ಇಂದ್ರದ್ಯುಮ್ನ ಎನ್ನುವವನು ಪಾಂಡ್ಯ ದೇಶದ ರಾಜ, ದೈವಭಕ್ತ. ಅವನಿಗೆ ವೈರಾಗ್ಯ ಬಂದು, ರಾಜ್ಯವನ್ನು ತ್ಯಜಿಸಿ ತಪಸ್ಸಿಗಾಗಿ ಮಲಯ ಪರ್ವತಕ್ಕೆ ಹೋದ. ಒಂದು ದಿನ ಅವನು ದೇವರ ಧ್ಯಾನದಲ್ಲಿ ಮೈಮರೆತಿದ್ದಾಗ ಅಗತ್ಸé ಋಷಿಗಳು ತಮ್ಮ ಶಿಷ್ಯರೊಂದಿಗೆ ಬಂದರು. ಆದರೆ ಇಂದ್ರದ್ಯುಮ್ನನಿಗೆ ಇದು ತಿಳಿಯಲಿಲ್ಲ. ಅವನು ಅಗಸ್ತ್ಯರನ್ನು ಸ್ವಾಗತಿಸಲಿಲ್ಲ. ಇದರಿಂದ ಕೋಪಗೊಂಡ ಅವರು, “ಇವನಿಗೆ ಆನೆಯಂತೆ ಸೊಕ್ಕು, ಆನೆಯಾಗಿ ಹುಟ್ಟಲಿ’ ಎಂದು ಶಾಪ ಕೊಟ್ಟರು. ಅದರಂತೆಯೇ ಇಂದ್ರದ್ಯುಮ್ನನು ಆನೆಯಾಗಿ ಹುಟ್ಟಿದ. ವರುಣದೇವನ ಸುಂದರ ಉದ್ಯಾನವನದಲ್ಲಿ ಆನೆಯಾಗಿ ಜನಿಸಿದ. ಅವನು ಅಲ್ಲಿ ಆನೆಗಳ ರಾಜ ಮಾತ್ರವಲ್ಲ, ಹುಲಿಸಿಂಹಗಳೂ ಅವನಿಗೆ ಹೆದರುತ್ತಿದ್ದವು. ಅವನು ಗಜೇಂದ್ರನಾಗಿ ಮೆರೆಯುತ್ತಿದ್ದ.
ಒಂದುಪ ಬೇಸಿಗೆಯಲ್ಲಿ ಒಂದು ದಿನ ಆನೆಯು ಬಾಯಾರಿ ಬಂದಿತು. ವನದಲ್ಲಿದ್ದ ಸರೋವರದಲ್ಲಿ ನೀರು ಕುಡಿದು ತೃಪ್ತಿ ಹೊಂದಿತು. ಅರದ ಜೊತೆ ಇತರೆ ಆನೆಗಳೂ ನೀರು ಕುಡಿದವು. ಈ ಆನೆಯು ಸರೋವರದಲ್ಲಿ ಇಳಿದು ಮೈಮೇಲೆ ನೀರನ್ನು ಸುರಿದುಕೊಂಡು ಸಂತೋಷಪಟ್ಟಿತು. ಆ ಹೊತ್ತಿಗೆ ಸರೋವರದಲ್ಲಿದ್ದ ದೊಡ್ಡ ಮೊಸಳೆಯೊಂದು ಆನೆಯ ಕಾಲನ್ನು ಹಿಡಿದು ನೀರಿನೊಳಕ್ಕೆ ಎಳೆಯಲಾರಂಭಿಸಿತು. ಆನೆಯು ಕೋಪದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಮೊಸಳೆಯ ಹಿಡಿತ ಬಲವಾಗಿತ್ತು. ಆನೆಯು ಎಷ್ಟು ಪ್ರಯತ್ನಪಟ್ಟರೂ ಬಿಡಿಸಿಕೊಳ್ಳಲು ಆಗಲಿಲ್ಲ. ಮಾತ್ರವಲ್ಲ, ನೀರಿನೊಳಕ್ಕೇ ಇಳಿಯ್ತುತಿತ್ತು. ಆನೆಗೆ ಗಾಬರಿಯಾಯಿತು, ದಿಕ್ಕು ತೋಚದಂತಾಯಿತು.
ಆ ಗಳಿಗೆಯಲ್ಲಿ ಆನೆಗೆ ತನ್ನ ಪೂರ್ವಜನ್ಮದ ನೆನಪಾಯಿತು. ತಾನು ಶ್ರೀವಿಷ್ಣುವಿನ ಭಕ್ತನಾಗಿದ್ದೆನೆಂದು ನೆನಪಾಯಿತು. ಆಗ ಅದಕ್ಕೆ ದುಃಖವಾಯಿತು. ಧೈರ್ಯವೂ ಬಂದಿತು.ವಿಷ್ಣುವನ್ನು ಸ್ಮರಿಸಿಕೊಂಡು ಸ್ತುತಿಸಿತು. ಆಗ ಶ್ರೀವಿಷ್ಣುವು ಪ್ರತ್ಯಕ್ಷನಾದ. ಅವನ ಚಕ್ರಾಯುಧವು ಮೊಸಳೆಯ ಬಾಯಿಯನ್ನು ಸೀಳಿತು. ಗಜೇಂದ್ರನಿಗೆ ಬಿಡುಗಡೆಯಾಯಿತು. ಮೊಸಳೆಯ ದೇಹದಿಂದ ಗಂಧರ್ವ ರಾಜನೊಬ್ಬ ಹೊರಕ್ಕೆ ಬಂದ. ಅವನು ಶಾಪದಿಂದ ಮೊಸಳೆಯಾಗಿದ್ದ, ಶ್ರೀ ಹರಿಗೆನಮಸ್ಕರಿಸಿ ತನ್ನ ಲೋಕಕ್ಕೆ ಹೊರಟುಹೋದ. ವಿ,¡ವು ಗಜೇಂದ್ರನನ್ನು ತನ್ನ ಲೋಕಕ್ಕೆ ಕರೆದೊಯ್ದ.
– ಎಲ್. ಎಸ್ ಶೇಷಗಿರಿ ರಾವ್
(“ಕಿರಿಯರ ಭಾಗವತ’ ಪುಸ್ತಕದಿಂದ)