Advertisement
ಪಾರ್ಕಿಂಗ್ ಪ್ರದೇಶದ ಬಳಿ ಹೊರೆ ಕಾಣಿಕೆ ಆವರಣ ಸಮೀಪ ಅಚ್ಚುಕಟ್ಟಿನ ಅನ್ನಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಅನ್ನ, ಸಾರು, ಪಾಯಸ, ಮೈಸೂರುಪಾಕ್, ಉಪ್ಪಿನಕಾಯಿ, ಮಜ್ಜಿಗೆ, ಪಲ್ಯ ವ್ಯವಸ್ಥೆ ಮಾಡಲಾಗಿತ್ತು.
ಪರ್ಯಾಯ ಶ್ರೀಕೃಷ್ಣಾಪುರ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಂಗಲೋತ್ಸವದ ಮಹಾಸಂತರ್ಪಣೆ
ಬಳಿಕ ಅನ್ನಪ್ರಸಾದಗಳನ್ನು ಸಾರ್ವಜನಿಕರಿಗೆ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ “ಸೂರೆ’ ಬಿಡಲಾಯಿತು. ಪರ್ಯಾಯದ ಕೊನೆ ದಿನ “ಸೂರೆ’ ಆಚರಣೆ ವಿಶೇಷತೆಗಳಿಂದ ಕೂಡಿದೆ. “ಸೂರೆ’ ಆಹಾರವನ್ನು ಕೃಷ್ಣ ಪ್ರಸಾದ ಎಂದೇ
ಭಕ್ತರು ಭಾವಿಸುತ್ತಾರೆ. ಮಧ್ಯಾಹ್ನದ ಅನ್ನಸಂತರ್ಪಣೆ ಬಳಿಕ ಉಳಿದ ಆಹಾರ ಪದಾರ್ಥ ಭಕ್ತರು “ಸೂರೆ’ (ತೆಗೆದುಕೊಂಡು ಹೋಗುವುದು) ಮಾಡಿದರು.