Advertisement

Record Dance : ಮಂತ್ರಾಲಯದಲ್ಲಿ 360 ಕಲಾವಿದರಿಂದ ನೃತ್ಯ ಪ್ರದರ್ಶನ

02:57 AM Aug 26, 2024 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾರಿಡಾರ್‌ನಲ್ಲಿ ರವವಿವಾರ ಸಂಜೆ ಅಂತಾರಾಷ್ಟ್ರೀಯ ದಾಖಲೆಗಾಗಿ 360 ನೃತ್ಯ ಕಲಾವಿದರಿಂದ ಏಕಕಾಲದಲ್ಲಿ ನೃತ್ಯ ಪ್ರದರ್ಶನ ನಡೆಯಿತು.

Advertisement

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಶನಲ್‌ ಕ್ಲಾಸಿಕಲ್‌ ಡ್ಯಾನ್ಸ್‌ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಕಾರ್ಯಕ್ರಮ ಉದ್ಘಾಟಿಸಿದರು.

ಕಲಾವಿದರು ನಾಮ ರಾಮಾಯಣಂ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು. ಏಕಕಾಲದಲ್ಲಿ ಮಾಡಿದ ಪ್ರದರ್ಶನ ನೋಡುಗರ ಹೃನ್ಮನ ಸೆಳೆಯಿತು. ಜಪಾನ್‌, ಜರ್ಮನಿ ಇಂಡೋನೇಷಿಯ ಸೇರಿದಂತೆ ದೇಶದ ಅನೇಕ ರಾಜ್ಯಗಳ ನೃತ್ಯ ಗುರುಗಳು ಮತ್ತು ನೃತ್ಯ ಕಲಾವಿದರು ಪಾಲ್ಗೊಂಡಿದ್ದರು.

ಆ ಮೂಲಕ ಇಂಟರ್‌ ನ್ಯಾಶನಲ್‌ ಬುಕ್‌ ಆಫ್‌ ರೆಕಾರ್ಡ್‌ ಪುಟಕ್ಕೆ ಸೇರಲಾಯಿತು. ಇಂಟರ್‌ನ್ಯಾಶನಲ್‌ ಬುಕ್‌ ಆಫ್‌ ರೆಕಾರ್ಡ್‌ ಸಂಸ್ಥೆಯ ಅರವಿಂದ ಸಿಂಗ್‌ ದಾಖಲೆ ಮಾಡಿದ ಸಂಸ್ಥೆಗೆ ಪ್ರಮಾಣ ಪತ್ರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next