14 ಫೆಬ್ರವರಿ 2019ರಂದು ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲ್ವಾಮಾ ಜಿಲ್ಲೆಯ ಲೇತು³ರ ಎನ್ನುವ ಗ್ರಾಮದ ಬಳಿ ಸಿಆ ರ್ ಪಿ ಎಫ್ನ ಯೋಧರು ಪ್ರಯಾಣಿಸುತ್ತಿದ್ದ ಬಸ್‌ಗಳ ಮೇಲೆ ಆತ್ಮಾಹುತಿ ದಾಳಿ ನಡೆದು, 40 ಸಿಆ ರ್ ಪಿ ಎ ಫ್ ಸೈನಿಕರು ಹುತಾತ್ಮ ರಾದರು. ಈ ದಾಳಿಯಲ್ಲಿ ಆತ್ಮಾಹುತಿ ಆಕ್ರಮಣ ಕಾರ ಅದಿಲ್ ಅಹ್ಮದ್ ದರ್ ಕೂಡ ಹತನಾದ. ಪಾಕಿಸ್ಥಾನದಲ್ಲಿ ನೆಲಸಿರುವ ಜೈಶ್ ಎ ಮೊಹಮ್ಮದ್ ಎನ್ನುವ ಉಗ್ರ ಸಂಘಟನೆ ಈ ದಾಳಿಯನ್ನು ನಾವೇ ಮಾಡಿಸಿದ್ದು ಎನ್ನುವ ವೀಡಿಯೋವನ್ನು ದಾಳಿ ಯಾದ ಕೆಲವೇ ಗಂಟೆ ಗಳಲ್ಲಿ ಬಿಡುಗಡೆ ಮಾಡಿತು. ಪಾಕಿಸ್ಥಾನವೂ ಕೂಡಲೇ ಪ್ರತಿಕ್ರಿಯಿಸಿ ನಮ್ಮ ದೇಶಕ್ಕೂ ಈ ದಾಳಿಗೂ ಸಂಬಂಧವಿಲ್ಲ, ನಾವು ಈ ದಾಳಿಯನ್ನು ಖಂಡಿಸುತ್ತೇವೆ ಎನ್ನುವ ಸೋಗಲಾಡಿತನದ ಹೇಳಿಕೆ ಕೊಟ್ಟಿತ್ತು. ಪಾಕಿಸ್ಥಾನದ ಈ ಹೇಳಿಕೆಯಲ್ಲಿ ಎಷ್ಟು ಸುಳ್ಳಿದೆ ಎಂದು ವಿಶ್ವದ ಬಹುತೇಕ ರಾಷ್ಟ್ರ ಗಳಿಗೆ ಅರಿವಿತ್ತು. ಏಕೆಂದರೆ ಈ ಆತ್ಮಾಹುತಿ ದಾಳಿ ಮಾಡುವ ಮನಃಸ್ಥಿತಿಯ ಆತಂಕವಾದಿಗಳನ್ನು ತಯಾರಿಸಿ ಭಾರತವೂ ಸೇರಿದಂತೆ ಇತರ ದೇಶಗಳಿಗೆ ರಫ್ತು ಮಾಡುವ ಭಯೋತ್ಪಾದನೆಯ ಕಾರ್ಖಾನೆಗಳು ಪಾಕಿಸ್ಥಾನದಲ್ಲಿ ಸಾಕಷ್ಟಿವೆ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಪ್ರಮುಖವೆಂದರೆ ಬಹವಾಲಾಪುರ ಮತ್ತು ಬಾಲಾಕೋಟಿನ ಭಯೋತ್ಪಾದನೆಯ ತರಬೇತಿ ಕೇಂದ್ರಗಳು.
2001ರ ಭಾರತೀಯ ಪಾರ್ಲಿಮೆಂಟಿನ ದಾಳಿಯ ಅಅನಂತರ, ಭಾರತದ ಸೈನ್ಯ “ಆಪ ರೇಷನ್ ಪರಾಕ್ರಮ್’ ಹೆಸರಿನ ಕಾರ್ಯಾಚರಣೆ ಯಡಿ ಗಡಿಯಲ್ಲಿ ಪಾಕಿಸ್ಥಾನಕ್ಕೆ ಸಡ್ಡು ಹೊಡೆದು ನಿಂತಿತ್ತು. ಪರಿಸ್ಥಿತಿ ಇನ್ನೇನು ಯುದ್ಧ ಪ್ರಾರಂಭ ವಾಗಿಯೇ ಬಿಡುತ್ತದೆ ಎನ್ನುವ ಹಂತಕ್ಕೆ ತಲುಪಿ ಬಿಟ್ಟಿತ್ತು. ಅಂತಾರಾಷ್ಟ್ರೀಯ ಮಟ್ಟದ ಒತ್ತಡ ದಿಂದಾಗಿ ಕೆಲವು ತಿಂಗಳುಗಳ ಅನಂತರ ಪರಿಸ್ಥಿತಿ ಹತೋಟಿಗೆ ಬಂತು. ಅನಂತರವೂ ಜೈಶ್ ಎ ಮೊಹಮ್ಮದ್ ಸಂಘಟನೆಯ ಕಿತಾಪತಿ ನಡೆಯು ತ್ತಲೇ ಇತ್ತು. ಗಡಿಯೊಳಗೆ ತೂರಿಕೊಂಡು ಬಂದ ಭಯೋತ್ಪಾದಕರನ್ನು ಭಾರತೀಯ ರಕ್ಷಣ ಪಡೆ ಗಳು ಕೊಂದುಬಿಡುತ್ತಿದ್ದವು. ಹಾಗಾಗಿ ದೊಡ್ಡ ದೊಂದು ಅವಘಡವನ್ನು ನಡೆಸಿ ಮತ್ತೂಮ್ಮೆ ಭಾರತ-ಪಾಕಿಸ್ಥಾನದ ನಡುವೆ ಯುದ್ಧದ ಸನ್ನಿವೇ ಶವನ್ನು ಸೃಷ್ಟಿಸುವ ಅವಕಾಶಕ್ಕೆ ಕಾಯುತ್ತಿತ್ತು ಜೈಶ್, ಆಗ ಹುಟ್ಟಿಕೊಂಡದ್ದೇ ಪುಲ್ವಾಮಾ ದಾಳಿ.
ಅಸಲಿಗೆ ಪುಲ್ವಾಮಾ ದಾಳಿಯ ಸಿದ್ಧತೆ ಎಪ್ರಿಲ್ 2018ರಿಂದಲೇ ಪ್ರಾರಂಭವಾಗಿ ಬಿಟ್ಟಿರುತ್ತದೆ. ಮೊದಲ ಹಂತದಲ್ಲಿ ಉಮರ್ ಫರೂಖ್ ಮತ್ತು ಇಸ್ಮಾಯಿಲ್ ಸೈಫುಲ್ಲಾ ಎಂಬ ಉಗ್ರರನ್ನು 35 ಕಿಲೋ ಆರ್‌ಡಿಎಕ್ಸ್ ಸ್ಫೋಟಕದೊಂದಿಗೆ ಭಾರತದ ಗಡಿಯೊಳಗೆ ನುಸುಳಿಸಲಾಗುತ್ತದೆ. ಅದೇ ಸಮಯದಲ್ಲಿ ಬಹವಾಲ್ಪುರದಲ್ಲಿ ಅದಿಲ್ ಅಹ್ಮದ್ ದರ್ ಎನ್ನುವ 22 ವರ್ಷದ ಯುವಕ ನನ್ನು ಆತ್ಮಾಹುತಿಯ ದಾಳಿಗೆ ಸಿದ್ಧಗೊಳಿಸಲಾಗುತ್ತದೆ. ಕಾಶ್ಮೀರದ ಕೆಲವರು ಜನಸಾಮಾನ್ಯರಂತೆ ಜನರ ನಡುವೆಯೇ ನಡೆದಾಡಿಕೊಂಡು ಇವರಿಗೆ ನೆರವಾಗುತ್ತಾರೆ. ಇವರನ್ನು ಓವರ್ ಗ್ರೌಂಡ್ ವರ್ಕರ್ ಎನ್ನುತ್ತಾರೆ. ಇವರೆಲ್ಲ ಪುಲ್ವಾಮಾದ ಶಕಿಲ್ ಬಷೀರ್ ಎನ್ನುವವನ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಬಾಂಬುಗಳ ತಯಾರಿಕೆಗೆ ಬೇಕಾದ ಜಿಲೆಟಿನ್ ಕಡ್ಡಿಗಳು ಮತ್ತು ಅಮೋನಿಯಂ ನೈಟ್ರೇಟನ್ನು ಕಣಿವೆಯಲ್ಲಿ ಬಂಡೆಗಳನ್ನು ಸಿಡಿಸಿ ಜಲ್ಲಿಕಲ್ಲುಗಳನ್ನು ಮಾರುವವರಿಂದ ಖರೀದಿಸಲಾಗುತ್ತದೆ.
ಶಕೀಲನ ಮನೆ ಬಾಂಬ್ ತಯಾರಿಸುವ ಕಾರ್ಖಾನೆಯಾಗಿ ಬಿಡುತ್ತದೆ. ಒಂದು ವಾಹನದಲ್ಲಿ ಈ ಬಾಂಬುಗಳನ್ನು ತುಂಬಿ ಶ್ರೀನಗರದಿಂದ ಸುಮಾರು 35 ಕಿ.ಮೀ. ದೂರದ ಲಡೂರ ಅಡ್ಡರಸ್ತೆಯಿಂದ ಜಮ್ಮು ಶ್ರೀನಗರದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈನಿಕರನ್ನು ತುಂಬಿಸಿ ಕೊಂಡು ಸಾಲುಸಾಲಾಗಿ ಸಾಗುತ್ತಿರುವ ಸೈನ್ಯದ ಬಸ್‌ಗಳಿಗೆ ಢಿಕ್ಕಿ ಹೊಡೆದು ಭೀಕರ ಸ್ಫೋಟ ವನ್ನುಂಟು ಮಾಡುವ ಕುಕೃತ್ಯದ ತಯಾರಿ ನಡೆದುಬಿಡುತ್ತದೆ. ಫೆಬ್ರವರಿ 6ರಂದು ಈ ದಾಳಿಯ ದಿನ ಎಂದು ತೀರ್ಮಾನಿಸಲಾಗುತ್ತದೆ. ಆಗ ಮಾನಸಿಕವಾಗಿ ಸಂಪೂರ್ಣವಾಗಿ ಪರಿವರ್ತಿತಗೊಂಡು ಆತ್ಮಾಹುತಿ ದಾಳಿಗೆ ಸಿದ್ಧವಾಗಿರುವ ಅದಿಲ್ ಅಹ್ಮದ್ ದರ್ ಈ ತಂಡಕ್ಕೆ ಬಂದು ಸೇರಿ ಕೊಳ್ಳುತ್ತಾನೆ. ಯಾವುದೇ ಜನಸಂಪರ್ಕವಿಲ್ಲ ದಂತೆ ಅವನನ್ನು ಏಕಾಂತದಲ್ಲಿರಿಸಲಾಗುತ್ತದೆ. ಅವನಿಗೆ ಮುಂದೆ ಜನ್ನತ್ತಿನಲ್ಲಿ ಸಿಗುವ 72 ಕನ್ಯೆಯರದೇ ಕನಸು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್. ಗುರು ಎನ್ನುವ ಸಿಆರ್‌ಪಿಎಫ್ ಯೋಧ ತನ್ನ ವಾರ್ಷಿಕ ರಜೆ ಮುಗಿಸಿಕೊಂಡು ಜಮ್ಮುವಿನ ಟ್ರಾನ್ಸಿಟ್ ಕ್ಯಾಂಪಿಗೆ ಬಂದು ತಲುಪುತ್ತಾರೆ. ಮುಂದೆ ಸೈನ್ಯದ ಬಸ್‌ನಲ್ಲಿ ಶ್ರೀನಗರಕ್ಕೆ ಪ್ರಯಾಣ. ಅತಿಯಾದ ಹಿಮಪಾತದಿಂದ ಜಮ್ಮು- ಶ್ರೀನಗರದ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿರುತ್ತದೆ. ಹಲವಾರು ದಿನಗಳು ಟ್ರಾನ್ಸಿಟ್ ಕ್ಯಾಂಪಿನಲ್ಲೇ ಕಳೆಯಬೇಕಾದ ಪರಿಸ್ಥಿತಿ. ಅಂತೂ ಕೊನೆಗೆ ಫೆಬ್ರವರಿ 13 ರಂದು ಹೆದ್ದಾರಿಯನ್ನ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ.
14 ಫೆಬ್ರವರಿ ಬೆಳಗಿನ 3:30 ಕ್ಕೆ 2547 ಸಿಆರ್ಪಿಎಫ್ ಯೋಧರ 78 ವಾಹನಗಳ ಬೃಹತ್ ಕನ್ವೆ ಜಮ್ಮುವಿನ ಕ್ಯಾಂಪಿನಿಂದ ಶ್ರೀನಗರಕ್ಕೆ ಹೊರಡು ತ್ತದೆ. ಮಾರ್ಗಮಧ್ಯದಲ್ಲಿ ರಾಮಬಾಗ್ ಎನ್ನು ವಲ್ಲಿ ಮಧ್ಯಾಹ್ನದ ಊಟಕ್ಕೆ ನಿಲ್ಲಿಸಿ, ಪುನಃ ಈ ವಾಹನಗಳು ಶ್ರೀನಗರದತ್ತ ತಮ್ಮ ಪ್ರಯಾಣ ವನ್ನು ಮುಂದುವರಿಸುತ್ತವೆ. ಕತ್ತಲಾಗುವು ದರೊಳಗೆ ಶ್ರೀನಗರ ತಲುಪಬೇಕೆಂದು ನಿಗದಿಯಾಗಿರುತ್ತದೆ.
ಇತ್ತ ಈ ಭಯೋತ್ಪಾದಕ ತಂಡಕ್ಕೆ ಜಮ್ಮುವಿ ನಿಂದ ಹೊರಟ ಸೈನ್ಯದ 78 ವಾಹನಗಳ ಬಗ್ಗೆ ಮಾಹಿತಿ ಸಿಗುತ್ತದೆ. ಮಧ್ಯಾಹ್ನದ ಮೂರು ಗಂಟೆ ಯಷ್ಟೊತ್ತಿಗೆ ಆ ವಾಹನಗಳು ಪುಲ್ವಾಮಾವನ್ನು ಹಾದು ಹೋಗುವ ಅಂದಾಜು ಇರುತ್ತದೆ. ತಾವು ತಯಾರಿಸಿದ ಸುಮಾರು 200 ಕೇಜಿಯಷ್ಟು ಸ್ಫೋಟಕಗಳನ್ನು ಒಂದು ವಾಹನಕ್ಕೆ ತುಂಬಿ, ವಾಹನದ ಕೀಲಿಯನ್ನು ಅದಿಲ್ ಅಹ್ಮದ್ ದರ್‌ಗೆ ಕೊಟ್ಟು ಉಳಿದವರು ಕಣ್ಮರೆಯಾಗಿ ಬಿಡುತ್ತಾರೆ. ಹಂತಕ ಲಡೂರ್ ಕ್ರಾಸಿನ ಒಂದು ಹಳ್ಳಿಯ ಬಳಿ ಹೊಂಚುಹಾಕಿ ಕಾದಿರುತ್ತಾನೆ. ಮಧ್ಯಾಹ್ನ ಸೈನ್ಯದ ವಾಹನಗಳು ದೂರದಿಂದಲೇ ಕಾಣಿಸಿಕೊಳ್ಳುತ್ತಲೇ ನಿಧಾನವಾಗಿ ಹೆದ್ದಾರಿಯ ಕಡೆಗೆ ವಾಹನ ಚಲಿ ಸಲು ಪ್ರಾರಂಭಿಸುತ್ತಾನೆ. ಸುಮಾರು 25-30 ವಾಹನಗಳು ಹಾದು ಹೋದ ಅನಂತರ ತನ್ನ ವಾಹನವನ್ನು ಜೋರಾಗಿ ಚಲಾಯಿಸಿ ಒಂದು ಬಸ್‌ಗೆ ಢಿಕ್ಕಿ ಹೊಡೆದು ಬಿಡುತ್ತಾನೆ. ಕ್ಷಣಾರ್ಧ ದಲ್ಲಿ ಭೀಕರ ಸ್ಫೋಟ ಉಂಟಾಗಿ ಸೈನ್ಯದ ವಾಹನ ಮತ್ತು ಭಯೋತ್ಪಾದಕನ ವಾಹನ ಛಿದ್ರಗೊಂಡು ಬಿಡುತ್ತವೆ. ಬಸ್ಸಿನಿಂದ ಹೊರಚಿಮ್ಮಿದ ದೇಹಗಳು ಹೆದ್ದಾರಿಯ ಸುತ್ತಲೂ ಚೆಲ್ಲಾಪಿಲ್ಲಿಯಾಗುತ್ತವೆ. ಘಟನೆಯಲ್ಲಿ ಕನ್ನಡಿಗ ಯೋಧ ಗುರು ಅವರೂ ಸೇರಿದಂತೆ 40ಯೋಧರು ಹುತಾತ್ಮರಾಗು
ತ್ತಾರೆ. ಇಡೀ ದೇಶವೇ ಅಶ್ರುತರ್ಪಣದೊಂದಿಗೆ ವಿದಾಯ ಹೇಳುತ್ತದೆ.
ಮುಯ್ಯಿ ತೀರಿಸಿದ ಭಾರತ
ಫೆ.26ರಂದು ಬೆಳಕು ಹರಿಯುವುದಕ್ಕೂ ಸ್ವಲ್ಪ ಮುನ್ನವೇ ನಮ್ಮ ವಾಯುಪಡೆಯು ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ಜೈಶ್ ಉಗ್ರರ ಶಿಬಿರದ ಮೇಲೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ಏರ್‌ಡ್ರಾಪ್ ಮಾಡಿ ಬಂದಿತ್ತು. ಈ ಅನಿರೀಕ್ಷಿತ ದಾಳಿಗೆ ಬಾಲಾಕೋಟ್‌ನ ಉಗ್ರ ಶಿಬಿರಗಳು ನಾಶವಾಗಿದ್ದಲ್ಲದೆ, ಅಲ್ಲಿದ್ದ ಭಾರೀ ಸಂಖ್ಯೆಯ ಉಗ್ರರೂ ಹತರಾದರು. ಪುಲ್ವಾಮಾ ದಾಳಿ ನಡೆದ 12 ದಿನಗಳಲ್ಲಿಯೇ ಭಾರತ ಈ ಪ್ರತೀಕಾರ ತೀರಿಸಿಕೊಂಡಿತ್ತು.
– ವಿಂಗ್ ಕಮಾಂಡರ್ ಸುದರ್ಶನ