Advertisement
ಪಂಪ್‌ವೆಲ್ ಜಂಕ್ಷನ್‌ನಲ್ಲಿ ನಿರ್ಮಾಣ ಗೊಂಡಿರುವ ಫ್ಲೆ$çಓವರ್ ಸೇತುವೆಯಿಂದ ಉಜೊjàಡಿ ಅಂಡರ್ ಪಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮತಟ್ಟಾಗಿಲ್ಲ, ಅದು ತಗ್ಗಾ ಗಿದೆ ಮಾತ್ರವಲ್ಲದೆ ಅಲ್ಲಿ ತಿರುವು ಕೂಡ ಇದೆ. ದಕ್ಷಿಣ ದಿಕ್ಕಿನ ಉಜೊjàಡಿಯಲ್ಲಿ ಮತ್ತು ಉತ್ತರ ದಿಕ್ಕಿನಲ್ಲಿ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಬಳಿಯಿಂದ ಆಚೆಗೆ ಎತ್ತರ ಪ್ರದೇಶ ಇದ್ದು, ಈ ಎತ್ತರದ ಭಾಗದಿಂದ ವಾಹನ ಗಳು ವೇಗವಾಗಿ ಬರುವುದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಕಾರಣ ಆಗುತ್ತದೆ. ಫ್ಲೈಓವರ್‌ನ್ನು ಕೊನೆಯ ಹಂತದಲ್ಲಿ ಅವಸರವಸರವಾಗಿ ನಿರ್ಮಾಣ ಮಾಡಿರುವುದರಿಂದ ಮಳೆಗಾಲದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗುತ್ತಿದೆ.
ಆದರೆ ಈಗ ಕೇಳಿ ಬರುತ್ತಿರುವ ಬಹುತೇಕ ಆರೋಪಗಳು ರಸ್ತೆ ಕಾಮಗಾರಿಯ ಸ್ವರೂಪದ ಕಡೆಗೆ ಬೆಟ್ಟು ಮಾಡುತ್ತಿವೆ. ಈ ರಸ್ತೆಯಲ್ಲಿ ದಿನ ನಿತ್ಯ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ಚಾಲಕರು ಕೂಡ ರಸ್ತೆಯ ತಾಂತ್ರಿಕ ಸ್ವರೂಪವನ್ನು ದೂರುತ್ತಿದ್ದಾರೆ.
Related Articles
ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಪಂಪ್ ವೆಲ್ ಫ್ಲೈಓವರ್ ಮೇಲೆ ಅಪಘಾತ ಸಂಭ ವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಸತ್ಯ ಶೋಧನ ತಂಡವು ಬುಧವಾರ (ಫೆ.12) ಅಪಾರಹ್ನ 3 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಫ್ಲೈಓವರ್ ಕಾಮಗಾರಿ ಕುರಿತಂತೆ ಪರಿಶೀಲನೆ ನಡೆಸಲಿದೆ. ಶಾಸಕ, ಮಾಜಿ ಸಚಿವ ಯು.ಟಿ. ಖಾದರ್, ವಿ.ಪ.ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ತಂಡದಲ್ಲಿರಲಿದ್ದಾರೆ. ಕಾಮಗಾರಿಯಲ್ಲಿ ಲೋಪ ದೋಷಗಳು ಕಂಡು ಬಂದರೆ ಅವುಗಳನ್ನು ಸರಿ ಪಡಿಸುವಂತೆ ಒತ್ತಾಯಿ ಸಲಾ ಗುವುದು. ಸರಿಪಡಿಸದಿದ್ದರೆ ಪ್ರತಿಭ ಟನೆ ಯನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಉದಯವಾಣಿಗೆ ತಿಳಿಸಿದ್ದಾರೆ.
Advertisement
ನಮಗೆ ಯಾವ ದೂರುಗಳೂ ಬಂದಿಲ್ಲಪಂಪ್ವೆಲ್ ಫ್ಲೈಓವರ್ ಸಮತಟ್ಟಿನಲ್ಲಿರದೆ ಏರು ತಗ್ಗುಗಳಿಂದ ಹಾಗೂ ತಿರುವಿನಿಂದ ಕೂಡಿದೆ ಎಂಬ ಆರೋಪಗಳು ನಮ್ಮ ಗಮನಕ್ಕೆ ಬಂದಿವೆ. ಆದರೆ ಈ ಬಗ್ಗೆ ಯಾರಿಂದಲೂ ದೂರುಗಳು ಬಂದಿಲ್ಲ. ಅಲ್ಲಿ ನಡೆದ ಅಪಘಾತದ ಕುರಿತಂತೆ ತನಿಖೆ ನಡೆಯುತ್ತಿದೆ.
- ಲಕ್ಷ್ಮೀ ಗಣೇಶ್, ಡಿಸಿಪಿ