Advertisement

ಶುದ್ಧ ನೀರಿನ ಘಟಕ: ಅಕ್ರಮ ನಡೆದಿರುವುದು ನಿಜ

11:16 PM Mar 06, 2020 | Lakshmi GovindaRaj |

ವಿಧಾನ ಪರಿಷತ್‌: “ರಾಜ್ಯಾದ್ಯಂತ ಶುದ್ಧ ನೀರಿನ ಘಟಕದಲ್ಲಿ ಅವ್ಯವಹಾರ ಆಗಿರುವುದು ನಿಜ. ಈ ಸಂಬಂಧ ತನಿಖೆಗೂ ಆದೇಶ ನೀಡಿದ್ದೇವೆ. ವರದಿ ಬಂದ ತಕ್ಷಣವೇ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಅಥವಾ ಇದಕ್ಕಾಗಿ ಸದನ ಸಮಿತಿ ರಚಿಸಲು ಸಿದ್ಧರಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಭರವಸೆ ನೀಡಿದರು.

Advertisement

ಯಾವ ಕ್ರಮ?: ಬಿಜೆಪಿ ಸದಸ್ಯ ರಘುನಾಥ್‌ ಮಲ್ಕಾ ಪುರೆ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆ ಸಂಬಂಧ, ರಾಜ್ಯದ ಗ್ರಾಮೀಣ ಭಾಗದಲ್ಲಿ ಸಾವಿರಾರು ಕೋಟಿ ರೂ.ಖರ್ಚು ಮಾಡಿ ಆರಂಭಿಸಿರುವ ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸದೇ ಹಾಳಾಗಿವೆ. ಇದರ ದುರಸ್ತಿಗಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಸಚಿವರು ಉತ್ತರಿಸಿ, ಶುದ್ಧ ನೀರಿನ ಘಟಕದಲ್ಲಿ ಅಕ್ರಮ ಇಂದು ನಿನ್ನೆಯ ಸಮಸ್ಯೆಯಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗಲೂ ಈ ಬಗ್ಗೆ ಆಗ್ರಹಿಸಿದ್ದೆವು. ಯಾವುದೇ ಕ್ರಮ ಆಗಿರಲಿಲ್ಲ ಎಂದರು. ಇದಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಬೇಕು, ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಗುತ್ತಿಗೆ ಯಾವುದೋ ಕಂಪನಿಗೆ ನೀಡುವ ಬದಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡುವಂತೆ ಹಾಗೂ ಘಟಕ ಸ್ಥಾಪನೆಗೆ ಶಾಸಕರ ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಇದಕ್ಕೆ ಸಚಿವರು ಉತ್ತರಿಸಿ, ಶಾಸಕರ ನಿಧಿಯಿಂದ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಘಟಕ ನಿರ್ವಹಣೆ ಅವ್ಯವಹಾರ ಆರೋಪ ಕುರಿತ ಘಟಕೆ ಸಂಬಂಧ ವರದಿ ಬರುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಸದನ ಸಮಿತಿ ಮಾಡಲೂ ಸಿದ್ಧವಿದ್ದೇವೆ ಎಂದು ಭರವಸೆ ನೀಡಿದರು.

15 ವರ್ಷಕ್ಕೆ ಗುತ್ತಿಗೆ: ನೀರಿನ ಘಟಕಗಳ ನಿರ್ಮಾಣ, ನಿರ್ವಹಣೆ ಗುತ್ತಿಗೆ ನೀಡುವ ಕುರಿತು ಖುದ್ದಾಗಿ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವ ರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಶೇ.50ರ ಸಹ ಭಾಗಿತ್ವದಲ್ಲಿ ಘಟಕಗಳ ಸ್ಥಾಪನೆ ಮಾಡಿ 15 ವರ್ಷ ನಿರ್ವಹಣೆ ಗುತ್ತಿಗೆ ಕುರಿತು ಮಾತುಕತೆ ನಡೆಸ್ತುತೇ ನೆಂದರು.

Advertisement

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನವಾಗಿರುವ 17,154 ನೀರು ಶುದ್ಧೀ ಕರಣ ಘಟಕಗಳ ಪೈಕಿ 12602 ಘಟಕ ಕಾರ್ಯನಿರ್ವಹಿ ಸುತ್ತಿದ್ದು, 4552 ಶುದ್ದೀಕರಣ ಘಟಕಗಳು ತಾತ್ಕಾ ಲಿಕ ವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಟೆಂಡರ್‌ನಲ್ಲಿ ಘಟಕ ಗಳನ್ನು ಮುಂದಿನ 5 ವರ್ಷಗಳ ನಿರ್ವಹಣೆಗಾಗಿ ಹಸ್ತಾಂತರ ಮಾಡಲು ಕ್ರಮವಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next