Advertisement

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಗುಮಾನಿ

11:33 PM Mar 04, 2020 | Lakshmi GovindaRaj |

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಸೋರಿಕೆಯ ಗುಮಾನಿ ದಟ್ಟವಾಗಿದೆ. ಬುಧವಾರ, ಪರೀಕ್ಷೆ ಆರಂಭವಾದ ಒಂದು ಗಂಟೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿಯಲ್ಲಿನ ಪರೀಕ್ಷಾ ಕೇಂದ್ರದ ಮೂಲಕ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ವಾಟ್ಸಪ್‌ನಲ್ಲಿ ಹರಿದಾಡಿದೆ.

Advertisement

ಆದರೆ, ಇದು ಸೋರಿಕೆಯಲ್ಲ. ಈ ಪ್ರಕರಣವನ್ನು ಪರೀಕ್ಷಾ ಅಕ್ರಮವೆಂದು ಪರಿಗಣಿಸಲಾಗಿದೆ. ಈ ಕುರಿತು ಕ್ರಿಮಿನಲ್‌ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಕನಗವಳ್ಳಿ ಮಾಹಿತಿ ನೀಡಿದರು.

ಸೋರಿಕೆಗೆ ಕಾರಣರಾದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದ್ದು, ಕೊಠಡಿ ಮೇಲ್ವಿಚಾರಕ ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಫೋಟೋ ಕ್ಲಿಕ್ಕಿಸಿ, ವಾಟ್ಸಪ್‌ನಲ್ಲಿ ಹರಿಬಿಟ್ಟ ಖಾಸಗಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆಂದು ಇಲಾಖೆ ಮಾಹಿತಿ ನೀಡಿದೆ.

ಎಂಟು ಮಂದಿ ಡಿಬಾರ್‌: ಇಂಡಿ ಪಟ್ಟಣದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಿದ್ದರ ಬೆನ್ನಲ್ಲೇ ಇದೇ ಕೇಂದ್ರದ ಮತ್ತೂಂದು ಕೊಠಡಿಯಲ್ಲಿ ಸಾಮೂಹಿಕ ನಕಲಿನಲ್ಲಿ ತೊಡಗಿದ್ದ ಏಳು ವಿದ್ಯಾರ್ಥಿ ಗಳನ್ನು ಡಿಬಾರ್‌ ಮಾಡಲಾಗಿದೆ.

ಗೈರು ಹಾಜರು: ಈ ಮಧ್ಯೆ, ಇತಿಹಾಸ ಪರೀಕ್ಷೆಗೆ ನೋಂ ದಾ ಯಿಸಿಕೊಂಡಿದ್ದ 2,76, 588 ವಿದ್ಯಾರ್ಥಿಗಳಲ್ಲಿ 4,682 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಭೌತಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 1,99,899 ವಿದ್ಯಾರ್ಥಿಗಳಲ್ಲಿ 3,963 ವಿದ್ಯಾರ್ಥಿಗಳು ಮತ್ತು ಮೂಲ ಗಣಿತಕ್ಕೆ ನೋಂದಾಯಿಸಿಕೊಂಡಿದ್ದ 8,002 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪಿಯು ಇಲಾಖೆ ತಿಳಿಸಿದೆ.

Advertisement

ಪರೀಕ್ಷಾ ಕೇಂದ್ರ ಪರಿಶೀಲಿಸಿದ ಸಚಿವರು!: ದ್ವಿತೀ ಯ ಪಿಯುಸಿ ಪರೀಕ್ಷಾ ನಿಮಿತ್ತ ಬೆಂಗಳೂ ರಿನ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಎಂಇಎಸ್‌ ಕಾಲೇಜಿನಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ  ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು.

ಕೊರೊನಾ ಭೀತಿ: ಕೊರೊನಾ ಕರಿ ನೆರಳು ಬುಧವಾರ ನಡೆದ ಪಿಯುಸಿ ವಾರ್ಷಿಕ ಪರೀಕ್ಷೆಯ ಮೇಲೂ ಬಿದ್ದಿದೆ. ವಿದ್ಯಾರ್ಥಿಗಳಲ್ಲಿ ಜ್ವರ, ಶೀತ ಕಂಡು
ಬಂದರೆ ಕಡ್ಡಾಯ ರಜಾ ನೀಡಲು ಈಗಾಗಲೇ ಇಲಾಖೆ ಯಿಂದ ಸೂಚನೆ ನೀಡಲಾಗಿದೆ. ಆದರೆ, ಪರೀಕ್ಷೆ ಯನ್ನು ಅನಿವಾರ್ಯವಾಗಿ ಬರೆಯಬೇಕಿರುವುದ ರಿಂದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆದರು. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ಔಷಧ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು.

ಉಪನ್ಯಾಸಕರ ಪ್ರತಿಭಟನೆ: ದ್ವಿತೀಯ ಪಿಯುಸಿ ಪರೀಕ್ಷೆ ಕೊಠಡಿಯಲ್ಲೂ ಉಪನ್ಯಾಕಸರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ ಮತ್ತು ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುರೇಶ್‌ ಕುಮಾರ್‌, ಈಗಾಗಲೇ ಉಪನ್ಯಾಸಕರ ಸಂಘ ಹಾಗೂ ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡರ ಜತೆ ಮಾತನಾಡಿದ್ದೇನೆ. ಬೇಡಿಕೆ ಈಡೇರಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ. ಮೌಲ್ಯಮಾಪನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಉಪನ್ಯಾಸಕ ರಿಗೂ ಬಹಿಷ್ಕಾರ ಮಾಡುವ ಆಸೆಯಿಲ್ಲ. ಮತ್ತೂಮ್ಮೆ ಅವರ ಜತೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next