Advertisement

ಇಂಗ್ಲೆಂಡ್‌ : ಇನ್ನೂ ತಗ್ಗದ ಸೋಂಕು

12:02 AM Apr 23, 2020 | Hari Prasad |

ಮಣಿಪಾಲ: ಇಂಗ್ಲೆಂಡ್‌ ಮತ್ತು ವೇಲ್ಸ್ ‌ನಲ್ಲಿ ಕೋವಿಡ್‌-19 ಸೋಂಕು ಸಮಸ್ಯೆ ಮುಂದುವರಿದಿದ್ದು, ಒಟ್ಟಾರೆ ಸಾವಿನ ಪ್ರಮಾಣದ ಪೈಕಿ ಶೇ.3/1 ಭಾಗದಷ್ಟು ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಅಂಕಿ-ಅಂಶ ಕೇಂದ್ರ (ಒಎನ್‌ಎಸ್‌) ಹೇಳಿದೆ.

Advertisement

ದೇಶದಲ್ಲಿನ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣದ ಕುರಿತು ಒಎನ್‌ಎಸ್‌ ಅಧ್ಯಯನ ಮಾಡಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಸಾವಿನ ಪ್ರಮಾಣದಲ್ಲಿ ಶೇ.12ರಷ್ಟು ಏರಿಕೆಯಾಗಿದೆ ಎಂದಿದೆ. ಏಪ್ರಿಲ್‌ 3ರಿಂದ 10ರವರೆಗೆ ಒಟ್ಟು 6,213 ಮಂದಿ ಸೋಂಕಿಗೆ ಬಲಿಯಾಗಿದ್ದು, ಆ ಹಿಂದಿನ ವಾರ 3,475 ಜನರು ಕೋವಿಡ್‌-19ನಿಂದ ಅಸುನೀಗಿದ್ದಾರೆ.

ಯುಕೆ ಸರಕಾರ ಕೇವಲ ಆಸ್ಪತ್ರೆಗಳಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆಗಳ ಸಂಗ್ರಹಣೆಯನ್ನು ಮಾತ್ರ ಮಾಡುತ್ತಿದ್ದು, ವೃದ್ಧಾಶ್ರಮ ಮತ್ತಿತ್ತರ ಖಾಸಗಿ ಸ್ಥಳಗಳಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ದಾಖಲಿಸುತ್ತಿಲ್ಲ. ಆದರೆ ಇದೀಗ ಒಎನ್‌ಎಸ್‌ ಈ ಪ್ರದೇಶಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದು, ಪ್ರತಿವಾರ ಸೋಂಕು ಪ್ರಸರಣ ಮತ್ತು ಮರಣ ಪ್ರಮಾಣವನ್ನು ತುಲನೆ ಮಾಡುತ್ತಿದೆ.

ವೃದ್ಧಾಶ್ರಮಗಳಲ್ಲಿ 4 ಪಟ್ಟು ಹೆಚ್ಚಳ
ಇಂಗ್ಲೆಂಡ್‌ ಮತ್ತು ವೇಲ್ಸ್‌ನ ವೃದ್ಧಾಶ್ರಮಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಪ್ರಮಾಣದಲ್ಲಿ ಹಿಂದಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದ್ದು, ಖಾಸಗಿ ವಾಸಸ್ಥಳಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದಿದೆ.

ಇನ್ನು ಲಂಡನ್‌ನ ಪರಿಸ್ಥಿತಿಯೂ ಚಿಂತಾಜನಕವಾಗಿದ್ದು, ಏಪ್ರಿಲ್‌ 2ನೇ ವಾರದ ವೇಳೆಗೆ ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಶೇ.54ರಷ್ಟು ಜನರು ಕೋವಿಡ್‌ -19ನಿಂದ ಮೃತಪಟ್ಟಿದ್ದು, ವೆಸ್ಟ್ ಮಿಡ್‌ಲ್ಯಾಂಡ್ಸ್ ನ ಇದರ ಪ್ರಮಾಣ ಶೇ.37 ರಷ್ಟಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next