Advertisement

ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

11:38 AM Oct 14, 2020 | Suhan S |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ 6ನೇ ಸೆಮಿಸ್ಟರ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಉನ್ನತ ಮಟ್ಟದ ತನಿಖೆ ನಡೆಸಬೇಕುಎಂದು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.

Advertisement

ವಿವಿಯ ಆಡಳಿತ ಕಚೇರಿಯ ಮುಂಭಾಗದ ಸಾಮಾಜಿಕ ಅಂತರದಲ್ಲಿ ನಿಂತ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಮನವಿ ಸ್ವೀಕರಿಸಲು ಕುಲಪತಿಗಳು ಆಗಮಿಸದಿರುವುದಕ್ಕೆ ಆಡಳಿತ ಕಚೇರಿಯ ಮುಖ್ಯ ದ್ವಾರದ ಮೂಲಕ ಕುಲಪತಿ ಕಚೇರಿಗೆ ಮುತ್ತಿಗೆ ಮುತ್ತಿಗೆ ಹಾಕಲು ಮುಂದಾದಾಗ ಇದನ್ನು ನಿಯಂತ್ರಿಸಲು ಬಂದ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ನಂತರ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಯಾರೋ  ಉದ್ದೇಶಪೂರ್ವಕಾಗಿ ಪ್ರಶ್ನೆ ಪತ್ರಿಕೆಯನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಅದನ್ನು  ಕೂಡಲೇ ಪತ್ತೆ ಹಚ್ಚಿ, ತಡೆದಿದ್ದೇವೆ ಎಂದು ಹೇಳಿದರು.

ತನಿಖೆ ನಡೆಸಲು ಆಗ್ರಹ: ಪ್ರತಿಭಟನೆ ವೇಳೆ ಮಾತನಾಡಿದ ಎಬಿವಿಪಿ ಮುಖಂಡ ಜಯಪ್ರಕಾಶ್‌, ಸಂದರ್ಭದಲ್ಲಿ ವಿಶ್ವವೇ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಪದವಿಯ ಅಂತಿಮ ಪರೀಕ್ಷೆಯ ಬರೆಯಲು ಸಮರ್ಪಕ ವ್ಯವಸ್ಥೆ ವಿವಿ ಕಲ್ಪಿಸಬೇಕಿತ್ತು. ವಿವಿಯ ಆಡಳಿತ ಮಂಡಳಿ ಸೂಕ್ತ ಜಾಗೃತಿ ವಹಿಸದೇ ಇರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ತೇಜಸ್‌ ರೆಡ್ಡಿಮಾತನಾಡಿದರು.

ಮುಂದುವರಿದ ಉಪನ್ಯಾಸಕ ಅಭ್ಯರ್ಥಿಗಳ ಧರಣಿ :

Advertisement

ಬೆಂಗಳೂರು: ನೇಮಕಾತಿ ಆದೇಶದ ಪ್ರತಿ ನೀಡುವಂತೆ ಆಗ್ರಹಿಸಿ ಉಪನ್ಯಾಸಕ ಅಭ್ಯರ್ಥಿಗಳು ಮಲ್ಲೇಶ್ವರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ಮುಂದು ವರಿಸಿದ್ದು, ಆದೇಶ ಪ್ರತಿ ಕೈಗೆ ಸಿಗುವವರೆಗೂ ಪ್ರತಿಭಟನೆ ನಿಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ 1,203 ಅಭ್ಯರ್ಥಿಗಳು ನೇಮಕಾತಿ ಕೌನ್ಸೆಲಿಂಗ್‌ ಮುಗಿಸಿದ್ದಾರೆ. ಆದರೆ, ಸರ್ಕಾರದಿಂದ ಆದೇಶ ಪ್ರತಿ ನೀಡಿಲ್ಲ. ಆದೇಶ ಪ್ರತಿಗೆ ಆಗ್ರಹಿಸಿ 500ಕ್ಕೂ ಅಧಿಕ ಉಪನ್ಯಾಸಕ ಅಭ್ಯರ್ಥಿಗಳು ಕಳೆದ ಮೂರು ದಿನದಿಂದ ಇಲಾಖೆಯ ಮುಖ್ಯ ಕಚೇರಿ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿಯವರು ಮಂಗಳವಾರ ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿ, ಪಿಯು ಕಾಲೇಜು ಬೋಧಕರ ಆಯ್ಕೆ ಬಗ್ಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್‌ ನಡೆದು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಆದರೆ, ಕೋವಿಡ್‌ ಸಂಕಷ್ಟದಹಿನ್ನೆಲೆಯಲ್ಲಿಇನ್ನೂಕಾಲೇಜುಗಳುಆರಂಭವಾಗಿಲ್ಲ. ಈ ನಿಟ್ಟಿನಲ್ಲಿ ಬೋಧಕರಿಗೆ ಅನುಕೂಲವಾಗುವಂತೆ, ಈ ಹಿಂದಿದ್ದ ಒಂದು ವರ್ಷದೊಳಗೆ ನೇಮಕಾತಿ ಅವಧಿಯ ಊರ್ಜಿತ್ವವನ್ನು, ನೇಮಕಾತಿ ಆಗುವ ವರೆಗೆ ಮುಂದುವರಿಸಲಾಗುವುದು. ಆದ್ದರಿಂದ ಬೋಧಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಹಾಗೆಯೇ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದರು. ವಿಧಾನ ಪರಿಷತ್‌ನ ಸದಸ್ಯರಾದ ಶ್ರೀಕಂಠೇಗೌಡ, ರಮೇಶ್‌ಗೌಡ ಸೇರಿದಂತೆಕೆಲವು ಸದಸ್ಯರು ಹಾಗೂ ಪಿಯು ಉಪನ್ಯಾಸಕರ ಸಂಘವು ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.

ಪ್ರತಿಭಟನೆ ನಿಲ್ಲಲ್ಲ:ಯಾವುದೇ ಪಕ್ಷದ ರಾಜಕಾರಣಿ ಗಳು ಬಂದು ಎಷ್ಟೇ ಭರವಸೆ ನೀಡಿದರೂ ನಾವುಅಹೋರಾತ್ರಿ ಪ್ರತಿಭಟನೆ ನಿಲ್ಲಿಸುವುದಿಲ್ಲ. ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೂ, ಯಾವುದೇ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಪ್ರತಿಭಟನೆ ಮುಂದುವರಿ ಯುತ್ತದೆ. ಸರ್ಕಾರದಿಂದ ಆದೇಶ ಪ್ರತಿ ನೀಡಿದ ನಂತರವಷ್ಟೇ ಪ್ರತಿಭಟನೆ ನಿಲ್ಲುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next