ಹುಬ್ಬಳ್ಳಿ: ಶೀಘ್ರದಲ್ಲಿ ನಗರದ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಆರಂಭವಾಗಲಿದ್ದು, ನಾಗರಿಕ ವಾಯುಯಾನ ಭದ್ರತಾ ಮಂಡಳಿ(ಬಿಸಿಎಎಸ್)ಯಿಂದ ಅಂತಿಮ ಭದ್ರತೆಯ ಕ್ಲಿಯರೆನ್ಸ್ ದೊರೆತಿದೆ.
ಭಾರತೀಯ ವಿಮಾನಯಾನ ಪ್ರಾಧಿಕಾರವು ಕಾರ್ಗೋ ಲಾಜಿಸ್ಟಿಕ್ಸ್ ಆ್ಯಂಡ್ ಮೈತ್ರಿ ಸೇವೆಗಳ ಕಂಪನಿಯೊಂದಿಗೆ ಶೀಘ್ರವೇ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ ಕಟ್ಟಡದಿಂದ ಸರಕು ಸಾಗಣೆಗಾಗಿ ಬಿಸಿಎಎಸ್‌ನಿಂದ ಅನುಮತಿ ಪಡೆದ ಉತ್ತರ ಕರ್ನಾಟಕದ ಮೊದಲ ವಿಮಾನ ನಿಲ್ದಾಣದ ಟರ್ಮಿನಲ್ ಇದಾಗಿದೆ.
ಪ್ರಯಾಣಿಕರ ಅನಾನುಕೂಲತೆ ತಪ್ಪಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣದ ಅಸ್ತಿತ್ವದಲ್ಲಿರುವ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡದಿಂದ ಸರಕು ಸಾಗಣೆಗಾಗಿ ಬಿಸಿಎಎಸ್‌ನಿಂದ ಅನುಮೋದನೆ ಪಡೆಯಲಾಗಿದೆ ಮತ್ತು ಸಮರ್ಪಿತ ಸರಕು ಟರ್ಮಿನಲ್ ಕಾರ್ಯಗತ ಗೊಳಿಸುವವರೆಗೆ ಅದೇ ರೀತಿ ಮುಂದುವರಿಯುತ್ತದೆ. ಈಗ ಮೀಸಲಾದ ಕಾರ್ಗೊà ಟರ್ಮಿನಲ್ ಅನ್ನು ಹಳೆಯ ಪ್ರಯಾಣಿಕ ಟರ್ಮಿನಲ್ ಆಗಿ ಮಾರ್ಪಡಿಸುವ ಮೂಲಕ 60.6 ಲಕ್ಷ ರೂ. ಉಳಿತಾಯ ಮಾಡಲಾಗಿದೆ. ಈ ಟರ್ಮಿನಲ್ ಸರಕುಗಳಿಗೆ ಸುರಕ್ಷಿತವಾದ ಶೇಖರಣಾ ಸ್ಥಳ ಹೊಂದಿದ್ದು, ಬೆಲೆ ಬಾಳುವ ವಸ್ತುಗಳು ಮತ್ತು ಅಪಾಯಕಾರಿ ಸರಕುಗಳಿಗಾಗಿ ಮೀಸಲಾದ ಕೊಠಡಿ, ಜತೆಗೆ ಏರ್‌ಲೈನ್ಸ್, ಪ್ರಮುಖ ಸರಕು ಸಾಗಾಣಿಕೆದಾರರು/ ಲಾಜಿಸ್ಟಿಕ್ಸ್‌ದಾರರು, ಅಂಚೆ ಅಧಿಕಾರಿಗಳು ಮತ್ತು ಇ-ಕಾಮರ್ಸ್‌ದಾರರು ಬಳಸಲು 700 ಚದುರ ಮೀಟರ್ ವಾಣಿಜ್ಯ ಸ್ಥಳವಿದ್ದು, ಕಾರ್ಗೋ ಸಾಮಗ್ರಿ ಹಿಡುವಳಿ ಸಾಮರ್ಥ್ಯವು ವಾರ್ಷಿಕ 15 ಸಾವಿರ ಮೆಟ್ರಿಕ್ ಟನ್ ಆಗಿದೆ.
ಪ್ರಸ್ತುತವಿರುವ ಏರ್‌ಲೈನ್ಸ್, ಇಂಡಿಗೊ ಮತ್ತು ಸ್ಟಾರ್ ಏರ್ ಈ ಟರ್ಮಿನಲ್ ಮೂಲಕ ಕಾರ್ಯ ನಿರ್ವಹಿಸಲು ಆಸಕ್ತಿ ತೋರಿವೆ. ಇವು ಚೆನ್ನೈ, ಬೆಂಗಳೂರು ಮತ್ತು ಮುಂಬಯಿನಂತಹ ಪ್ರಮುಖ ನಗರ, ಬಂದರುಗಳಿಗೆ ಸಂಪರ್ಕ ಹೊಂದಿವೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಪ್ರಮೋದ ಕುಮಾರ ಠಾಕ್ರೆ ಅವರು, ಸಮರ್ಪಿತ ಸರಕು ಟರ್ಮಿನಲ್‌ಗಾಗಿ ಅಂತಿಮ ಭದ್ರತಾ ಅನುಮತಿಯನ್ನು ಬಿಸಿಎಎಸ್‌ನಿಂದ ಪಡೆಯಲಾಗಿದೆ. ಶೀಘ್ರವೇ ಕಾರ್ಗೊà ಟರ್ಮಿನಲ್ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ. ಅಗತ್ಯ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲಾಗುವುದು. ಈ ಸರಕು ಟರ್ಮಿನಲ್ ಸುತ್ತಮುತ್ತಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ತಡೆರಹಿತ ಏರ್ ಕಾರ್ಗೋ ಲಾಜಿಸ್ಟಿಕ್ ಮತ್ತು ಅಲೈಡ್ ಸೇವೆಗಳನ್ನು ಒದಗಿಸಲಿದೆ. ಜತೆಗೆ ಈ ಪ್ರದೇಶದ ಆರ್ಥಿಕತೆ ವೃದ್ಧಿಸುತ್ತದೆ ಎಂದು ತಿಳಿಸಿದ್ದಾರೆ.