Advertisement

ಕ್ವಾರಂಟೈನ್‌: ಆರೋಗ್ಯ ನಿಗಾಕ್ಕೆ ಸೆಲ್ಫಿ ಅಪ್‌ಲೋಡ್‌ಗೆ ಸೂಚನೆ

05:14 AM May 16, 2020 | Team Udayavani |

ಹಾವೇರಿ: ಕ್ವಾರಂಟೈನ್‌ ನಲ್ಲಿರುವವರ ಮೇಲೆ ನಿಗಾವಹಿಸಲು ಇರುವ ಕ್ವಾರಂಟೈನ್‌ ವಾಚ್‌ ತಂತ್ರಾಂಶದಲ್ಲಿ ನಿತ್ಯದ ಆರೋಗ್ಯದ ಸ್ಥಿತಿಗತಿಯನ್ನು ಅವರ ಸೆಲ್ಫಿ ಫೋಟೋದೊಂದಿಗೆ ಅಪ್‌ಲೋಡ್‌ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಹಶೀಲ್ದಾರರಿಗೆ ಸೂಚನೆ ನೀಡಿದರು.

Advertisement

ಅವರು ಶುಕ್ರವಾರ ತಹಶೀಲ್ದಾರರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಈ ಸೂಚನೆ ನೀಡಿದರು. ಗೃಹ ಪ್ರತ್ಯೇಕತೆಯಲ್ಲಿರುವ ಎಲ್ಲರ ಆರೋಗ್ಯದ ಮಾಹಿತಿಯನ್ನು ಪ್ರತಿನಿತ್ಯ ಪಡೆಯಬೇಕು. ಕಂಟೇನ್ಮೆಂಟ್‌ ಝೋನ್‌ಗಳ ದೈನಂದಿನ ಚಟುವಟಿಕೆಗಳನ್ನು ನಿಗದಿತ ತಂತ್ರಾಂಶದಲ್ಲಿ ಸಕಾಲದಲ್ಲಿ ಅಳವಡಿಸಲು ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯ ಘೋಷಿತ ಕಂಟೇನ್ಮೆಂಟ್‌ ಬಫರ್‌ ಝೋನ್‌ ವಲಯಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕು. ಈ ವಲಯಗಳಲ್ಲಿ ವೈದ್ಯರ ಮೂಲಕ ಮನೆ ಮನೆ ಆರೋಗ್ಯ ತಪಾಸಣೆ ಚಟುವಟಿಕೆಗಳ ಅಂಕಿಅಂಶಗಳನ್ನು ಕಾಲಕಾಲಕ್ಕೆ ಕಂಟೇನ್ಮೆಂಟ್‌ ಝೋನ್‌ ಆ್ಯಪ್‌ ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಮನೆ ಮನೆ ಆರೋಗ್ಯ ಸರ್ವೇ ಕುರಿತಂತೆ ಮಾಹಿತಿಯನ್ನು ಹೆಲ್ತ್‌ ವಾಚ್‌ ತಂತ್ರಾಂಶದಲ್ಲಿ ಅಳವಡಿಸಬೇಕಾಗಿದೆ. ಈ ತಂತ್ರಾಂಶದ ಹೊಸ ವರ್ಷನ್‌ ಬಿಡುಗಡೆಗೊಳಿಸಿದ್ದು, ಎಲ್ಲ ಬಿಎಲ್‌ಒಗಳು ಅಪ್‌ಡೆಟ್‌ ಮಾಡಿಕೊಳ್ಳಲು ನಿರ್ದೇಶನ ನೀಡಿ. ಜಿಲ್ಲೆಯಲ್ಲಿ 1470 ಜನ ಬಿಎಲ್‌ಒಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದು, ಈವರೆಗೆ 1,225 ಜನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಬಾಕಿ 245 ಜನ ಬಿಎಲ್‌ಒಗಳು ಹೆಲ್ತ್‌ ವಾಚ್‌ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಂಡು ಮಾಹಿತಿ ಅಪ್‌ಲೋಡ್‌ ಮಾಡಬೇಕಾಗಿದೆ. ಈವರೆಗೆ 3,18,852 ಮನೆಗಳ ಪೈಕಿ 68,516 ಮನೆಗಳ ಸರ್ವೇ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿದ್ದು, ಬಾಕಿ ಮನೆಗಳ ಸರ್ವೇ ಕಾರ್ಯ ಮುಗಿದರೂ ತಂತ್ರಾಂಶದಲ್ಲಿ ಅಪ್‌ಲೋಡ್‌ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಪಂ ಸಿಇಒ ರಮೇಶ ದೇಸಾಯಿ, ಉಪವಿಭಾಗಾಧಿಕಾರಿ ಡಾ| ದಿಲೀಷ್‌ ಶಶಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next