Advertisement

Puttige Mutt Paryaya: ಪುತ್ತಿಗೆ ಮಠದ ಪಟ್ಟದ ದೇವರು ವಿಟ್ಠಲ

01:32 PM Jan 17, 2024 | Team Udayavani |

ಉಡುಪಿಯಲ್ಲಿ ಶ್ರೀಕೃಷ್ಣನ ಸಾಲಿಗ್ರಾಮಶಿಲಾ ವಿಗ್ರಹವನ್ನು ಮಧ್ವಾಚಾರ್ಯರು ಸ್ಥಿರಪ್ರತಿಷ್ಠೆ ಮಾಡಿ ಎಂಟು ಮಂದಿ ಸನ್ಯಾಸಿಶಿಷ್ಯರಿಗೆ ಸಂಚಾರದಲ್ಲಿ ಪೂಜಿಸಲು ಒಂದೊಂದು ಪಂಚಲೋಹದ ವಿಗ್ರಹವನ್ನು ನೀಡಿದರು. ಪುತ್ತಿಗೆ ಮಠ ಪರಂಪರೆಯ ಆದ್ಯಯತಿ ಶ್ರೀ ಉಪೇಂದ್ರತೀರ್ಥರಿಗೆ ನೀಡಿದ ದೇವರು ವಿಟ್ಠಲ. ಸೊಂಟದ ಮೇಲೆ ಕೈ ಇಟ್ಟ ಮೂರ್ತಿ ಇದು.

Advertisement

ಎಡಗೈಯಲ್ಲಿ ಶಂಖವಿದ್ದರೆ ಬಲಗೈ ಕೆಳಭಾಗವನ್ನು ತೋರಿಸುತ್ತದೆ. ಸುಮಾರು 9 ಇಂಚು ಎತ್ತರದ ವಿಗ್ರಹವಿದು. ವಿಗ್ರಹದ ಆಚೀಚೆ ರುಗ್ಮಿಣೀ ಸತ್ಯಭಾಮೆಯರ ವಿಗ್ರಹವಿದೆ. ಇವರ ಒಂದೊಂದು ಕೈಯಲ್ಲಿ ಕಮಲಪುಷ್ಪವಿದೆ. ಮಂದಸ್ಮಿತ ವಿಟ್ಠಲನಾಗಿ ತೋರುತ್ತಾನೆ.

ಇನ್ನೆರಡು ಮಠಗಳಿಗೂ ವಿಟ್ಠಲನ ವಿಗ್ರಹವನ್ನು ಉಪಾಸನೆಗೆ ಕೊಟ್ಟಿರುವ ಕಾರಣ ಆದ್ಯಯತಿ ಹೆಸರಿನಲ್ಲಿ ಉಪೇಂದ್ರ ವಿಟ್ಠಲ ಎಂದು ಕರೆಯುವ ವಾಡಿಕೆ ಬಂದಿದೆ. ಪಂಢರಪುರ ಕ್ಷೇತ್ರದಲ್ಲಿ ವಿಟ್ಠಲನೇ ಅಧಿದೈವ. ಇಲ್ಲಿಯೂ ಸೊಂಟದ ಮೇಲೆ ಕೈ ಇಟ್ಟ ಮೂರ್ತಿ. ಇದು ಕೃಷ್ಣನ ಇನ್ನೊಂದು ರೂಪ. ಅನ್ನಬ್ರಹ್ಮನ ನಾಡಿನಲ್ಲಿ ನಾದಬ್ರಹ್ಮನ ಉಪಾಸನೆ ಜತೆಯಾಗಿ ನಡೆಯುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next