Advertisement

ಶೀಘ್ರ “ಮೇಕೆದಾಟು’ಸಿಹಿಸುದ್ದಿ

11:58 PM Feb 28, 2020 | Lakshmi GovindaRaj |

ಹುಬ್ಬಳ್ಳಿ: “ಮೇಕೆದಾಟು’ ಯೋಜನೆ ಬಗ್ಗೆ ಶೀಘ್ರವೇ ಸಿಹಿಸುದ್ದಿ ಸಿಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮಾಜಿ ಪ್ರಧಾನಿ ದಿ|ಅಟಲ್‌ ಬಿಹಾರಿ ವಾಜಪೇಯಿ ಕಂಡ ಕನಸಾದ ದೇಶದೊಳಗಿನ ಎಲ್ಲ ನದಿಗಳ ಜೋಡಣೆ ಬಗ್ಗೆ ಚಿಂತನೆ ನಡೆದಿದೆ.

Advertisement

ಅಂತಾರಾಜ್ಯ ನದಿ ನೀರು ನ್ಯಾಯಾಧಿಕರಣ ವ್ಯಾಜ್ಯ ಕಾಯ್ದೆ ಕುರಿತು ಲೋಕಸಭೆಯಲ್ಲಿ ಮಸೂದೆ ಪಾಸ್‌ ಮಾಡಲಾಗಿದೆ. ಆದರೆ, ಕೆಲವು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ. ಹೀಗಾಗಿ, ಎಲ್ಲ ರಾಜ್ಯಗಳ ವಿಶ್ವಾಸ ಪಡೆದು ಅನುಷ್ಠಾನಗೊಳಿಸುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಮಾತುಕತೆ ಕೂಡ ನಡೆಸಲಾಗಿದೆ. “ಮೇಕೆದಾಟು’ ಬಗ್ಗೆ ಜಲಶಕ್ತಿ ಸಚಿವರೊಂದಿಗೆ ವಿಷಯ ಪ್ರಸ್ತಾಪಿಸಿದ್ದೇನೆ.

ಮಂತ್ರಾಲಯದಲ್ಲಿ ಇದಕ್ಕೆ ಪೂರಕ ವಾತಾವರಣವಿದೆ. ಸಂಬಂಧಿಸಿದ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ, ಆದಷ್ಟು ಬೇಗ ಒಳ್ಳೆಯ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವ್ಯಾಜ್ಯ ಅಂತಿಮ ಹಂತದಲ್ಲಿದೆ. ಅದು ಸುಪ್ರೀಂಕೋರ್ಟ್‌ನಲ್ಲಿದೆ.

ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಹೊಸ ನ್ಯಾಯಾಧಿಕರಣ ರಚಿಸಬೇಕೆಂದು ತೆಲಂಗಾಣ ಬೇಡಿಕೆ ಇಟ್ಟಿತ್ತು. ಅದನ್ನು ಕೇಂದ್ರ ಸ್ಪಷ್ಪವಾಗಿ ನಿರಾಕರಿಸಿದೆ.  ನೀರಿನ ಹಂಚಿಕೆ ಏನೇ ಇದ್ದರೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಮಧ್ಯೆ ಆಗಬೇಕು. ಇನ್ನುಳಿದ ರಾಜ್ಯಗಳಿಗೆ ಅದರ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ ಎಂದು ಸಚಿವ ಜೋಶಿ ತಿಳಿಸಿದರು.

ಕಳಸಾ-ಬಂಡೂರಿ, ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಪರಿಸರ ಇಲಾಖೆಯಿಂದ ಪರಿಣಾಮದ ಅವಲೋಕನದ ವರದಿ ಅವಶ್ಯವಿಲ್ಲ. ಬಜೆಟ್‌ನಲ್ಲಿ ಯೋಜನೆಗೆ ಅಂದಾಜು 400-500 ಕೋಟಿ ರೂ.ಮೀಸಲಿಡಬೇಕು. ಈ ಕುರಿತು ಸಿಎಂ ಯಡಿಯೂರಪ್ಪ ಅವರನ್ನು ಶುಕ್ರವಾರ ಬೆಳಗ್ಗೆ ಭೇಟಿ ಮಾಡಿ, ಮನವಿ ಮಾಡಿದ್ದೇನೆ. ಅದಕ್ಕೆ ಅವರು ಕೂಡ ಬಹಳ ಉತ್ಸುಕತೆ ತೋರಿದ್ದಾರೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next