Advertisement

ಖಾಯಂ ಸ್ಥಾನ ವಂಚಿತ ನ್ಯಾ|ಪುಷ್ಪಾ ಗಣೇದಿವಾಲಾ

02:05 AM Jan 31, 2021 | Team Udayavani |

ಹೊಸದಿಲ್ಲಿ: ಮೂರು ಚರ್ಚಾಸ್ಪದ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ಹೆಚ್ಚುವರಿ ನ್ಯಾ| ಪುಷ್ಪಾ ವಿ. ಗಣೇದಿವಾಲಾ ಅವರು ಖಾಯಂ ನ್ಯಾಯಮೂರ್ತಿ ಸ್ಥಾನದಿಂದ ವಂಚಿತರಾಗಿದ್ದಾರೆ.

Advertisement

ಜ. 20ರಂದು ಅವರನ್ನು ಖಾಯಂಗೊಳಿಸುವ ಪ್ರಸ್ತಾವಕ್ಕೆ ಕೊಲೀಜಿಯಂ ಒಪ್ಪಿಗೆ ನೀಡಿತ್ತು. ಆದರೆ ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಮಿತಿಯು ತನ್ನ ಶಿಫಾರಸನ್ನು ಹಿಂದೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ನ್ಯಾ| ಡಿ.ವೈ.ಚಂದ್ರ ಚೂಡ್‌ ಮತ್ತು ನ್ಯಾ|ಎ.ಎಂ.ಖಾನ್ವಿಲ್ಕರ್‌ ಅವರು ನ್ಯಾ| ಪುಷ್ಪಾ ವಿ. ಗಣೇದಿವಾಲಾ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾ| ಪುಷ್ಪಾ ಅವರು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿ ನೀಡಿದ್ದ ಮೂರು ತೀರ್ಪುಗಳು ಚರ್ಚೆಗೆ ಕಾರಣವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next