Advertisement

ಪೋಲಿಯೋ ಲಸಿಕೆ: ದ.ಕ: ಶೇ. 95, ಉಡುಪಿ: ಶೇ. 96.06 ಸಾಧನೆ

01:31 AM Feb 28, 2022 | Team Udayavani |

ಮಂಗಳೂರು: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಲ್ಲಿ ರವಿವಾರ 0-5 ವರ್ಷದೊಳಗಿನ ಒಟ್ಟು ಶೇ. 95ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ.

Advertisement

ಬಂಟ್ವಾಳ ತಾಲೂಕಿನಲ್ಲಿ ಶೇ. 95.2, ಬೆಳ್ತಂಗಡಿಯಲ್ಲಿ ಶೇ. 104.7, ಮಂಗಳೂರಿನಲ್ಲಿ ಶೇ. 89, ಪುತ್ತೂರಿನಲ್ಲಿ ಶೇ. 101.1, ಸುಳ್ಯ ತಾಲೂಕಿನಲ್ಲಿ ಶೇ. 106.7 ಮಕ್ಕಳಿಗೆ ಲಸಿಕೆ ಹಾಕಲಾಯಿತು.

ಮೊದಲ ದಿನ 1,54,023 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಒಟ್ಟು 921 ಬೂತ್‌ಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ ಮೊದಲಾದೆಡೆ ಸಂಚಾರಿ ಬೂತ್‌ಗಳಲ್ಲಿ ಸೇರಿದಂತೆ 1,46,388 ಮಕ್ಕಳಿಗೆ ಲಸಿಕೆ ನೀಡಲಾಯಿತು.
ಟೋಲ್‌ಗೇಟ್‌ಗಳಲ್ಲಿಯೂ ವಾಹನಗಳನ್ನು ತಪಾಸಣೆ ಮಾಡಿ ಮಕ್ಕಳಿಗೆ ಲಸಿಕೆ ಹಾಕಿಕೊಳ್ಳುವಂತೆ ಆರೋಗ್ಯ ಕಾರ್ಯಕರ್ತೆಯರು ಮನವಿ ಮಾಡುತ್ತಿರುವುದು ಕಂಡುಬಂತು.

ಬಾಕಿಯಾದವರಿಗೆ ಮನೆಗೇ ಲಸಿಕೆ
ಬಿಟ್ಟು ಹೋದ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿ ಸೋಮವಾರ ಮತ್ತು ಮಂಗಳವಾರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ನಗರದಲ್ಲಿ ಸೋಮವಾರ, ಮಂಗಳವಾರ ಮತ್ತು ಬುಧವಾರ ಮನೆ ಮನೆಗೆ ಭೇಟಿ ಲಸಿಕೆ ನೀಡಲಾಗುತ್ತದೆ.

ಜಿಲ್ಲಾ ಮಟ್ಟದ ಲಸಿಕೀಕರಣ ಕಾರ್ಯಕ್ರಮಕ್ಕೆ ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಚಾಲನೆ ನೀಡಿದರು. ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌ ಮೊದಲಾದವರು ಪಾಲ್ಗೊಂಡಿದ್ದರು.

Advertisement

ಉಡುಪಿ: ಶೇ. 96.06 ಸಾಧನೆ
ಉಡುಪಿ: ಜಿಲ್ಲೆಯ ಒಟ್ಟು 662 ಬೂತ್‌ಗಳಲ್ಲಿ 73,995 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದ್ದು, 71,076 ಮಂದಿ ಲಸಿಕೆ ನೀಡುವ ಮೂಲಕ ಶೇ. 96.06 ಸಾಧನೆ ಮಾಡಲಾಗಿದೆ.

ಗ್ರಾಮಾಂತರ ಭಾಗದಲ್ಲಿ ಶೇ. 96.27 ಹಾಗೂ ನಗರ ಭಾಗದಲ್ಲಿ 95.02 ಮಂದಿ ಲಸಿಕೆ ಪಡೆದುಕೊಂಡರು. ಉಡುಪಿ ತಾಲೂಕಿನಲ್ಲಿ ಶೇ. 97.52, ಕುಂದಾಪುರದಲ್ಲಿ ಶೇ. 93.83, ಕಾರ್ಕಳದಲ್ಲಿ ಶೇ. 96.88 ಮಂದಿ ಲಸಿಕೆ ಪಡೆದುಕೊಂಡರು.

ಲಸಿಕೆ ಪಡೆಯಲು ಬಾಕಿ ಇರುವ ಮಕ್ಕಳನ್ನು ಗುರುತಿಸಲು ಆರೋಗ್ಯ ಕಾರ್ಯಕರ್ತೆಯರು ನಗರ ಪ್ರದೇಶದಲ್ಲಿ ಫೆಬ್ರವರಿ 28ರಿಂದ ಮಾರ್ಚ್‌ 2ರ ವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್‌ 1ರಂದು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಲಸಿಕೆ ಪಡೆಯದ ಅರ್ಹ ಮಕ್ಕಳ ಪೋಷಕರು ಸಮೀಪದ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ಕರೆದೊಯ್ದು ಲಸಿಕೆ ಕೊಡಿಸುವಂತೆ ಮತ್ತು ಮನೆ ಮನೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next