Advertisement
ಈಗಾಗಲೇ ಬಿಗಿ ಭದ್ರತೆಯಲ್ಲಿ ಸಂಚರಿಸುವ ಪುಟಿನ್ ಅನಾರೋಗ್ಯ ಬಾಧಿಸುತ್ತಿದೆಯೋ ಇಲ್ಲವೋ ಎಂಬುದು ಜಗತ್ತಿಗೆ ಗೊತ್ತಾಗಲೇ ಬಾರದು ಎಂಬ ಕಾರಣಕ್ಕೆ ಹೊಸ ಕ್ರಮವನ್ನೂ ಅನುಸರಿಸಲಾಗುತ್ತಿದೆಯಂತೆ. ಅವರ ಉಗುಳಿದ್ದನ್ನು, ಮಲ, ಮೂತ್ರಗಳನ್ನು ಸಂಗ್ರಹಿಸುವುದಕ್ಕೂ ವಿಶೇಷ ಸಿಬ್ಬಂದಿಯನ್ನು ರಷ್ಯಾ ಸರ್ಕಾರ ಏರ್ಪಾಡು ಮಾಡಿದೆ ಎಂದು ಫ್ರಾನ್ಸ್‌ನ ಮಾಧ್ಯಮವೊಂದು ವರದಿ ಮಾಡಿದೆ.
Related Articles
ಈ ಉದ್ದೇಶಕ್ಕಾಗಿ ರಷ್ಯಾದ ಫೆಡರಲ್ ಗಾರ್ಡ್ ಸರ್ವಿಸ್ ವಿಶೇಷ ಸಿಬ್ಬಂದಿ, ವಿಶೇಷ ಸೂಟ್‌ಕೇಸ್‌ಗಳನ್ನೂ ವ್ಯವಸ್ಥೆ ಮಾಡಿದೆ. ರಷ್ಯಾ ಬಗ್ಗೆ ಪುಸ್ತಕಗಳನ್ನು ಬರೆದು ಜನಪ್ರಿಯರಾಗಿರುವ ಮಿಖಾಯಿಲ್ ರುಬಿನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಇದೊಂದು ಹೊಸ ಕ್ರಮ ಅಲ್ಲವೆಂದಿದ್ದಾರೆ.
Advertisement
ಇದನ್ನೂ ಓದಿ:ಸಾಮಾನ್ಯರಿಗೆ ಅನ್ವಯವಾಗುವ ಕಾನೂನು ಗಾಂಧಿ ಕುಟುಂಬಕ್ಕೂ ಅನ್ವಯವಾಗುತ್ತದೆ: ತೇಜಸ್ವಿ ಸೂರ್ಯ
2017ರ ಮೇ 29ರಂದು ಪುಟಿನ್ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಮತ್ತು 2019ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಇದೇ ರೀತಿಯ ಕ್ರಮ ಅನುಸರಿಸಲಾಗಿತ್ತು ಎಂದು ಹೇಳಿದ್ದಾರೆ.
ಇನ್ನೂ ಒಂದು ಮಾಹಿತಿ ಪ್ರಕಾರ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ದಿನದಿಂದ ಇಂಥ ಕ್ರಮವನ್ನು ಭದ್ರತಾ ಕಾರಣಗಳಿಗಾಗಿ ಅನುಸರಿಸಲಾಗುತ್ತಿದೆಯಂತೆ.