ಪುಣೆ: ಪುಣೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಉದ್ಘಾಟನ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನವು ಸೆ. 10 ರಂದು ಕೇತ್ಕರ್ ರೋಡ್ ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ನೆರವೇರಿತು.
ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಬಿ. ಶೆಟ್ಟಿ ಅವರು ತಮ್ಮ ದಿವ್ಯ ಹಸ್ತದಿಂದ ಯಕ್ಷಗಾನ ಮಂಡಳಿಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ, ಪಿಂಪ್ರಿ ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಡಿ. ಶೆಟ್ಟಿ, ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಹಾಗೂ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮದಂಗಲ್ಲು ಆನಂದ ಭಟ್, ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಮಟ್ಟಾರ್ ಉಪಸ್ಥಿತರಿದ್ದರು. ಈ ಸಂದರ್ಭ ಯಕ್ಷಗಾನ ರಂಗದ ಸಾಧಕ, ಹಿರಿಯ ಭಾಗವತ, ಸಾಹಿತಿ ಹಾಗೂ ಯಕ್ಷಗುರುಗಳಾದ ವಿಶ್ವವಿನೋದ ಬನಾರಿ ಇವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಪುಣೇರಿ ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸಮ್ಮಾನ ಪತ್ರಗಳನ್ನು ನೀಡಿ ಸಮ್ಮಾನಿಸಲಾಯಿತು. ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಗೌರವಿಸಲಾಯಿತು.
ವಾಸು ಕುಲಾಲ್ ವಿಟ್ಲ, ಮದಂಗಲ್ಲು ಅಶೋಕ್ ಭಟ್, ನಯನಾ ಶೆಟ್ಟಿ, ಕಲ್ಲಾಡಿ ಶ್ರೀಧರ ಶೆಟ್ಟಿ, ಸಂತೋಷ್ ಶೆಟ್ಟಿ ಎಣ್ಣೆಹೊಳೆ, ವಿಕೇಶ್ ರೈ ಶೇಣಿ, ಸುಕೇಶ್ ಶೆಟ್ಟಿ ಎಣ್ಣೆಹೊಳೆ, ಚೇತನ್ ಶೆಟ್ಟಿ ಎಲಿಯಾಳ, ಸುದರ್ಶನ್, ಯಾದವ ಬಂಗೇರ, ಸುಭಾಷ್ ರೈ ಕಾಟುಕುಕ್ಕೆ, ಯೋಗೀಶ್ ಗೌಡ ಬಂಟ್ವಾಳ ಅತಿಥಿಗಳನ್ನು ಸತ್ಕರಿಸಿದರು. ಮೊದಲಿಗೆ ವೇ|ಮೂ| ಮಧುಕರ್ ಭಟ್ ಸತ್ಯನಾರಾಯಣ ಮಹಾ ಪೂಜೆಯನ್ನು ನೆರವೇರಿಸಿ ಪ್ರಸಾದವನ್ನು ಸಂಘದ ಅಧ್ಯಕ್ಷರಿಗೆ ನೀಡಿದರು.
ಊರಿನ ಹೆಸರಾಂತ ಕಲಾವಿದರು ಹಾಗೂ ಮಂಡಳಿಯ ಕಲಾವಿದರ ಸಮ್ಮಿಲನದೊಂದಿಗೆ ರತಿ ಮನ್ಮಥ ಪರಿಣಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರಕಾಶ್ ಹೆಗ್ಡೆ ಮಟ್ಟಾರ್ ಸ್ವಾಗತಿಸಿದರು. ಸಂಘದ ಸದಸ್ಯೆ ವರ್ಷಾ ಯೋಗೇಶ್ ಗೌಡ ಸಮ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಲಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು.