Advertisement
ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುವಾಗ ಆತನ ವರ್ತನೆ ನೋಡಿ ಪರಿಶೀಲಿಸಿದಾಗ ಆತ ಹುಡುಗಿಯರ ಫೋಟೋ ತೆಗೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸ್ ಠಾಣೆಯಲ್ಲಿ ಪೊಲೀಸರು ತನಿಖೆಗೆ ಒಳಪಡಿಸಿದಾಗ ಈತನ ಮೊಬೈಲ್ ನಲ್ಲಿ ಸುಮಾರು 150ಕ್ಕೂ ಹೆಚ್ಚು ಹುಡುಗಿಯರ ಫೋಟೋಗಳು ಇದ್ದವು ಎಂದು ಹೇಳಲಾಗಿದೆ. ಪೊಲೀಸರು ಈತನ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲು ಸಿದ್ಧತೆಯಲ್ಲಿರುವಾಗ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
Related Articles
Advertisement
ಈ ಸೈಕೋ ತೀರ್ಥಹಳ್ಳಿ ಮಾತ್ರವಲ್ಲದೆ ಹೊಸನಗರ, ಸಾಗರ, ಶಿವಮೊಗ್ಗ ಭಾಗದಲ್ಲೂ ಕೂಡ ಈ ತರಹದ ಚಟುವಟಿಕೆಗಳನ್ನು ಮಾಡಿದ್ದ ಎನ್ನಲಾಗಿದೆ.
ಫೋಟೋ ಬಗ್ಗೆ ಜಾಗ್ರತೆ ಇರಲಿಇತ್ತೀಚೆಗೆ ಹುಡುಗಿಯರ ಫೋಟೋಗಳನ್ನು ತೆಗೆದುಕೊಂಡು ಇತರೆ ಅಶ್ಲೀಲ ವೆಬ್ ಸೈಟ್ ಗಳಲ್ಲಿ ಹಾಕಿ ಹಣ ಮಾಡುವ ದಂಧೆ ಕೂಡ ಶುರುವಾಗಿದೆ. ಈ ಬಗ್ಗೆ ಹುಡುಗಿಯರು ಕೂಡ ಎಚ್ಚರವಹಿಸಬೇಕು.ಜೊತೆಗೆ ಇಸ್ಟಾಗ್ರಾಮ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕುವಾಗ ಅಥವಾ ಶೇರ್ ಮಾಡುವಾಗ ಗಮನವಹಿಸಬೇಕು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಪೋಲಿಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.