Advertisement
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಉತ್ತೀರ್ಣತೆ ಹಾಗೂ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೇ. 20ರಿಂದ 25 ಅಂಕಗಳ ವಸ್ತುನಿಷ್ಠ (ಆಬೆjಕ್ಟಿವ್) ಪ್ರಶ್ನೆಗಳನ್ನು ನೀಡಿ ಎಲ್ಲ ವಿಷಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪ್ರಕಟಿಸಿದೆ. ಇದು ಒಳ್ಳೆಯ ಕ್ರಮವೆಂಬ ಅಭಿಪ್ರಾಯ ಕೇಳಿಬಂದಿದ್ದರೂ ಎಲ್ಲ ವಿಷಯಗಳಿಗೆ ಸಮಾನ ಮಾದರಿ ಪ್ರಶ್ನೆ ನೀತಿ ಯಾಕೆ ಅನ್ವಯಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ.
Related Articles
ಪ್ರಶ್ನೆ ಪತ್ರಿಕೆ ಮಾದರಿಯನ್ನು ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಬದಲಾವಣೆ ಮಾಡುವುದರಿಂದ ವಿಜ್ಞಾನೇತರ ವಿಷಯಗಳ ವಿದ್ಯಾರ್ಥಿಗಳಿಗೆ ವಸ್ತುನಿಷ್ಠ ಪ್ರಶ್ನೆಗಳಿಗೆ ಪೂರ್ವ ತಯಾರಿಯಿಲ್ಲದೆ ಉತ್ತರಿಸುವುದು ಕಷ್ಟ ಸಾಧ್ಯ. ಹಾಗಾಗಿ ಈ ವಿಷಯಗಳಲ್ಲಿ ಇದಕ್ಕೆ ಅನುಗುಣವಾಗಿ “ಪ್ರಶ್ನಾಕೋಶ’ವನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿ ಅದರಿಂದಲೇ ಮುಂಬರುವ ವಾರ್ಷಿಕ ಪರೀಕ್ಷೆಗಳಿಗೆ ವಸ್ತುನಿಷ್ಠ ಪ್ರಶ್ನೆಗಳನ್ನು ನೀಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂಬುದು ಪ್ರಾಚಾರ್ಯರ ಅಭಿಪ್ರಾಯ.
Advertisement
ವಿದ್ಯಾರ್ಥಿಗಳ ಉತ್ತೀರ್ಣತೆ ಹಾಗೂ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪ್ರಕಟಿಸಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಹೆಜ್ಜೆ. ಆದರೆ ಕೆಲವು ವಿಷಯಗಳಲ್ಲಿ ಶೇ. 20 ಅಂಕಗಳನ್ನು, ಇನ್ನು ಕೆಲವು ವಿಷಯಗಳಲ್ಲಿ ಶೇ. 25 ವಸ್ತುನಿಷ್ಠ ಪ್ರಶ್ನೆಗಳನ್ನು ನೀಡಿರುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಬದಲಾವಣೆ ನಿರೀಕ್ಷಿಸಿ ಬೆಂಗಳೂರಿನ ಮಂಡಳಿಗೆ ಪತ್ರ ಬರೆಯಲಾಗಿದೆ.– ಗಂಗಾಧರ ಆಳ್ವ, ಅಧ್ಯಕ್ಷರು,ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘ