Advertisement

ಹಿರೇಬಾಗೇವಾಡಿಯಿಂದ ಕಣ್ತಪ್ಪಿಸಿ ಬಂದಿದ್ದವಗೆ ಕ್ವಾರಂಟೈನ್‌

03:48 PM May 11, 2020 | Suhan S |

ಬೈಲಹೊಂಗಲ: ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಕೇಸ್‌ ಪತ್ತೆಯಾಗಿರುವ ಹಿರೇಬಾಗೆವಾಡಿ ಗ್ರಾಮದಲ್ಲಿ ಇಲ್ಲಿಯವರೆಗೆ ಇದ್ದ, ಮೂಲತ ದೊಡವಾಡದ ಗ್ರಾಮದ ವ್ಯಕ್ತಿಯೋರ್ವರು ದೊಡವಾಡ ಗ್ರಾಮಕ್ಕೆ ಭಾನುವಾರ ಮರಳಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮದ ನೂರಾರು ಜನ ಪೇಟೆ ರಸ್ತೆಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ಜಮಾಯಿಸಿದ್ದರು.

Advertisement

ಆತನನ್ನು ಗ್ರಾಮದಲ್ಲಿ ಕ್ವಾರಂಟೈನ್‌ ಮಾಡದೆ ಬೇರೆ ಕಡೆ ಕ್ವಾರಂಟೈನ್‌ ಮಾಡಬೇಕೆಂದು ತಾಲೂಕು ಆರೋಗ್ಯಾಧಿ ಕಾರಿಗಳಿಗೆ ಮತ್ತು ಪಿಡಿಓ ಗೆ ಮನವಿ ಮಾಡಿದರು. ಒಬ್ಬರ ಮೇಲೊಬ್ಬರು ಬೆರಳು ತೋರಿದ ಅಧಿಕಾರಿಗಳು ಹಿರೇ ಬಾಗೇವಾಡಿಯಿಂದ ಅಧಿಕಾರಿಗಳ ಕಣ್ತಪ್ಪಿಸಿ ಕಾಲ್ನಡಿಗೆ ಮುಖಾಂತರ ಗ್ರಾಮಕ್ಕೆ ಬಂದಿರುವ ಆ ವ್ಯಕ್ತಿಯ ಮಕ್ಕಳು ಕೂಡ, ಸರಕಾರದ ನಿಯಮದಂತೆ ನಮ್ಮ ತಂದೆಯನ್ನು ನಾವು ಹೋಮ್‌ ಕ್ವಾರಂಟೈನ್‌ಗೊಳಪಡಿಸಲು ಸಿದ್ಧರಿದ್ದೇವೆ. ಆದರೆ ನಾವು ಕೆಲಸಕ್ಕೆಂದು ಹೊರಗಡೆ ಹೋಗಲೇಬೇಕು. ಗ್ರಾಮಸ್ಥರೂ ಕೋವಿಡ್ ಆತಂಕದಿಂದ ನಮ್ಮನ್ನು ಸಂಶಯದ ಕಣ್ಣಿನಿಂದ ನೋಡುವುದು ಬೇಡ. ಆದ್ದರಿಂದ ತಂದೆಯನ್ನು ಸರಕಾರದ ಕ್ವಾರಂಟೈನ್‌ ಕೇಂದ್ರದಲ್ಲಿ ಇಟ್ಟು ಅವಧಿ ಮುಗಿದ ನಂತರ ಕಳಿಸಿಕೊಡಿ ಎಂದರು.

ಆದರೆ ತಾಲೂಕು ಆರೋಗ್ಯ ಅಧಿಕಾರಿಗಳು, ಪಿಡಿಓ ಒಬ್ಬರ ಮೇಲೊಬ್ಬರು ಆರೋಪಿಸಲು ಪ್ರಾರಂಭಿಸಿದ್ದರಿಂದ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರಿಂದ ವ್ಯಕ್ತಿಯ ಪರೀಕ್ಷೆ ಮಾಡಿಸಿ ಹೋಮ್‌ ಕ್ವಾರಂಟೆ„ನ್‌ ಸೀಲ್‌ ಹಾಕಿಸಿದ್ದಲ್ಲದೇ ಸ್ಥಳೀಯ ಬಿಸಿಎಮ್‌ ಹಾಸ್ಟೇಲ್‌ ನಲ್ಲಿ 14 ದಿನಗಳ ಕ್ವಾರಂಟೈನ್‌ ಅವಧಿ ಪೂರೈಸಲು ಕಳಿಸಿಕೊಟ್ಟರು.

ಆದರೆ ಹಾಸ್ಟೇಲ್‌ ಸುತ್ತಲಿನ ಮನೆಗಳ ಜನ, ಆ ವ್ಯಕ್ತಿಯಿಂದ ತಮ್ಮ ಪಾಡೇನು? ಆತ ಕ್ವಾರಂಟೆ„ನ್‌ ನಿಯಮ ಪಾಲಿಸದೆ ಹೊರಗಡೆ ತಿರುಗಾಡಿದರೆ ಜನ ಜೀವನ ಹೇಗೆ? ಎಂದು ಆತಂಕಿತರಾಗಿದ್ದಾರೆ. ಅಧಿಕಾರಿಗಳು ಸ್ಥಳೀಯವಾಗಿ ಆತನನ್ನು ಕ್ವಾರಂಟೈನ್‌ ಮಾಡದೆ ಕ್ವಾರಂಟೈನ್‌ ಕೇಂದ್ರಕ್ಕೆ ದಾಖಲಿಸಿ ಗ್ರಾಮಸ್ಥರ ಭಯ, ಆತಂಕ ದೂರ ಮಾಡಬೇಕೆಂದು ತಾ.ಪಂ ಸದಸ್ಯ ಸಂಗಯ್ಯ ದಾಭಿಮಠ, ಪಿಕೆಪಿಎಸ್‌ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next