Advertisement

ಕಿಂಗ್‌ ಆಗಲು ಹೊರಟವರಿಗೆ ರಾಜಸ್ಥಾನದ ಸವಾಲು

12:54 AM Apr 12, 2021 | Team Udayavani |

ಮುಂಬಯಿ: ಈ ವರೆಗೆ ಐಪಿಎಲ್‌ ಚಾಂಪಿಯನ್‌ ಆಗದ ತಂಡಗಳಲ್ಲಿ ಒಂದಾದ ಪಂಜಾಬ್‌ ತನ್ನ ಹೆಸರನ್ನು ಬದಲಾಯಿಸಿ ರಾಜಸ್ಥಾನ್‌ ವಿರುದ್ಧ ಸೋಮವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಕೆ.ಎಲ್‌. ರಾಹುಲ್‌ ಪಡೆ ಈಗ “ಪಂಜಾಬ್‌ ಕಿಂಗ್ಸ್‌’ ಆಗಿದೆ. 14ನೇ ಆವೃತ್ತಿಯಲ್ಲಾದರೂ ಅದು ಐಪಿಎಲ್‌ ಕಿಂಗ್‌ ಆದೀತೇ ಎಂಬುದು ಅಭಿಮಾನಿಗಳ ಕುತೂಹಲ.

Advertisement

ಪಂಜಾಬ್‌ ಪಾಲಿಗೆ ಇದೊಂದು ಸೇಡಿನ ಪಂದ್ಯವೂ ಹೌದು. ಕಳೆದ ಆವೃತ್ತಿಯ ಎರಡೂ ಪಂದ್ಯಗಳಲ್ಲಿ ಪಂಜಾಬ್‌ ರಾಜಸ್ಥಾನ್‌ಗೆ ಶರಣಾಗಿತ್ತು. ಗೆಲುವಿನಂಚಿನಲ್ಲಿದ್ದ ಪಂಜಾಬ್‌ ರಾಹುಲ್‌ ತೇವಟಿಯಾ ಅವರ ಸ್ಫೋಟಕ ಬ್ಯಾಟಿಂಗಿಗೆ ತತ್ತರಿಸಿತ್ತು. ಇನ್ನೊಂದು ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌, ಸಂಜು ಕಂಟಕವಾಗಿ ಪರಿಣಮಿಸಿದ್ದರು. ಹೀಗಾಗಿ ಬೃಹತ್‌ ಮೊತ್ತವನ್ನು ಕೂಡ ರಾಹುಲ್‌ ಪಡೆಯಿಂದ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಪಂಜಾಬ್‌ ಬ್ಯಾಟಿಂಗ್‌ ಲೈನ್‌ಅಪ್‌ ಎಂದಿನಂತೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್‌. ರಾಹುಲ್‌, ಕ್ರಿಸ್‌ ಗೇಲ್‌, ಅಗರ್ವಾಲ್‌, ಪೂರಣ್‌ ಜತೆ ಟಿ20ಯ ನಂ.1 ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌, ಆಲ್‌ರೌಂಡರ್‌ಗಳಾದ ಫ್ಯಾಬಿಯನ್‌ ಅಲನ್‌, ಮೊಸೆಸ್‌ ಹೆನ್ರಿಕ್ಸ್‌, ಯುವ ಆಟಗಾರ ಶಾರೂಖ್‌ ಖಾನ್‌ ಬಲವಿದೆ.

ಸಂಜುಗೆ ಸವಾಲು
ರಾಜಸ್ಥಾನ್‌ ತಂಡದ ನೂತನ ನಾಯಕನಾಗಿರುವ ಸಂಜು ಸ್ಯಾಮ್ಸನ್‌ಗೆ ಈ ಬಾರಿಯ ಐಪಿಎಲ್‌ ದೊಡ್ಡ ಸವಾ ಲೊಡ್ಡಲಿದೆ. ಇಷ್ಟು ವರ್ಷ ನಾಯಕತ್ವದ ಒತ್ತಡವಿಲ್ಲದೆ ಬ್ಯಾಟ್‌ ಬೀಸುತ್ತಿದ್ದ ಸ್ಯಾಮ್ಸನ್‌ ಹೆಚ್ಚುವರಿ ಜವಾಬ್ದಾರಿಯ ನಡುವೆಯೂ ಬ್ಯಾಟಿಂಗ್‌ ಲಯವನ್ನು ಕಾಯ್ದುಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next