Advertisement

Mantralaya: ರಾಯರ ಬೃಂದಾವನಕ್ಕೆ ಸುವರ್ಣ ಅಲಂಕಾರ

12:38 AM Aug 20, 2024 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಸಪ್ತರಾತ್ರೋತ್ಸವದ 2ನೇ ದಿನವಾದ ಸೋಮವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ಸವ, ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕ ಜರಗಿದವು.

Advertisement

ಋಗ್ವೇದ ನಿತ್ಯನೂತನ ಉಪಕರ್ಮ ಕಾರ್ಯಕ್ರಮ ಹಾಗೂ ಮೈಸೂರಿನ ವಿದ್ವಾನ್‌ ಮಥರಿಶ್ವಾಚಾರ್‌ ಅವರಿಂದ ಪ್ರವಚನ ನಡೆಯಿತು. ಅನಂತರ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ರಘುಪತಿ ವೇದವ್ಯಾಸ ದೇವರ ಪೂಜೆ, ಅಲಂಕಾರ ಸಮರ್ಪಣ ಹಾಗೂ ಹಸ್ತೋದಕ, ಮಹಾ ಮಂಗಳಾರತಿ ನೆರವೇರಿಸಿದರು. ಬಳಿಕ ಗುರುಸಾರ್ವಭೌಮರ ಮೂಲ ಬೃಂದಾವನಕ್ಕೆ ಸುವರ್ಣ ಕವಚದಿಂದ ಅಲಂಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next