ದೋಟಿಹಾಳ: ಮನೆಯಲ್ಲಿ ಓದದೇ ಖಾಲಿ ಇಟ್ಟಿರುವ ಪುಸ್ತಕಗಳನ್ನು ಹಾಳು ಮಾಡದೇ,ಮನೆ ಬಾಗಿಲಿಗೆ ಬಂದ ಜೋಳಿಗೆಗೆ ಪುಸ್ತಕಹಾಕುವುದರ ಮೂಲಕ ಬಡ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದು ಪಿಡಿಒ ಚಂದ್ರಶೇಖರ ಕಂದಕೂರ ಹೇಳಿದರು.
ಕಿಲ್ಲಾರಹಟ್ಟಿ ಗ್ರಾಪಂ ವತಿಯಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪುಸ್ತಕಗಳು ವಿದ್ಯಾರ್ಥಿಗಳ ಉಜ್ಜಲ ಭವಿಷ್ಯ ರೂಪಿಸುತ್ತವೆ. ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಪುಸ್ತಕಗಳು ಸಿಗದೇ ಓದುಗರು ನಿರಾಸೆ ಅನುಭವಿ ಸುತ್ತಿದ್ದಾರೆ. ಕೋವಿಡ್-19 ಇರುವುದರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸಕಡಿಮೆಯಾಗುತ್ತಿದೆ. ಹೀಗಾಗಿ ಗ್ರಂಥಾಲಯಗಳಲ್ಲಿ ಶಾಲಾ ಮಕ್ಕಳ ಹೆಸರು ನೋಂದಾಯಿಸಿಕೊಂಡುಅವರಿಗೆ ಓದುವ ಹವ್ಯಾಸ ಹೆಚ್ಚಿಸಬಹುದು. ಅದಕ್ಕಾಗಿ ಪುಸ್ತಕಗಳನ್ನು ಹಾಳು ಮಾಡದೇ, ಮನೆಬಾಗಿಲಿಗೆ ಬಂದ ಜೋಳಿಗೆಗೆ ಪುಸ್ತಕ ಹಾಕಿರಿ. ಇವುಗಳನ್ನು ಗ್ರಂಥಾಲಯದಲ್ಲಿ ಸುರಕ್ಷಿತವಾಗಿಇಟ್ಟು ವಿದ್ಯಾರ್ಥಿಗಳಿಗೆ ಮತ್ತು ಓದುಗಾಗರಿಗೆಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ವೇಳೆ ಶಾಲಾ ಮಕ್ಕಳು, ಗ್ರಾಮಸ್ಥರು ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.
ಮಕ್ಕಳ ಶೈಕ್ಷಣಿಕ ಬದುಕಿಗೆ ಓದುವ ಬೆಳಕು ಸ್ಫೂರ್ತಿ :
ಕಾರಟಗಿ: ಮಕ್ಕಳ ಸ್ನೇಹಿ ಗ್ರಾಪಂ ಮತ್ತು “ಓದುವ ಬೆಳಕು’ ಕಾರ್ಯಕ್ರಮದಡಿ ತಾಲೂಕಿನ ಸಿದ್ದಾಪುರ ಗ್ರಾಪಂ ವತಿಯಿಂದ ಗುರುವಾರ ಪುಸ್ತಕ ಜೋಳಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಮಕ್ಕಳ ಶೈಕ್ಷಣಿಕ ಬದುಕಿಗೆ ಸ್ಫೂರ್ತಿ ನೀಡಲಿ. ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ನಂತರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕ ವೃಂದ, ಗ್ರಾಪಂ ಸಿಬ್ಬಂದಿ, ಅಂಗನವಾಡಿ, ಆಶಾ, ಆರೋಗ್ಯ ಇಲಾಖೆಯ ಸಿಬ್ಬಂದಿ, ವಸತಿ ನಿಲಯಗಳ ವಾರ್ಡ್‌ನ್, ಸಿಬ್ಬಂದಿ ಹಾಗೂ ಬಿಎಲ್‌ಒಗಳು ಗ್ರಾಮದ ಪ್ರತಿಯೊಂದು ವಾರ್ಡ್ ಗಳ ಮೂಲಕ ತೆರಳಿ ನಾಗರಿಕರಿಂದ ಸುಮಾರು 300ಕ್ಕೂ ಹೆಚ್ಚು ಪುಸ್ತಕಗಳನ್ನು ಜೋಳಿಗೆಯಲ್ಲಿ ಸಂಗ್ರಹಿಸಿ ಗ್ರಂಥಾಲಯಕ್ಕೆ ಒಪ್ಪಿಸಲಾಯಿತು. ಕಾರಟಗಿ ತಾಪಂ ಅಧ್ಯಕ್ಷ ಪ್ರಕಾಶ ಭಾವಿ, ಸಿದ್ದಾಪುರ ಪ್ರಭಾರಿ ಸಿಆರ್‌ಪಿ ಶಶಿಧರ ಸ್ವಾಮಿ, ಉಳೇನೂರು ಸಿಆರ್‌ಪಿ ನಜೀರ್ ಅಹಮ್ಮದ್,ಚಂದ್ರ ಶೇಖರ ಗಣವಾರಿ, ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ, ಪಿಡಿಒ ಸಾಯಿನಾಥ, ಗ್ರಾಪಂ ಸರ್ವ ಸದಸ್ಯರು ಇದ್ದರು.