ಕತಾರ್: ಭಾರತೀಯ ರಾಯಭಾರ ಕಚೇರಿಯು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ, ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ, ಐಸಿಸಿ ಅಡಿಯಲ್ಲಿ ಸಂಬಂಧಿತ ಸಂಸ್ಥೆಗಳಿಂದ ಸಾಂಸ್ಕೃತಿಕ ಸಂಭ್ರಮವಾದ “ನಾಟ್ಯಾಂಜಲಿ: ಇಂಟರ್ ಎಒ ಡ್ಯಾನ್ಸ್ ಫೆಸ್ಟಿವಲ್’ ಅನ್ನು ಕತಾರ್‌ನಲ್ಲಿ ನಡೆಸಿತು.
ಈ ಸಂದರ್ಭ ಭಾರತದ ವಿವಿಧ ರಾಜ್ಯಗಳಿಗೆ ಸೇರಿದ 25 ಸಂಘ – ಸಂಸ್ಥೆಗಳು ಪ್ರದರ್ಶನ ನೀಡಿದವು. ಭಾರತದ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಸಚಿನ್ ದಿನಕರ್ ಶಂಕಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಐಸಿಸಿ ವ್ಯವಸ್ಥಾಪಕ ಸಮಿತಿಯ ಸದಸ್ಯರು, ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ವ್ಯವಸ್ಥಾಪಕ ಸಮಿತಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಐಸಿಸಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಸ್ವಾಗತಿಸಿದರು. ಐಸಿಸಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು ಪ್ರಸ್ತಾವಿಸಿದರು. ಐಸಿಸಿಯ ಕಾರ್ಯದರ್ಶಿ ಅಬ್ರಹಾಂ ಜೋಸೆಫ್ ವಂದಿಸಿದರು. ಐಸಿಸಿಯ ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥೆ ಸುಮಾ ಮಹೇಶ್ ಗೌಡ ನಿರೂಪಿಸಿದರು.