Advertisement
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಅಡಿಕೆ ದರ ಸಮತೋಲನ, ಆಮದು ವಿಚಾರ, ಎಲೆ ಚುಕ್ಕಿ, ಹಳದಿ ರೋಗದ ಸಹಿತ ಎಲ್ಲದರಲ್ಲೂ ಪಕ್ಷವು ಯಾವತ್ತೂ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದೆ. ರೋಗ ನಿಯಂತ್ರಣದ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದ್ದು, ಮಾತಕತೆ ನಡೆಯುತ್ತಿದೆ. ಬೆಳೆ ವಿಮೆ ಹಣ ರೈತರಿಗೆ ಬಾರದ ಬಗ್ಗೆ ಹಾಗೂ ಬೆಳೆ ಸಮೀಕ್ಷೆ ಸಮಸ್ಯೆ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿ ಷತ್ತಿನ ಉಪಚುನಾವಣೆಯಲ್ಲಿ ಪಕ್ಷ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಿದ್ದು, ಅಭೂತಪೂರ್ವ ಗೆಲುವು ದಾಖಲಿಸುವುದು ನಿಶ್ಚಿತ ಎಂದು ಚೌಟ ಹೇಳಿದರು. ಪುತ್ತೂರಿನ ಕಿಶೋರ್ ಕುಮಾರ್ ಬೊಟ್ಯಾಡಿ ಪಕ್ಷದ ತಳಮಟ್ಟದಿಂದ ಬೆಳೆದು ಬಂದ ಕಾರ್ಯಕರ್ತ. ಪಕ್ಷದ ಗೆಲುವಿಗಾಗಿ 13 ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ನಿರ್ವಹಣೆಗೆ ಬೇಕಾದ ತಂಡ ರಚಿಸಿ ಮತದಾರರನ್ನು ತಲುಪುವ ಪ್ರಯತ್ನ ನಡೆಯುತ್ತಿದೆ. ಒಟ್ಟು 6,011 ಮತಗಳಲ್ಲಿ ಪಕ್ಷದ ಪರವಾಗಿ 3.5 ಸಾವಿರಕ್ಕೂ ಹೆಚ್ಚಿದೆ ಎಂದರು. 3.5 ಲಕ್ಷ ಸದಸ್ಯತ್ವ ಗುರಿ
ಸದಸ್ಯತ್ವ ಅಭಿಯಾನ ಸೆ.2ರಿಂದ ದೇಶದೆಲ್ಲೆಡೆ ನಡೆಯುತ್ತಿದೆ. ಈಗಾಗಲೇ 2.5 ಲಕ್ಷ ಸದಸ್ಯರು ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟಿದ್ದು, 3.5 ಲಕ್ಷದ ಗುರಿಯನ್ನು ತಲುಪುವ ವಿಶ್ವಾಸವಿದೆ. ಎರಡನೇ ಹಂತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನ ಮಾಡಲಾಗುವುದು ಎಂದು ಸಂಸದರು ಹೇಳಿದರು.
Related Articles
Advertisement