ಕೊಚ್ಚಿ : ಇಂಗ್ಲೆಂಡ್ ಆಟಗಾರ ಸ್ಯಾಮ್ ಕರ್ರನ್ ಅವರನ್ನು ಐಪಿಎಲ್ ಹರಾಜಿನ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಖರೀದಿ ಮಾಡಿರುವ ಹಿಂದಿನ ತಾರ್ಕಿಕತೆಯನ್ನು ಪಂಜಾಬ್ ಕಿಂಗ್ಸ್ ಸಹ ಮಾಲಕ ನೆಸ್ ವಾಡಿಯಾ ವಿವರಿಸಿದ್ದಾರೆ.
“ಇದು ಸರಿಯಾದ ಸಮತೋಲನವನ್ನು ಹೊಂದಿದೆ. ಸ್ಯಾಮ್ ಮರಳಿ ಬಂದಿರುವುದು ಸಂತೋಷಕರವಾಗಿದೆ. ಕೆಲವು ವರ್ಷಗಳ ಹಿಂದೆ ನಾವು ಅವರನ್ನು 7-7.5 ಕೋಟಿ ರೂ. ಗಳಿಗೆ ಬಿಡ್ಡಿಂಗ್ ಮಾಡಿದ್ದೇವು, ನಂತರ ಚೆನ್ನೈ ಅವರನ್ನು ಹೊಂದಿತು.ಈ ಅಣಕು ಹರಾಜುಗಳು ಯಾವಾಗಲೂ ಕ್ರಿಯಾತ್ಮಕವಾಗಿರುತ್ತವೆ. ಸ್ಯಾಮ್ 24 ವರ್ಷದ ವಿಶ್ವ ದರ್ಜೆಯ ಆಟಗಾರ, ಇದುವರೆಗೆ 140 ಪಂದ್ಯಗಳನ್ನು ಆಡಿದ್ದಾರೆ” ಎಂದರು.
ಕರ್ರನ್ ಮಧ್ಯಮ ವೇಗದ ಬೌಲಿಂಗ್, ಎಡಗೈ ಬ್ಯಾಟ್ಸ್ ಮ್ಯಾನ್ ಆಗಿ ಉತ್ತಮ ಆಲ್ ರೌಂಡರ್ ಆಗಿ ಆಡುತ್ತಾರೆ. 2022 ರ ಟಿ20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ಟೂರ್ನಮೆಂಟ್ ಆದ ಬೆನ್ನಲ್ಲೇ ಅವರಿಗಾಗಿ ಭಾರಿ ಬೇಡಿಕೆ ಕಂಡು ಬಂದಿತ್ತು.
2021 ರಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮಾರಿಸ್ ಅವರಿಗೆ ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂ.ನೀಡಿದ್ದು ಹಿಂದಿನ ಅತ್ಯುತ್ತಮ ದಾಖಲೆಯಾಗಿತ್ತು. ಕರ್ರನ್ ಅನ್ನು ಪಡೆಯಲು ಪಂಜಾಬ್ ಕಿಂಗ್ಸ್ 18.5 ಕೋಟಿ ರೂ. ನೀಡಿ ಆ ದಾಖಲೆಯನ್ನು ಮುರಿದಿದೆ.
ಕರ್ರನ್ 2018 ರಲ್ಲಿ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯಗಳನ್ನು ಆಡಿದ್ದರು. 2019 ರಲ್ಲಿ ಟಿ 20 ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು.