Advertisement

ರಶ್ಯದೊಂದಿಗಿನ ಭಾರತದ ರಕ್ಷಣಾ ವಹಿವಾಟಿನ ಮೇಲೆ ಅಮೆರಿಕ, ಚೀನ ಕಣ್ಣು

11:32 AM Oct 05, 2018 | Team Udayavani |

ಹೊಸದಿಲ್ಲಿ : ಭಾರತಕ್ಕೆ ಆಗಮಿಸಿ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ ಅವರಿಂದ ಹಾರ್ದಿಕ ಸ್ವಾಗತ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಲಿಂಗಿತರಾಗಿರುವ ರಶ್ಯ ಅಧ್ಯಕ್ಷ  ವ್ಲಾದಿಮಿರ್‌ ಪುಟಿನ್‌ ಅವರಿಂದು ಭಾರತದೊಂದಿಗೆ ರಕ್ಷಣಾ ಪರಿಕರ ಖರೀದಿಯ ಮಹತ್ವದ ಒಪ್ಪಂದಕ್ಕೆ ಸಹಿಹಾಕಲಿದ್ದಾರೆ. 

Advertisement

ಇಡಿಯ ವಿಶ್ವ, ಮುಖ್ಯವಾಗಿ ಅಮೆರಿಕ ಮತ್ತು ಚೀನ, ಭಾರತದಲ್ಲಿ ಪುಟಿನ್‌ ಅವರ ನಡೆ-ನುಡಿ-ವಹಿವಾಟನ್ನು ತದೇಕ ಚಿತ್ತದಿಂದ ಗಮನಿಸುತ್ತಿದೆ. 

ಹೈದರಾಬಾದ್‌ ಹೌಸ್‌ನಲ್ಲಿಂದು ಶುಕ್ರವಾರ ಬೆಳಗ್ಗೆ ನಡೆಯುವ ಉಭಯ ನಾಯಕರೊಳಗಿನ ಮಾತುಕತೆಯ ವೇಳೆ ಅಜೆಂಡಾದ ಅಗ್ರಸ್ಥಾನದಲ್ಲಿರುವ ವಿಷಯವೆಂದರೆ ಭಾರತ ರಶ್ಯದಿಂದ ನಡೆಸಲಿರುವ  ಎಸ್‌ 400 ವಾಯು ರಕ್ಷಣಾ ವ್ಯವಸ್ಥೆಯ ಖರೀದಿ ವ್ಯವಹಾರ. 

ಈ  ಪ್ರಸ್ತಾವಿತ ವ್ಯವಹಾರಕ್ಕೆ ಅಮೆರಿಕ ಈಗಾಗಲೇ ಭಾರತಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳಿ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. 

ಅಮೆರಿಕ ಈಗಾಗಲೇ ಹಾಕಿರುವ ನಿಷೇಧದ ಪ್ರಕಾರ ಭಾರತ ಸಹಿತ ವಿಶ್ವದ ಯಾವುದೇ ದೇಶ ಇರಾನ, ಉತ್ತರ ಕೊರಿಯ ಅಥವಾ ರಶ್ಯದೊಂದಿಗೆ ತೈಲ, ಶಸ್ತ್ರಾಸ್ತ್ರ ಖರೀದಿಯ ವಹಿವಾಟು ನಡೆಸುವಂತಿಲ್ಲ. 

Advertisement

ಆದರೂ ಭಾರತ ಅಮೆರಿಕಕ್ಕೆ ಸಡ್ಡು ಹೊಡೆದು ರಶ್ಯಕ್ಕೆ ನಿಕಟವಾಗಿದ್ದು 36,000 ಕೋಟಿ ರೂ.ಗಳ ರಕ್ಷಣಾ ವಹಿವಾಟು ನಡೆಸಲು ಮುಂದಾಗಿದೆ. ಇದರಿಂದಾಗಿ ಅಮೆರಿಕ ಈಗಿನ್ನು ಚೀನದ ವಿರುದ್ಧ ಪ್ರತಿತಂತ್ರ ರೂಪಿಸಲು ಭಾರತವನ್ನು ತನ್ನ ಹತ್ತಿರಕ್ಕೆ ಸೆಳೆದುಕೊಳ್ಳುವ ತಂತ್ರವನ್ನು ಕಾರ್ಯಗತ ಗೊಳಿಸುವ ಬಿಗಿ ಹಗ್ಗದ ಮೇಲಿನ ನಡೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 

ರಶ್ಯದಿಂದ ಚೀನ ಎಸ್‌ 400 ಮತ್ತು ಎಸ್‌ಯು 35 ಫೈಟರ್‌ ಜೆಟ್‌ಗಳನ್ನು ಖರೀದಿಸುವುದರ ವಿರುದ್ಧ ಅಮೆರಿಕ ಕಳೆದ ತಿಂಗಳಲ್ಲಷ್ಟೇ ನಿಷೇಧ ಹೇರಿದೆ. ಈಗಿನ್ನು ಭಾರತದ ಮೇಲಿನ ಪರಿಣಾಮ ಏನೆಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next