Advertisement
ವೀರಲೋಕ ಪ್ರಕಾಶನ ಆಯೋಜಿಸಿದ್ದ 2ನೇ ವರ್ಷದ 3 ದಿನಗಳ ಪುಸ್ತಕ ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಸೇರಿದ್ದರು. ತಮ್ಮ ನೆಚ್ಚಿನ ಲೇಖಕರುಗಳ ಹಲವು ಪುಸ್ತಕಗಳನ್ನು ಕೊಂಡು ಕನ್ನಡ ಪುಸ್ತಕ ಪ್ರೀತಿ ತೋರಿದರು. ಜಯನಗರದ ಶಾಲಿನಿ ಆಟದ ಮೈದಾನಲ್ಲಿ ನಡೆದ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ 93 ಮಳಿಗೆಗಳನ್ನು ತೆರೆಯಲಾಗಿತ್ತು. ಒಂದೇ ಸೂರಿನಡಿ 300 ಲೇಖಕರ 1.5 ಲಕ್ಷ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ಪುಸ್ತಕ ಸಂತೆಯ ತುಂಬೆ ಲ್ಲಾ ಜನರ ಓಡಾಟವಿತ್ತು. ಸಂತೆ ಮಧ್ಯೆ ತಮ್ಮ ಹಳೆಯ ಸ್ನೇಹಿತರನ್ನು ಕಂಡು ಪುಳಕೀತರಾದರು. ಸಂತೆಯಲ್ಲಿ ತೆರೆದಿದ್ದ ಆಹಾರ ಮಳಿಗೆ ಗಳಿಗೆ ಭೇಟಿ ನೀಡಿ ರುಚಿ ಸವಿ ಸವಿದರು.
Related Articles
Advertisement
ಸುಮಾರು 150 ಲೇಖಕಿಯರು ಈ ಬಾರಿ ಪುಸ್ತಕ ಸಂತೆಯಲ್ಲಿ ಭಾಗವಹಿ ಸಿದ್ದರು.ದೊಡ್ಡಮಟ್ಟದಲ್ಲಿ ಪುಸ್ತಕ ಸಂತೆ ಕಾರ್ಯಕ್ರಮಯಶಸ್ವಿ ಆಗಿರುವುದು ಖುಷಿ ಕೊಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾನಿ ಆಟದ ಮೈದಾನದಲ್ಲಿ ಪುಟಾಣಿ ಮಕ್ಕಳು ರೈಲು ಬಂಡಿ ಏರಿ, ಆಟಿಕೆ ಕೊಂಡು ಖುಷಿಪಟ್ಟರು. ಆಹಾರ ಉತ್ಪನ್ನ, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳ ಮಳಿಗೆಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಶನಿವಾರ ಸುರಿದ ಮಳೆಯಿಂದಾಗಿ ಪುಸ್ತಕ ಸಂತೆಯ ಹೋರಾಂಗಣ ಕೆಸರು ಮಯವಾಯಿತು. ಆದರೂ, ಪುಸ್ತಕ ಪ್ರೇಮಗಳ ಉತ್ಸಾಹ ಕೊಂಚವೂ ಕಡಿಮೆಯಿರಲಿಲ್ಲ. ಈ ವೇಳೆ ಮಾತನಾಡಿದ ಜಯನಗರ ನಿವಾಸಿ ಸಂತೋಷ್, ಸಾಹಿತಿಗಳನ್ನು, ಓದುಗರನ್ನು ಹಾಗೂ ಪ್ರಕಾಶಕರನ್ನು ಒಂದೆಡೆ ಸೇರಿಸುವ ಪುಸ್ತಕ ಸಂತೆ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದು ತಿಳಿಸಿದರು.
ನೆಚ್ಚಿನ ಲೇಖಕರ ಸಹಿ ಪಡೆದ ಸಂಭ್ರಮ:
ಪುಸ್ತಕ ಸಂತೆಯಲ್ಲಿ ಲೇಖಕರಿಗೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಲಾಗಿತ್ತು. ಓದುಗರಿಗೆ ತಮಗಿಷ್ಟವಾದ ಲೇಖಕರನ್ನು ಹತ್ತಿರದಿಂದ ನೋಡುವ ಮತ್ತು ಪುಸ್ತಕ ಸಹಿ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಸಾಹಿತ್ಯಾಸಕ್ತಿರಿಗೆ ಲೇಖಕರ ಭೇಟಿ ಸುಲಭವಾಯಿತು. “ಓಲೇ (ಓದುಗ ಲೇಖಕ) ವಿಭಾಗದಲ್ಲಿ…’ ಹಿರಿಯ ಸಂಸ್ಕೃತ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಮೂಡ್ನಾಕೂಡು ಚಿನ್ನಸ್ವಾಮಿ, ವಿಶ್ವೇಶ್ವರ ಭಟ್, ಅಬ್ದುಲ್ ರಶೀದ್, ಎ.ಆರ್. ದತ್ತಾತ್ರಿ, ನರೇಂದ್ರ ರೈ ದೇರ್ಲ, ನಾಗರಾಜ ವಸ್ತಾರೆ, ಭಾರತಿ ಹೆಗಡೆ, ದೀಪಾ ಹಿರೇಗುತ್ತಿ, ದಾದಾಪೀರ್ ಜೈಮನ್, ಜಿ.ಬಿ. ಹರೀಶ್, ಶರಣು ಹುಲ್ಲೂರು, ವಿಕ್ರಮ್ ಹತ್ವಾರ್, ಕುಸುಮಾ ಆಯರಹಳ್ಳಿ ಅವರನ್ನು ಭೇಟಿ ಮಾಡಲು ಓದುಗರಿಗೆ ಅವಕಾಶ ನೀಡಲಾಗಿತ್ತು. ತಮ್ಮ ಮೆಚ್ಚಿನ ಲೇಖಕರ ಪುಸ್ತಕ ಖರೀದಿಸಿದ್ದ ಓದುಗರು ಪುಸ್ತದ ಮೇಲೆ ಹಸ್ತಾಕ್ಷರ ಪಡೆದು ಸಂಭ್ರಮ ಪಟ್ಟರು. ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಕೊಂಡರು. ಇದೇ ವೇಳೆ .ಪಿ. ಚಂದ್ರಿಕಾ ಅವರ “ಪ್ಯಾಲೆಟ್ ಸೇರಿದಂತೆ ಆರು ಕೃತಿಗಳು ಬಿಡುಗಡೆಯಾದವು.