Advertisement

ಪಿಯು ಫಲಿತಾಂಶ: ಬೈಲಹೊಂಗಲದ ಸಹನಾ ರಾಜ್ಯಕ್ಕೆ 3 ನೇ ರ‍್ಯಾಂಕ್

07:48 PM Apr 21, 2023 | Team Udayavani |

ಬೈಲಹೊಂಗಲ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಹನಾ ಉಳವಪ್ಪ ಕಡಕೋಳ ದ್ವೀತಿಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 98.5ಅಂಕ ಪಡೆದು ರಾಜ್ಯಕ್ಕೆ 3 ನೇ ರ‍್ಯಾಂಕ್ ಪಡೆದು ಬೈಲಹೊಂಗಲ ನಾಡಿಗೆ ಕೀರ್ತಿ ತಂದಿದ್ದಾಳೆ.

Advertisement

ಕನ್ನಡ 98, ಇಂಗ್ಲಿಷ್ 96, ಇತಿಹಾಸ 100, ಭೂಗೋಳ ಶಾಸ್ತ್ರ100, ಅರ್ಥಶಾಸ್ತ್ರ 99, ರಾಜ್ಯಶಾಸ್ತ್ರ 98 ಅಂಕ ಪಡೆದಿದ್ದಾಳೆ.
ತಾಲೂಕಿನ ಆನಿಗೋಳ ಗ್ರಾಮದ ಬಡ ಕೃಷಿ ಕುಟುಂಬದಿಂದ ಬಂದ ಇವಳು ತನ್ನ ಪ್ರಾಥಮಿಕ, ಪ್ರೌಡಶಿಕ್ಷಣವನ್ನು ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಪ್ರೌಡಶಾಲೆಯಲ್ಲಿ ವ್ಯಾಸಂಗ ಮುಗಿಸಿದಳು. ಬಾಲ್ಯದಿಂದಲೂ ಶಾಲೆಯಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಳು. ತಂದೆ ಉಳವಪ್ಪ ಇವರು ಕೃಷಿ ತೊಡಗಿಸಿಕೊಂಡಿದ್ದಾರೆ. ತಾಯಿ ಪುಷ್ಪಾ ಮನೆಗೆಲಸ ನಿರ್ವಹಿಸುತ್ತಾರೆ. ಸಹೋದರ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ.

ಸಹನಾ ಇವಳು ತನ್ನ ವಿದ್ಯಾರ್ಥಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹಾದಾಸೆ ಇಟ್ಟುಕೊಂಡು ಪ್ರತಿನಿತ್ಯ ಬೆಳಿಗ್ಗೆ ೪ರಿಂದ ೮ ವರೆಗೆ ತೊಡಗಿಸಿ ನಂತರ ತಂದೆ ತಾಯಂದಿರಿಗೆ ಮನೆಗೆಲಸಸದಲ್ಲಿ ಸಹಕಾರ ನೀಡುತ್ತಿದ್ದಳು. ನನ್ನ ಈ ಯಶಸ್ವಿಗೆ ತಂದೆ ತಾಯಿ, ಸಹೋದರ, ಉಪನ್ಯಾಸಕರು ಪ್ರೇರಣೆಯಾಗಿದೆ ಎಂದು ಉದಯವಾಣಿಗೆ ತಿಳಿಸಿದರು.

ರಾಜ್ಯಕ್ಕೆ ಮೂರನೇ ರ‍್ಯಾಂಕ ಪಡೆದ ಸುದ್ದಿ ತಿಳಿದ ತಾಯಿ ಪುಷ್ಪಾ ಆನಂದ ಭಾಷ್ಪ ಹೊರ ಹಾಕಿ ಮಾತನಾಡಿ, ಮಗಳು ಪ್ರಾಥಮಿಕ ಶಿಕ್ಷಣದಲ್ಲಿಯೇ ಪ್ರತಿಭಾವಂತೆಯಾಗಿದ್ದು ಇವಳ ಸಾಧನೆಗೆ ಕಾಲೇಜಿನ ಉಪನ್ಯಾಸಕರು ಪ್ರೇರಣೆಯಾಗಿದ್ದು ನಾವೂ ಕೂಡ ಅವಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೆವೆ. ಅವಳ ಸಹೋದರ ಕೂಡ ಎಲ್ಲ ಸಹಕಾರ ನೀಡುತ್ತಿದ್ದಾನೆ ಎಂದರು.

ವಿದ್ಯಾರ್ಥಿನಿ ಸಹನಾ ಪತ್ರಿಕೆಯೊಂದಿಗೆ ಮಾತನಾಡಿ, ನಾನು ಯುಪಿಎಸ್ಸಿ ಮಾಡಬೇಕೆಂದು ಮಹಾದಾಸೆ ಹೊಂದಿದ್ದೆನೆ. ನನ್ನ ಸಾಧನೆಗೆ ಪ್ರೇರಣೆ ನೀಡಿದ ಪಾಲಕರು, ಉಪನ್ಯಾಸಕರಿಗೆ ಕೃತಜ್ಞತೆಗಳನ್ನು ತಿಳಿಸಿದರು.

Advertisement

ವಿದ್ಯಾರ್ಥಿನಿಯ ಸಾಧನೆಗೆ ಉಪನ್ಯಾಸಕರು, ಅತಿಥಿ ಉಪನ್ಯಾಸಕ ವೃಂದ, ಪಾಲಕರು ಅತ್ಯಂತ ಹರ್ಷ ವ್ಯಕ್ತಪಡಿಸಿ ಸಿಹಿ ತಿನ್ನಿಸಿ ಸನ್ಮಾನಿಸಿದರು.
ಪ್ರಾಚಾರ್ಯ ಬಸವರಾಜ ಕುರಿ, ಉಪನ್ಯಾಸಕರಾದ ಬಸವರಾಜ ಪುರಾಣಿಕಮಠ, ಎಚ್.ಆರ್.ಪಾಟೀಲ, ಬಿ.ಎಂ.ಕೊಳವಿ, ಎಂ.ಆರ್.ಬಾಗೇವಾಡಿ, ಆರ್.ಬಿ.ಹುನಗುಂದ, ಬಿ.ಸಿ.ಅಡಕಿ, ಪ್ರೌಡಶಾಲಾ ಶಿಕ್ಷಕ ಎಂ.ಸಿ.ಅಗಸಗಿ, ಶಂಕರ ತುರಮರಿ ಹಾಗೂ ಸಿಬ್ಬಂದಿ ಇದ್ದರು.

ವಿದ್ಯಾರ್ಥಿನಿ ಸಾಧನೆಗೆ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಹಾಗೂ ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next