Advertisement
ಸರ್ಕಾರ ಹೊಸ ಪಡಿತರ ಚೀಟಿ ಮಾಡಿಸಲು 2 ದಿನ ಮಾತ್ರ ಅವಕಾಶ ಮಾಡಿಕೊಟ್ಟಿದ್ದು, ಹೊಸ ಪಡಿತರ ಚೀಟಿ ಮಾಡಿಸಿಕೊಂಡ ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯ 84 ಗ್ರಾಮಗಳ ಜನರು ಪಡಿತರ ಇಲಾಖೆಗೆ ಬರುತ್ತಿದ್ದು, ಪಡಿತರ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ನಾವು ಹೊಸಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಹೊಸ ಪಡಿತರ ಚೀಟಿ ಪಡೆಯಲು ಕಛೇರಿಗೆ ಬಂದಿದ್ದೇವೆ, ಆದರೆ ಹೊಸ ಪಡಿತರ ಚೀಟಿ ಕೊಡಲು ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ಮಾಡಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಬಂಡ್ರಾಳ್ ಗ್ರಾಮದ ಗೋವಿಂದ ತಿಳಿಸಿದ್ದಾರೆ.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಹೇಳಿಕೆ ಪಡೆದು ನಂತರ ಪಡಿತರ ಚೀಟಿಯನ್ನು ವಿತರಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಆದರೆ ಇದರ ಬಗ್ಗೆ ಮಾಹಿತಿ ತಿಳಿಯದ ಸಾರ್ವಜನಿಕರು ನಮ್ಮ ಕಛೇರಿಗೆ ಬರುತ್ತಿದ್ದಾರೆ ಎಂದು ಆಹಾರ ಇಲಾಖೆಯ ಶಿರಸ್ತೆದಾರ ಟಿ.ಮಹೇಶ್ ತಿಳಿಸಿದ್ದಾರೆ.