ಹುಬ್ಬಳ್ಳಿ: ನಬಾರ್ಡ್ ನಿಂದ ಸಹಕಾರ ವಲಯಕ್ಕೆ ನೀಡುವ ಸಾಲದ ನೆರವಿನಲ್ಲಿ ಯಾವುದೇ ಕೊರತೆಯಾಗಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ರವಿವಾರ (ಡಿ.08) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಬ್ಯಾಂಕ್ ಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದ ಸಾಲ ನೀಡಿಕೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಕೊಡುಗೆ. ಇದು ಸಿದ್ದರಾಮಯ್ಯ ಕೈಗೊಂಡ ನಿರ್ಧಾರವಲ್ಲ ಎಂದರು.
ವೈದ್ಯಕೀಯ ವಿಜ್ಞಾನ ಇಷ್ಟು ಮುಂದುವರೆದ ಹಿಂದಿನ ದಿನದಲ್ಲಿ ಬಾಣಂತಿಯರು ಮೃತಪಟ್ಟಿರುವುದು, ಅದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸದಿರುವುದು ಸರಿಯಲ್ಲ. ವಿಪಕ್ಷ ನಾಯಕರು ಬಳ್ಳಾರಿಗೆ ಭೇಟಿ ನೀಡಿದ ನಂತರದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಸಚಿವರು ಹೋಗುತ್ತಾರೆ. ಬಾಣಂತಿಯರ ಸಾವಿನ ಬಗ್ಗೆ ಸರ್ಕಾರದ ಕಾಳಜಿ ಏನೆಂದು ತೋರಿಸುತ್ತದೆ ಎಂದರು.
ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಬೊಕ್ಕಸದಲ್ಲಿ ಹಣ ಇಲ್ಲವಾಗಿದೆ. ಮುಡಾದಲ್ಲಿ ಹಣದ ವಹಿವಾಟು ನಡೆದಿರುವ ಕಾರಣಕ್ಕೆ ಇ.ಡಿ.ಪ್ರವೇಶಿಸಿದೆ. ನ್ಯಾಯಾಂಗದ ಮೇಲೆ ಪ್ರಭಾವ ಬೀರುವ. ಕಾರಣಕ್ಕೆಸಿಎಂ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಜೋಶಿ ಹೇಳಿದರು.
ರಾಹುಲ್ ಗಾಂಧಿ ಜಾರ್ಜ್ ಸಿರೋಸಿಸ್ ಅಣತಿಯಂತೆ ಕೆಲಸ ಮಾಡುತ್ತಿದ್ದು, ಬುದ್ದಿಹೀನ ನಾಯಕನಿಂದ ಕಾಂಗ್ರೆಸ್ ಅವನತಿ ಹೊಂದುತ್ತಿದೆ ಎಂದರು.