Advertisement

ಘನತ್ಯಾಜ್ಯ ಕಸ ಸಾಗಿಸುವ ವಾಹನ ಚಾಲಕನಿಗೆ ಸಾರ್ವಜನಿಕರಿಂದ ಸನ್ಮಾನ

12:11 PM Apr 11, 2020 | keerthan |

ಗಂಗಾವತಿ: ಕೋವಿಡ್-19 ಸಂದರ್ಭಗಳಲ್ಲಿ ಜನರೆಲ್ಲ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ ನಗರಸಭೆ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯ ಮಾಡುವ ಪೌರಕಾರ್ಮಿಕರು ಮತ್ತು ಘನತ್ಯಾಜ್ಯ ಕಸ ಸಾಗಿಸುವ ವಾಹನಗಳ ಚಾಲಕರ ಸೇವೆ ಅನ್ಯನ್ಯವಾಗಿದೆ.

Advertisement

ಇಡೀ ಊರಿನ ಕಸವನ್ನು ಸ್ವಚ್ಛತೆ ಕಾರ್ಯ ಮಾಡುವ ಪೌರಕಾರ್ಮಿಕರು ಹಾಗು ಕಸ ಸಾಗಿಸುವ ವಾಹನಗಳ ಚಾಲಕರು ಅಶುದ್ದತೆಯ ವಾತಾವರಣದಲ್ಲಿ ಕೆಲಸ ಮಾಡುವುದು ಸರ್ವೆಸಾಮಾನ್ಯವಾಗಿದೆ. ಕೋವಿಡ್-19 ನಂತರ ವಿಷಮ ಸಂದರ್ಭದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಮತ್ತು ಕಸಸಾ ಗಿಸುವ ವಾಹನ ಚಾಲಕರ ಕಾರ್ಯ ಮೆಚ್ಚಿ‌ ನಗರದ ನ25 ವಾರ್ಡಿನ ಜನರು ಶನಿವಾರ ಸನ್ಮಾನಿಸಿದರು.

ಅವರಿಗೆ ಸ್ಯಾನಿಟೈಜರ್ ಹಾಗು ಮಾಸ್ಕ್ ವಿತರಿಸಿ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿ ಕಾರ್ಮಿಕರ ಜತೆ ಸೆಲ್ಫಿ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next