ದೋಹ: ತನ್ನಲ್ಲಿ ಚಾಲ್ತಿಯಲ್ಲಿರುವ ವಿವಾ ದಾತ್ಮಕ “ಎಕ್ಸಿಟ್ ವೀಸಾ’ವನ್ನು ಇದೇ ವರ್ಷಾಂತ್ಯದ ಹೊತ್ತಿಗೆ ರದ್ದುಗೊಳಿಸಲು ಕತಾರ್ ಸರಕಾರ ಮುಂದಾಗಿದೆ. ಕತಾರ್‌ನಲ್ಲಿ ಜಾರಿಗೊಂಡಿರುವ ಎಲ್ಲ ವಿದೇಶಿ ಕೆಲಸಗಾರರಿಗೆ, ಉದ್ಯೋಗಿಗಳಿಗೆ ಇದು ಅನ್ವಯವಾಗುವುದರಿಂದ, ಕತಾರ್ ಬಿಟ್ಟು ತೆರಳ ಬಯಸುವ ಉದ್ಯೋಗಿಗಳು, ಕೆಲಸಗಾರರು ತಮ್ಮ ಕಂಪೆನಿಗಳಿಂದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ ಎಂದು ಮೂಲಗಳು ವಿಶ್ಲೇಷಿಸಿವೆ.
ಈ ಬಗ್ಗೆ ವಿವರಣೆ ನೀಡಿರುವ ದೋಹಾದ ಲೇಬರ್ ಏಜೆನ್ಸಿಯೊಂದರ ಮುಖ್ಯಸ್ಥ ಹೌಟನ್ ಹೊಮಾಯುನ್ಪುರ್, “ಕಳೆದ ವರ್ಷವೇ ಕತಾರ್ ಸರಕಾರ ಎಕ್ಸಿಟ್ ವೀಸಾಗಳನ್ನು ರದ್ದುಗೊಳಿಸಿತ್ತು. ಆದರೆ, ಆಗ ಕೆಲವು ಸೀಮಿತ ಉದ್ಯೋಗಿಗಳಿಗೆ ಮಾತ್ರ ಅದು ಅನ್ವಯವಾಗಿತ್ತು. ಈಗ, ಅದನ್ನು ಎಲ್ಲ ಉದ್ಯೋಗಿಗಳು, ಕೆಲಸಗಾರರಿಗೆ ಅನ್ವಯಿ ಸಲಾಗಿದೆ’ ಎಂದು ಹೇಳಿದ್ದಾರೆ.
2022ರ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿರುವ ಕತಾರ್‌ನ ರಾಜಧಾನಿ ದೋಹಾದಲ್ಲಿ ಎಲ್ಲೆಲ್ಲೂ ನೂತನ ಕ್ರೀಡಾಂಗಣಗಳು ತಲೆ ಎತ್ತುತ್ತಿವೆ. ಅದಕ್ಕೆ ಸಂಬಂಧಿಸಿದ ಕಾಮಗಾರಿಗಳು ಭರದಿಂದ ಸಾಗುತ್ತಿವೆ.
ಹಲವಾರು ವರ್ಷಗಳಿಂದ ಇದ್ದ ಕಾರ್ಮಿಕರ ಶೋಷಣೆ ಈಗ ಅಲ್ಲಿ ತಾರಕಕ್ಕೇರಿದೆ ಎನ್ನಲಾಗಿದೆ. ಹೀಗಾಗಿ, ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಹಲವಾರು ತನ್ನ ನೀತಿಗಳಲ್ಲಿ ಹಲವಾರು ಸುಧಾ ರಣೆಗಳನ್ನು ತಂದಿರುವ ಕತಾರ್, “ಎಕ್ಸಿಟ್ ವೀಸಾ’ ರದ್ದುಗೊಳಿಸಿದೆ.