ಪುತ್ತೂರು : ರಸ್ತೆ ಇರುವುದು ತನಗೊಬ್ಬನಿಗಲ್ಲ ಎಂಬ ಭಾವನೆ ಪ್ರತಿಯೊಬ್ಬನ ಮನಸ್ಸಿನಲ್ಲಿ ಮೂಡಿದರೆ, ಅಪಘಾತದ ಪ್ರಮಾಣ ಖಂಡಿತ ಕಡಿಮೆ ಆಗುತ್ತದೆ ಎಂದು ಡಿವೈಎಸ್ಪಿ ಶ್ರೀನಿವಾಸ ಹೇಳಿದರು.
ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಪುತ್ತೂರು ನಗರದಲ್ಲಿ ಸಂಚಾರ ದಟ್ಟಣೆ, ಸಂಚಾರ ಮಾಲಿನ್ಯ, ರಸ್ತೆ ಸುರಕ್ಷತೆ ಕುರಿತು ಒಂದು ವಾರ ಕಾಲ ನಡೆದ ಅಧ್ಯಯನ ಹಾಗೂ ಸಂವಾದ ಕಾರ್ಯಕ್ರಮದ ಸಮಾರೋಪ ಜು. 31ರಂದು ಇಲ್ಲಿನ ಬಂಟರ ಭವನದಲ್ಲಿ ನಡೆದಿದ್ದು, ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆಯಲ್ಲಿ ಸಾವಿರಾರು ಮಂದಿ ವಾಹನ ಚಲಾಯಿಸುತ್ತಾರೆ. ಆ ರಸ್ತೆ ಪ್ರತಿಯೊಬ್ಬರಿಗೂ ಸೇರಿದ್ದು. ಓರ್ವ ವ್ಯಕ್ತಿಗೆ ಸೀಮಿತ ಆಗಿಲ್ಲ. ಇಷ್ಟನ್ನು ವ್ಯಕ್ತಿಯೊಬ್ಬ ಅರ್ಥ ಮಾಡಿಕೊಂಡರೆ ಸಾಕು. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಸುಗಮ ಸಂಚಾರದ ಹಿನ್ನೆಲೆಯಲ್ಲಿ ನಗರ ಪೊಲೀಸರು ಹಮ್ಮಿಕೊಂಡ ಜನಪರ ಕಾರ್ಯಕ್ರಮಕ್ಕೆ, ಸಾರ್ವಜನಿಕರು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಪೊಲೀಸರು ಹಮ್ಮಿಕೊಂಡ ಸಂವಾದ, ಕೆಲ ಕಾರ್ಯಕ್ರಮಗಳ ಜಾರಿ ಯಿಂದ ಶೇ. 70ರಷ್ಟು ಸಮಸ್ಯೆ ನಿವಾರಣೆ ಯಾಗಿದೆ. ಇದೊಂದು ಉತ್ತಮ ಕಾರ್ಯ ಕ್ರಮ. ನಿಯಮ ಉಲ್ಲಂಘನೆ ಸರಿಪಡಿಸಿ ದರೆ ಅಪಘಾತ ಕಡಿಮೆ ಆಗುತ್ತದೆ. ಸುರ ಕ್ಷತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ಯಶಸ್ವಿಯಾಗಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ರಸ್ತೆ ವಿಸ್ತರಣೆ ಪ್ರಕ್ರಿಯೆಗೆ ಸ್ವಲ್ಪ ಹಿನ್ನಡೆ ಆಗಿದೆ. ಹಳೆ ಕಟ್ಟಡ ಹೋಗಿ, ಹೊಸ ಕಟ್ಟಡ ಬರುವಾಗಲೇ ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕಷ್ಟೇ.