Advertisement

Puthige Swamiji ಗೀತಾರ್ಥ ಚಿಂತನೆ 16 : ಶ್ರೀಕೃಷ್ಣಾವತಾರದಲ್ಲಿ ಕ್ಷೋಭೆಯೂ ಆನಂದವೂ…

11:57 PM Aug 24, 2024 | Team Udayavani |

‘ಸ್ವವಿಹಿತವೃತ್ಯಾ..’ ಎನ್ನುವಲ್ಲಿ ‘ಸ್ವ’ ಎನ್ನುವುದಕ್ಕೆ ‘ತನಗೆ’ ವಿಹಿತವಾದದ್ದು ಎಂಬರ್ಥವಿದೆ. ‘ಸ್ವ’ ಎನ್ನುವುದಕ್ಕೆ ‘ಭಗವಂತ’ (ಸ್ವತಂತ್ರೋ ಭಗವಾನ್ ವಿಷ್ಣುಃ) ಎಂಬರ್ಥವೂ ಇದೆ. ‘ಸ್ವವಿಹಿತವೃತ್ಯಾ’ ಎಂದು ಹೇಳಿದರೇ ವಿನಾ ‘ಸ್ವಪ್ರೇರಿತವೃತ್ಯಾ…’ ಎನ್ನಲಿಲ್ಲ. ಸ್ವಪ್ರೇರಿತವೆಂದರೆ ತನಗೆ ಪ್ರೇರಣೆಯಾದಂತೆ ಎಂದಾಗುತ್ತದೆ. ಹೀಗಾದರೆ ಎಲ್ಲರೂ ಅವರವರಿಗೆ ತೋಚಿದ್ದನ್ನು ಸರಿ ಎಂದು ವಾದ ಮಾಡಬಹುದು. ಹೀಗಾದಾಗ ಇಡೀ ವ್ಯವಸ್ಥೆೆ ಕೆಟ್ಟು ಹೋಗುತ್ತದೆ. ಎಲ್ಲಿಯವರೆಗೆ ಲೋಕದ ವ್ಯವಸ್ಥೆೆ ಕೆಡುತ್ತದೆ ಎಂದರೆ ಭಗವಂತನ ಮಾಲಕತ್ವವನ್ನೇ ನಿರಾಕರಿಸುವವರೆಗೆ. ಇಂತಹ ವಿವಿಧ ಸಂದರ್ಭಗಳಲ್ಲಿ ಭಗವಂತ ಅವತರಿಸಿದ.

Advertisement

ಸೀತೆಯನ್ನು ರಾವಣ ಕದ್ದೊಯ್ದದ್ದು ಮಾತ್ರವಲ್ಲ, ಇದನ್ನೇ ಧರ್ಮ, ಈ ಜಗತ್ತು ನನ್ನದೇ, ನಾನು ಹೇಳಿದ್ದೇ ಧರ್ಮ ಎಂದು ರಾವಣ ಸಮರ್ಥಿಸಿದ. ರಾವಣನನ್ನು ನಿಗ್ರಹಿಸಲು ರಾಮಾವತಾರವಾಗಬೇಕಾಯಿತು. ಹಿರಣ್ಯಕಶಿಪು ಭಗವಂತನ ಮಾಲಕತ್ವವನ್ನು ನಿರಾಕರಿಸಿ ಪ್ರಹ್ಲಾದನೆದುರು ನಾನೇ ನಾರಾಯಣ, ನನ್ನಾಜ್ಞೆಯೇ ಅಂತಿಮ ಎಂದಾಗ ನರಸಿಂಹಾವತಾರವಾಯಿತು. ಇದರಿಂದ ಮುಖ್ಯವಾಗಿ ಭಗವಂತ ಈ ಜಗತ್ತಿನ ಒಡೆಯ (ಭಗವಧೀನತ್ವಾತ್) ಎನ್ನುವುದು ಸಿದ್ಧಗೊಳ್ಳುತ್ತದೆ. ಕೃಷ್ಣಾವತಾರವಾದಾಗಲೂ ಕೆಲವು ಜೀವಿಗಳಿಗೆ ಕ್ಷೋಭೆಯೂ, ಕೆಲವು ಜೀವಿಗಳಿಗೆ ಆನಂದವೂ ಆಯಿತು ಎಂಬುದನ್ನು ಶ್ರೀಕೃಷ್ಣಜನ್ಮಾಷ್ಟಮಿ ಸುಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next