಕೆತ್ತನೆಯನ್ನು ಹೊಸಪೇಟೆಯ ಖ್ಯಾತ ಶಿಲ್ಪಿ ಗಣೇಶಾಚಾರ್‌ ತಯಾರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀಮಠದ ದ್ವಾರಪಾಲಕ ಅನಂತ ಪುರಾಣಿಕ, ಮಠದ ಸಿವಿಲ್‌ ಎಂಜಿನಿಯರ್‌ ಸುರೇಶ್‌, ಮಠದ ಸಂಚಾಲಕ ರಾಮಕೃಷ್ಣ ಜಾಗಿರ್‌ದಾರ್‌, ಕಂಪ್ಲಿಯ ಮುಖಂಡರಾದ ಟಿ.ಕೊಟ್ರೇಶ್‌, ವ್ಯಾಸಾಚಾರ್‌, ಶೇಷಗಿರಿ,
ಕೆ.ಅನಂತಪದ್ಮನಾಭ, ಬಿ.ನಿರಂಜನಗುಪ್ತ, ಬಿ.ರವೀಂದ್ರನಾಥ್‌, ಡಿ.ಸುಬ್ರಹ್ಮಣ್ಯ ಶೆಟ್ಟಿ, ಮಂತ್ರಾಲಯ ಮುರಳೀಧರ, ಜಿ.ವಿ.ಕೋಟೇಶ್‌, ವಿಜಯೇಂದ್ರ, ಮೌನೇಶ್‌, ಜಗದೀಶ್‌ ರಾಯ್ಕರ್‌ ಇನ್ನಿತರರಿದ್ದರು. ಶ್ರೀಮಠ ನಿರ್ಮಾಣ
ಕಾರ್ಯಕ್ಕೆ ದೇಣಿಗೆ ನೀಡುವವರು ಶ್ರಿಮಠದ ಭಕ್ತರಾದ ಟಿ.ಕೊಟ್ರೇಶ್‌ ( 9448050350), ಸಾಚಾರ್‌(9448584417) ಮೊಬೈಲ್‌ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next