Advertisement
ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾಗಳನ್ನು ಒಳಗೊಂಡ ಕ್ವಾಡ್ ರಾಷ್ಟ್ರ ಗಳ ಸಮ್ಮೇಳನದಲ್ಲಿ ಇಂಡೋ-ಪೆಸಿಫಿಕ್ ವಲಯದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.
Related Articles
2021ರ ಸೆಪ್ಟಂಬರ್ ಬಳಿಕ ನಡೆದ 2ನೇ ಖುದ್ದು ಕ್ವಾಡ್ ಸಭೆಯಲ್ಲಿ 2008ರಲ್ಲಿ ಮುಂಬಯಿ, 2016ರಲ್ಲಿ ಪಠಾಣ್‌ಕೋಟ್‌ನಲ್ಲಿ ಐಎಎಫ್ ನೆಲೆಯ ಮೇಲೆ ಪಾಕ್ ಪ್ರೇರಿತ ಉಗ್ರರ ದಾಳಿಯನ್ನು ಕಠಿನ ಶಬ್ದಗಳಲ್ಲಿ ಖಂಡಿಸಲಾಗಿದೆ. ಉಗ್ರ ಸಂಘಟನೆಗಳಿಗೆ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುವ ಸಂಘಟನೆಗಳಿಗೆ ಎಲ್ಲ ರೀತಿಯಲ್ಲಿ ವಿತ್ತೀಯ ನೆರವು ನೀಡುವನ್ನು ನಿಲ್ಲಿಸಬೇಕು ಎಂದೂ ಕ್ವಾಡ್ ನಾಯಕರು ಆಗ್ರಹಿಸಿದ್ದಾರೆ.
Advertisement
ನಂಬಿಕೆಯೇ ಶಕ್ತಿಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪರಸ್ಪರ ನಂಬಿಕೆ ಮತ್ತು ನಿರ್ಧಾರಗಳೇ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಹೊಸ ಶಕ್ತಿ ನೀಡುತ್ತವೆ. ಇದರಿಂದಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಎಲ್ಲರನ್ನೂ ಒಳ ಗೊಂಡಂತೆ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ. ಒಳ್ಳೆಯತನಕ್ಕಾಗಿ ಬಲ ಎಂಬ ನಿರ್ಣಯದೊಂದಿಗೆ ಒಕ್ಕೂಟ ಮುಂದುವರಿಯಲಿದೆ ಎಂದರು. ಸ್ಥಾಪನೆಗೊಂಡ ಅಲ್ಪಾವಧಿಯಲ್ಲೇ ಜಗತ್ತಿನಲ್ಲಿ ಒಕ್ಕೂಟ ತನ್ನ ಪಭಾವ ಬೀರಿದೆ ಎಂದೂ ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಹಾರಿದ ಚೀನ, ರಷ್ಯಾ ವಿಮಾನಗಳು
ಶೃಂಗ ಸಮ್ಮೇಳನ ನಡೆಯುತ್ತಿರುವಂತೆಯೇ ಚೀನದ 2 ಎಚ್-6ಕೆ ಬಾಂಬರ್‌ಗಳು ಮತ್ತು ರಷ್ಯಾದ 2 ಟಿಯು-95ಎಂಎಸ್ ಯುದ್ಧ ವಿಮಾನಗಳು ಜಪಾನ್ ಸಮುದ್ರದ ಮೇಲೆ ಹಾರಾಟ ನಡೆಸಿವೆ. ಈ ಬಗ್ಗೆ ಜಪಾನ್ ರಕ್ಷಣಾ ಸಚಿವ ನೊಬೊಕುಶಿ ಮಾಹಿತಿ ನೀಡಿದ್ದಾರೆ. ಈ ಎರಡೂ ರಾಷ್ಟ್ರಗಳ ವಿಮಾನಗಳು ಜಪಾನ್‌ನ ವಾಯು ಪ್ರದೇಶವನ್ನು ಪ್ರವೇಶ ಮಾಡದೇ ಇದ್ದರೂ ಅದಕ್ಕೆ ಸಮೀಪ ಹಾರಾಟ ನಡೆಸಿವೆ. ಇಂಥ ಬೆಳವಣಿಗೆ 2021ರ ನವೆಂಬರ್ ಬಳಿಕ ಇದು ನಾಲ್ಕನೇಯ ದ್ದಾಗಿದೆ. ವಿಮಾನ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ರಷ್ಯಾ, ವಿಮಾನಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದವು ಎಂದಿದೆ.