Advertisement

ಪುತ್ರನ್‌ ಮೂಲಸ್ಥಾನ ಮುಂಬಯಿ: ಮಹಾಸಭೆ

11:33 AM Oct 12, 2018 | |

ಮುಂಬಯಿ: ಪುತ್ರನ್‌ ಮೂಲಸ್ಥಾನ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮುಂಬಯಿ ಸಮಿತಿಯ ಅಧ್ಯಕ್ಷ ಗೋವಿಂದ ಎನ್‌. ಪುತ್ರನ್‌ ಅವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮದ ಶ್ರೀ ಲಕ್ಷ್ಮೀನಾರಾಯಣ ಮಂದಿರದ ವಠಾರದಲ್ಲಿ ನಡೆಯಿತು. ಗೋವಿಂದ ಎನ್‌. ಪುತ್ರನ್‌ ಅವರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು.

Advertisement

ಗೌರವ ಕಾರ್ಯದರ್ಶಿ ದಾಮೋದರ ಬಿ. ಪುತ್ರನ್‌ ಗತ ವಾರ್ಷಿಕ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಜಗನ್ನಾಥ ಆರ್‌. ಪುತ್ರನ್‌ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಅಜಿತ್‌ ಸುವರ್ಣ ಅವರನ್ನು ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಅಜಿತ್‌ ಸುವರ್ಣ ಅವರು, ಮೊಗವೀರ ಬಾಂಧವರು ಎಲ್ಲರೂ ಒಟ್ಟಿಗೆ ಒಳ್ಳೆಯ ಭಾವನೆಯಿಂದ ನಮ್ಮ ಸಮುದಾಯದ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಬೇಕು. ಪುತ್ರನ್‌ ಮೂಲಸ್ಥಾನದ ಮುಖಾಂತರ ಉತ್ತಮ ಸಮಾಜಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.

ಈ ಸಂದರ್ಭದಲ್ಲಿ 2017-2018 ನೇ ಶೈಕ್ಷಣಿಕ ಸಾಲಿನ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಆದಿತ್ಯ ಡಿ. ಅಮೀನ್‌, ತೋರಣ ಪಿ. ಪುತ್ರನ್‌, ದಿವ್ಯೇಶ್‌ ಟಿ. ಕಾಂಚನ್‌, ವಾಣಿಜ್ಯ ಪದವಿಯ ಪ್ರತಿಭಾನ್ವಿತರಾದ ಪುನೀತ್‌ ಎ. ಪುತ್ರನ್‌, ಬಿಎಂಎಸ್‌ನ ಪ್ರಿಯಾ ಎ. ಪುತ್ರನ್‌, ಎಂಕಾಂನ ನಿವೇಶ್‌ ಕೆ. ಪುತ್ರನ್‌, ಎಂಬಿಎ ವಿಭಾಗದಲ್ಲಿ ಪೂಜಾ ಎಸ್‌. ಪುತ್ರನ್‌, ರೋಶನ್‌ ಆರ್‌. ಪುತ್ರನ್‌ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಇತ್ತೀಚೆಗೆ ಭರತನಾಟ್ಯ ರಂಗಪ್ರವೇಶಗೈದ ವೈಷ್ಣವಿ ಕೇಶವ ಪುತ್ರನ್‌, ಡಾ| ಅಪರ್ಣಾ ಸಿ. ಅಮೀನ್‌ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಭಿಕರ ಪರವಾಗಿ ಕೆ. ಭೋಜ ಪುತ್ರನ್‌, ಜಗನ್ನಾಥ ಪಿ. ಪುತ್ರನ್‌, ವಿಶ್ವನಾಥ ಪುತ್ರನ್‌, ಕೇಶವ ಆರ್‌. ಪುತ್ರನ್‌, ಶ್ಯಾಮ ಕೆ. ಪುತ್ರನ್‌ ಅವರ ಮಾತನಾಡಿ, ಸಲಹೆ ಸೂಚನೆಗಳನ್ನು ನೀಡಿ ಶುಭಹಾರೈಸಿದರು.

Advertisement

ಅಧ್ಯಕ್ಷ ಗೋವಿಂದ ಪುತ್ರನ್‌ ಅವರು ಮಾತನಾಡಿ, ನಾಗಬ್ರಹ³ ಗುಡಿಯ ದುರಸ್ಥಿ ಕಾರ್ಯದಲ್ಲಿ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು. ಮೂಲಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕಾರ ನೀಡುವುದರೊಂದಿಗೆ ಪಾಲ್ಗೊಳ್ಳುವ ಎಲ್ಲರಿಗೂ ನಾಗಬ್ರಹ್ಮ ದೇವರ ಅನುಗ್ರಹ ಸದಾಯಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಸಹಾಯ ಮಾಡಿದ ಪುತ್ರನ್‌ ಕುಟುಂಬಸ್ಥರಿಗೂ, ದಾನಿಗಳಿಗೂ ದೇವರು ಅನುಗ್ರಹಿಸಲಿ ಎಂದು ನುಡಿದರು. ಕಾರ್ಯದರ್ಶಿ ದಾಮೋದರ ಬಿ. ಪುತ್ರನ್‌ ವಂದಿಸಿದರು. 

ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next