Advertisement

ಸೆ. 14ರಿಂದ ಬೆಂಗಳೂರು- ಸಿಡ್ನಿ ನೇರ ವಿಮಾನ

09:14 PM Apr 14, 2022 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಿಂದ ಆಸ್ಟ್ರೇಲಿಯಾದ ಸಿಡ್ನಿಗೆ ಸೆ.14ರಿಂದ ನೇರ ವಿಮಾನಯಾನ ಆರಂಭಿಸಲಾಗುತ್ತಿದ್ದು, ವಾರದಲ್ಲಿ ನಾಲ್ಕು ದಿನ ಇರಲಿದೆ ಎಂದು ಆಸ್ಟ್ರೇಲಿಯಾ ಪ್ರವಾಸೋದ್ಯಮ ಭಾರತದ ವ್ಯವಸ್ಥಾಪಕ ನಿಶಾಂತ್‌ ಕಾಶಿಕರ್‌ ತಿಳಿಸಿದ್ದಾರೆ.

Advertisement

ಕೊರೊನಾ ಬಳಿಕ ಆಸ್ಟ್ರೇಲಿಯಾ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಮುಂಬಯಿ ಮತ್ತು ದಿಲ್ಲಿಯಿಂದ ಮೆಲ್ಬೋರ್ನ್ ಮತ್ತು ಸಿಡ್ನಿಗೆ ವಾರದಲ್ಲಿ 19 ವಿಮಾನ ಸೇವೆ ಇತ್ತು. ಈಗ ಮತ್ತಷ್ಟು ವಿಸ್ತರಿಸಿದ್ದು, ಬೆಂಗಳೂರಿನಿಂದಲೂ ಸೇವೆ ಆರಂಭಿಸಲಾಗುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಅಕ್ಟೋಬರ್‌, ನವೆಂಬರ್‌ನಲ್ಲಿ ಐಸಿಸಿ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಇದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಭಾರತ ಮತ್ತಿತರ ರಾಷ್ಟ್ರಗಳಿಂದ ಆಸ್ಟ್ರೇಲಿಯಾಕ್ಕೆ ತೆರಳುವವರಿಗೆ ಸಾಕಷ್ಟು ರಿಯಾಯಿತಿ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next