ಪುಣೆ: ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ವತಿಯಿಂದ ಜು. 27 ರಂದು ಶಾಲಾ ಸಭಾಂಗಣದಲ್ಲಿ ಕಾರ್ಗಿಲ್ ದಿನಾಚರಣೆ ಹಾಗೂ ಗುರುಪೂರ್ಣಿಮೆ ಉತ್ಸವ ನಡೆಯಿತು.
ಅಧ್ಯಾಪಕರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಗುರುಪೂರ್ಣಿಮೆಯ ಶುಭಾಶಯಗಳನ್ನು ತಿಳಿಸುತ್ತಾ ಮನೆಯೇ ಮೊದಲ ಪಾಠ ಶಾಲೆಯಾಗಿದೆ. ತಂದೆ, ತಾಯಿ, ಹಿರಿಯರನ್ನೂ ಗುರುಗಳ ಸ್ಥಾನದಲ್ಲಿ ಗೌರವಿಸಬೇಕಾಗಿದೆ. ಅದೇ ರೀತಿ ವಿದ್ಯೆ ಕಲಿಸುವ ಗುರುಗಳಿಗೂ ವಿಧೇಯರಾಗಿದ್ದುಕೊಂಡು ಗೌರವಿಸಬೇಕಾಗಿದೆ ಎಂದು ನುಡಿದರು.
ವಿದ್ಯಾರ್ಥಿಗಳು ಶಿಕ್ಷಕರನ್ನು ಸತ್ಕರಿಸಿ ಗೌರವಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಯುವ ಬ್ರಿಗೇಡ್ ಸದಸ್ಯರು ಶಿಕ್ಷರನ್ನು ಗೌರವಿಸಿ ದರು. ಕಾರ್ಗಿಲ್ ದಿನಾಚರಣೆಯಂಗವಾಗಿ ಯುವ ಬ್ರಿಗೇಡ್ ಸದಸ್ಯರು ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧ ಹಾಗೂ ಸ್ವಾತಂತ್ರ್ಯವೀರ ಸಾವಕರì ಅವರ ಕಿರು ಸಾಕ್ಷÂಚಿತ್ರಗಳನ್ನು ಪ್ರದರ್ಶಿಸಿದರು. ಕಿರುಚಿತ್ರಗಳನ್ನಾಧರಿಸಿ ವಿದ್ಯಾರ್ಥಿಗಳಲ್ಲಿ ರಸಪ್ರಶ್ನೆಗಳನ್ನು ಕೇಳಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಯುವ ಬ್ರಿಗೇಡ್ ಸದಸ್ಯ ನಿಂಗಪ್ಪ ಗೌಡ ಯುವ ಬ್ರಿಗೇಡ್ ವತಿಯಿಂದ ನಡೆಸಲಾಗುವ ವಿವಿಧ ಸಾಮಾಜಿಕ ಚಟುವಟಿಕೆಗಳ ವಿವರಗಳನ್ನು ನೀಡಿದರು. ಯುವ ಬ್ರಿಗೇಡ್ ಸದಸ್ಯ ದಯಾನಂದ್ ಮಗದುಮ್ ಆವರು ವಿವೇಕಾನಂದರ ವಿಚಾರ ಧಾರೆಗಳನ್ನು ಪ್ರಸ್ತಾಪಿಸುತ್ತಾ, ಕಾರ್ಯಕ್ರಮದ ಆಯೋಜನೆಗೆ ಅವಕಾಶ ನೀಡಿರುವುದಕ್ಕೆ ವಂದಿಸಿದರು.
ಶಿವಾನಂದ ಬಿರಾದಾರ, ವಿರೂಪಾಕ್ಷ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಡಾ| ಶೋಭಾ ಜೋಶಿ, ಕನ್ನಡ ಮಾಧ್ಯಮದ ಶಿಕ್ಷಕ ವೃಂದ, ಶಿಕ್ಷಕೇತರ ಸಿಬಂದಿಗಳು, ಯುವ ಬ್ರಿಗೇಡ್ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಾಗಿ ಎನ್ನುವ ಪುಸ್ತಕವನ್ನು ವಿತರಿಸಲಾಯಿತು. ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು. ವಿದ್ಯಾರ್ಥಿಗಳು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.